ಕೃಷಿಮಧುಗಿರಿ

ರೈತರು ಹೈನುಗಾರಿಕೆಯಿಂದ ಆರ್ಥಿಕವಾಗಿ ಸದೃಡರಾಗಲು ಸಾಧ್ಯ : ಶಾಸಕ ಎಂ.ವಿ. ವೀರಭದ್ರಯ್ಯ

ಮಧುಗಿರಿ : ಹೈನುಗಾರಿಕೆ ರೈತರ ಕೈ ಹಿಡಿದಿದ್ದು, ರೈತರು ಆರ್ಥಿಕವಾಗಿ ಸದೃಡರಾಗಲು ಹೈನುಗಾರಿಕೆ ಮಹತ್ವ ಪಾತ್ರ ವಹಿಸುತ್ತಿದೆ ಎಂದು ಶಾಸಕ ಎಂ.ವಿ. ವೀರಭದ್ರಯ್ಯ ತಿಳಿಸಿದರು.
ಪಟ್ಟಣದ ಮಾಲಿ ಮರಿಯಪ್ಪ ರಂಗಮಂದಿರದಲ್ಲಿ ಸೋಮವಾರ ತುಮಲ್ ವತಿಯಿಂದ ಹಮ್ಮಿಕೊಂಡಿದ್ದ ಹಾಲು ಉತ್ಪಾದಕ ಫಲಾನುಭವಿಗಳಿಗೆ ಚೆಕ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ರೈತರು ವ್ಯವಸಾಯದಲ್ಲಿ ವರ್ಷಕ್ಕೆ ಒಮ್ಮೆ ಮಾತ್ರ ಹಣ ನೊಡಿದರೆ ಹೈನುಗಾರಿಕೆಯಲ್ಲಿ ವಾರಕ್ಕೆ ಒಮ್ಮೆ ಬಟವಾಡೆಯಾಗುತ್ತಿದ್ದು, ಇದರಿಂದ ರೈತರು ಆರ್ಥಿಕವಾಗಿ ಸದೃಡರಾಗಲು ಸಹಕಾರಿಯಾಗಿದೆ. ಕೊಂಡವಾಡಿ ಚಂದ್ರಶೇಖರ್ ರವರು ಒಕ್ಕೂಟ ಮತ್ತು ರೈತರ ಬಗ್ಗೆ ಬಹಳಷ್ಟು ಕಾಳಜಿಯನ್ನು ಹೊಂದಿದ್ದು, ಒಕ್ಕೂಟದಲ್ಲಿ ಸಿಗುವ ಸವಲತ್ತುಗಳನ್ನು ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಸಿದರು.
ಕಳೆದ ನಾಲ್ಕೂವರೆ ವರ್ಷದಲ್ಲಿ ಕ್ಷೇತ್ರ ಕ್ಕೆ 1140 ಕೋಟಿ ಅನುದಾನ ತಂದು ಕೆಲಸ ಕಾರ್ಯ ಗಳನ್ನು ಮಾಡಿದ್ದೇನೆಂಬ ತೃಪ್ತಿ ನನಗಿದ್ದು, ತಾಲೂಕು ಬಹಳಷ್ಟು ಹಿಂದುಳಿದ ಪ್ರದೇಶವಾಗಿದ್ದು, ಬಹಳಷ್ಟು ಸಂದರ್ಭಗಳಲ್ಲಿ ವ್ಯವಸಾಯ ನಂಬಿ ಭೂಮಿಯಲ್ಲಿ ಬಿತ್ತಿದ ಬಿಜವೂ ವಾಪಸ್ಸು ಬಂದಿಲ್ಲ. ಮಧುಗಿರಿ ಜೆಲ್ಲೆ ಯಾಗಿ, ಏಕಶಿಲಾ ಬೆಟ್ಟಕ್ಕೆ ರೋಪ್ ವೇ, ಎತ್ತಿನಹೊಳೆ ಪೂರ್ಣಗೊಳ್ಳುವುದು ಮತ್ತು ಹೈಟೆಕ್ ಆಸ್ಪತ್ರೆ ಆಗಬೇಕಿದೆ ಎಂದರು.
