ತುಮಕೂರು : ಅಂಬೇಡ್ಕರ್ ಅವರ ಸಿದ್ಧಾಂತಗಳು ಜಗತ್ತಿನ ಮೌಲ್ಯಗಳನ್ನ ಕಾಪಾಡುತ್ತಿವೆ. ಅಂಬೇಡ್ಕರ್ ಕುರಿತಾದ ಸಂಶೋಧನೆಗಳು ಇನ್ನಷ್ಟು ಹೆಚ್ಚಾಗಬೇಕು, ಈ ರೀತಿಯ ಸಂಶೋಧನೆಗಳತ್ತ ಗಮನ ಹರಿಸುವುದು ಇಂದಿನ ಅಗತ್ಯವಾಗಿದೆ ಎಂದು ತುಮಕೂರು ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವಶಾಸ್ತç ವಿಭಾಗದ ಸಹ ಪ್ರಾಧ್ಯಾಪಕ ಡಾ.ಚಿಕ್ಕಣ್ಣ ಅಭಿಪ್ರಾಯ ಪಟ್ಟರು.
ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಡಾ. ಹೆಚ್ ಎಂ ಗಂಗಾಧರಯ್ಯ ಸಭಾಂಗಣದಲ್ಲಿ ನಡೆದ ಅಂಬೇಡ್ಕರ್ ಅವರ 134 ನೇ ಜನ್ಮ ದಿನದ ಹಂಗವಾಗಿ ಹಮ್ಮಿಕ್ಕೊಂಡಿದ್ದ ಡಾ.ಬಿ.ಆರ್ ರವರ ಜೀವನದಲ್ಲಿ ತತ್ವಗಳು ಮತ್ತು ಸದ್ಗುಣಗಳ ಕುರಿತು ಡಾ.ಹೆಚ್‌ಎಂ ಎಕ್ಸ್ಟ್ರಾಮುರಲ್ ಉಪನ್ಯಾಸ ಕಾರ್ಯಕ್ರಮದಲ್ಲಿ
ಮಾತನಾಡಿದ ಅವರು ಅಂಬೇಡ್ಕರ್ ಅವರ ಯಶಸ್ಸಿನ ಹಾದಿ ಸುಲಭವಾಗಿರಲಿಲ್ಲ, ಸಾಕಷ್ಟು ಕಷ್ಟಗಳನ್ನ ನೋಡಿದ ಅವರು ಯಾರು ಕೂಡ ನನ್ನ ರೀತಿಯಲ್ಲಿ ಕಷ್ಟ ಪಡಬಾರದು ಎಂದು ಭಾರತದ ಶ್ರೇಷ್ಠ ಗ್ರಂಥವಾದ ಸಂವಿಧಾನವನ್ನು ರಚಿಸಿದರು, ವಿದ್ಯಾರ್ಥಿಗಳಾಗಲಿ, ಪ್ರಾಧ್ಯಾಪಕರಾಗಲಿ ಜೀವನಲ್ಲಿ ಅಂಬೇಡ್ಕರ್ ಅವರ ಜೀವನದ ಮೌಲ್ಯಗಳನ್ನು ಅಳವಡಿಕೊಳ್ಳಬೇಕು, ಇಂದಿಗೂ ಕೂಡ ಅವರ ತತ್ವಗಳು ವಿದೇಶಗಳಿಗೂ ಮಾದರಿಯಾಗಿವೆ. ಯಾವುದೆ ದುಶ್ಚಟಗಳಿಲ್ಲದ ಸಂವಿಧಾನ ಶಿಲ್ಪಿಯ ಗುಣವನ್ನು ಇಂದಿನ ಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಆಗ ಮಾತ್ರ ಸದೃಡ ಭಾರತವನ್ನು ನಿರ್ಮಾಣ ಮಾಡಲು ಸಾದ್ಯ ಎಂದರು.
ಇನ್ನು ಕಾರ್ಯಕ್ರಮದಲ್ಲಿ ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಕೆ.ಬಿ ಲಿಂಗೇಗೌಡ, ರಿಜಿಸ್ಟಾರ್ ಡಾ. ಎಂ. ಝಡ್ ಕುರಿಯನ್, ಎಸ್‌ಎಸ್‌ಐಟಿಯ ಪ್ರಾಶುಪಾಲರಾದ ಡಾ. ಎಂ.ಎಸ್ ರವಿಪ್ರಕಾಶ್, ಐಕ್ಯುಎಸಿಯ ಪ್ರಧಾನ ಸಂಯೋಜಕರಾದ ಡಾ.ರವಿರಾಮ್, ಎಸ್‌ಸಿ ಎಸ್‌ಟಿ ಹಾಗು ಮೈನಾರಿಟಿ ಸೆಲ್‌ನ ಸಂಯೋಜಕರಾದ ಸಿ.ಆರ್ ಮೋಹನ್ ಕುಮಾರ್ ಸೇರಿದಂತೆ ಕಾಲೇಜಿನ ಎಲ್ಲಾ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು, ವಿಧ್ಯಾರ್ಥಿಗಳು ಮತ್ತು ಸಿಬ್ಬಂಧಿಗಳು ಭಾಗಿಯಾಗಿದ್ದರು.