ತುಮುಲ್ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ಮಾತನಾಡಿ ಯಾರು ಒಳ್ಳೆಯ ಕೆಲಸ ಮಾಡುತ್ತಾರೋ ಅವರನ್ನು ಗೌರವಿಸಬೇಕು. ಕಳೆದ ನಾಲ್ಕೂವರೆ ವರ್ಷದಲ್ಲಿ ಶಾಸಕ ವೀರಭದ್ರಯ್ಯ ನವರು ಹಾಲು ಉತ್ಪಾದಕ ಸಹಕಾರ ಸಂಘಗಳಿಗೆ ಬಹಳಷ್ಟು ಸಹಕಾರ ನೀಡಿದ್ದು, ನೂತನ ಕಟ್ಟಡ ನಿರ್ಮಿಸಲು ತಲಾ ಮೂರು ಲಕ್ಷ ಅನುದಾನ ನೀಡಿದ್ದು, ಕೆಲ ಸಂಘಗಳಿಗೆ 5 ಲಕ್ಷ ನೀಡಿದ ನಿದರ್ಶನಗಳೂ ಇವೆ. ಅವರ ಸಹಕಾರದಿಂದ ಜೆಲ್ಲೆಯಲ್ಲೇ ಅತೀ ಹೆಚ್ಚು ಹಾಲು ಉತ್ಪಾದಕ ಕಟ್ಟಡಗಳ ನಿರ್ಮಾಣ ಮಾಡಲಾಗಿದ್ದು,
ಅವರ ಕೆಲಸಗಳಿಗೆ ನಾವು ಗೌರವ ನೀಡಬೇಕು ಎಂದರು. ಇಂದು ತುಮುಲ್ ಒಕ್ಕೂಟವನ್ನು ನಂಬಿಕೊAಡು ಲಕ್ಷಾಂತರ ರೈತರು ಜೀವನ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಒಕ್ಕೂಟದಲ್ಲಿ ಬಡವಾಡೆ ನೀಡಲೂ ಸಹ ಹಣವಿರಲಿಲ್ಲ. ಆದರೆ ನಾನು ಅಧ್ಯಕ್ಷನಾದ ನಂತರ ತುಮುಲ್ ನ ಸಂಪೂರ್ಣ ಚಿತ್ರಣವನ್ನೇ ಬದಲಾಯಿಸಿದ್ದು, ರೈತರಿಗೆ ಏನೇನು ಬೇಕೋ ಅದೆಲ್ಲ ಸವಲತ್ತುಗಳ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ನನ್ನ ಅವಧಿಯಲ್ಲಿ ಅಕಾಲಿಕವಾಗಿ ಮೃತಪಟ್ಟ 296 ಜನರಿಗೆ ತಲಾ 50 ಸಾವಿರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ.
ಅಕಾಲಿಕವಾಗಿ ಮೃತಪಟ್ಟ 1560 ರಾಸುಗಳು ಸುಮಾರು 7.75 ಕೋಟಿ ಪರಿಹಾರ ನೀಡಲಾಗಿದೆ. 308 ವಿವಿಧ ಫಲಾನುಭವಿಗಳಿಗೆ 30 ಲಕ್ಷ, 336 ಜನರಿಗೆ 2.10 ಕೋಟಿ ಪರಿಹಾರ ನೀಡಲಾಗಿದ್ದು, ಒಟ್ಟು 14 ಕೋಟಿ ಹಣ ವಿತರಣೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಇಂದು ಅಕಾಲಿಕವಾಗಿ ಮೃತಪಟ್ಟ 43 ಜನ ಹಾಲು ಉತ್ಪಾದಕ ರೈತರಿಗೆ 21.5 ಲಕ್ಷ, 53 ಪಡ್ಡೆ ರಾಸುಗಳಿಗೆ 6 ಲಕ್ಷ, ಅಕಾಲಿಕವಾಗಿ ಮೃತಪಟ್ಟ 75 ಹಸುಗಳಿಗೆ 36 ಲಕ್ಷ, ಉನ್ನತ ಶಿಕ್ಷಣಕ್ಕೆ ಅನುಕೂಲಮಾಡಿಕೊಡುವ ಉದ್ದೇಶದಿಂದ 43 ವಿದ್ಯಾರ್ಥಿಗಳಿಗೆ ಚೆಕ್ ವಿತರೆಣೆ, 12 ಜನರಿಗೆ ವೈದ್ಯಕೀಯ ಭತ್ಯೆಗಾಗಿ 1 3 ಲಕ್ಷ ಬಣವೆ ಸುಟ್ಟ ಫಲಾನುಭವಿಗಳಿಗೆ 50 ಸಾವಿರ, ನೂತನ ಹಾಲು ಉತ್ಪಾದಕ ಕಟ್ಟಡಕ್ಕೆ 27 ಲಕ್ಷ ರೂಗಳ ಚೆಕ್ ವಿತರಣೆಗೆ ಕ್ರಮ ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಜಿ. ಪಂ ಮಾಜಿ ಸದಸ್ಯ ಕೆಂಚ ಮಾರಯ್ಯ, ತಾ.ಪಂ ಮಾಜಿ ಸದಸ್ಯ ದೊಡ್ಡಯ್ಯ, ಪಿ ಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಮೂಡ್ಲಪ್ಪ, ಚಿಕ್ಕ ಓಬಳ ರೆಡ್ಡಿ, ಪುರಸಭಾಧ್ಯಕ್ಷ ತಿಮ್ಮರಾಯಪ್ಪ, ಸದಸ್ಯರಾದ ಎಂ ಆರ್ ಜಗನ್ನಾಥ್, ಎಂಎಲ್ ಗಂಗರಾಜು, ಮುಖಂಡರುಗಳಾದ ಗುಂಡಗಲ್ ಶಿವಣ್ಣ, ಡಿವಿ ಹಳ್ಳಿ ತಿಮ್ಮಣ್ಣ, ತುಮುಲ್ ವಿಸ್ತರಣಾಧಿಕಾರಿಗಳಾದ ಶಂಕರ್ ನಾಗ್, ಗಿರೀಶ್, ಡಾ. ದೀಕ್ಷಿತ್, ಸಮಾಲೋಚಕರಾದ ಧರ್ಮವೀರ್, ದರ್ಶನ್, ಮಾರೇಗೌಡ, ವ್ಯವಸ್ಥಾಪಕ ರವಿಕಿರಣ್ ಇತರರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker