ಕುಣಿಗಲ್ಬ್ರೇಕಿಂಗ್ ಸುದ್ದಿ

ಗೋ ಮಾಂಸ ಜಾಲದ ಅಡ್ಡೆಯ ಮೇಲೆ ಪೊಲೀಸರ ದಾಳಿ : ಬಸವ,15 ಹಸು,13 ಎಮ್ಮೆಗಳ ವಶ : ಇಬ್ಬರ ಬಂಧನ

ಕುಣಿಗಲ್ : ಪಾಪಿ ಕಟುಕರು ಹಾಲು ಕೊಡುವ ಹಸುವನ್ನು ಕೊಂದು ಮಾಂಸವನ್ನು ಪ್ರತ್ಯೇಕ ಪ್ಯಾಕೆಟ್ ಗಳಲ್ಲಿ ವಿಂಗಡಿಸಿ ಪ್ಯಾಕ್ ಮಾಡುವ ಸಂದರ್ಭದಲ್ಲಿ ಪೊಲೀಸರ ದಾಳಿಯಿಂದ ಹಸು ಕೊಂದ ಪಾತಕಿಗಳು ಪರಾರಿಯಾಗಿರುವ ಘಟನೆ
ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಜರುಗಿದೆ.
ತಾಲ್ಲೂಕಿನ ಅಮೃತೂರು ಹೋಬಳಿ ಬಿಸಿನೆಲೆ ಗ್ರಾಮದ ಸಮೀಪ ಅರಣ್ಯ ಪ್ರದೇಶದ ಕಚ್ಚ ನಾಯಕನ ಕಲ್ಲಿನ ಬಳಿ ಬಕ್ರೀದ್ ಹಬ್ಬ ಇರುವ ಹಿನ್ನೆಲೆಯಲ್ಲಿ ಸುಮಾರು 450 ಕೆಜಿ ತೂಕವಿದ್ದ ಸೀಮೆ ಹಸುವನ್ನು ಕತ್ತರಿಸಿ    ಮಾಂಸವನ್ನು ಗುಡ್ಡೆ ಹಾಕಿ 2ಕೆ ಜಿ ಯಂತೆ ಸುಮಾರು  21ಪ್ಲಾಸ್ಟಿಕ್ ಕವರ್ ನಲ್ಲಿ ತುಂಬಿ ಇಟ್ಟಿದ್ದರು ಇನ್ನೂ ಸುಮಾರು ಕೆಜಿ ಗೋ ಮಾಂಸದ ಗುಡ್ಡೆ ಸ್ಥಳದಲ್ಲಿಯೇ ಇತ್ತು.ಹೃದಯ ಮಿಡಿಯುವ ದೃಶ್ಯವನ್ನು ಕಂಡ ಗ್ರಾಮದ ಜನರು ಪೊಲೀಸರಿಗೆ  ಮಾಹಿತಿ ಕೊಟ್ಟ ಹಿನ್ನೆಲೆಯಲ್ಲಿ   ಅಮೃತೂರು ಪೋಲಿಸರು ಕೂಡಲೇ ಘಟನಾ  ಸ್ಥಳಕ್ಕೆ ತೆರಳಿ ಹಸುವನ್ನು ಕುಯ್ಯುತ್ತಿದ್ದ ವ್ಯಕ್ತಿಯನ್ನು ಬಂಧಿಸಲು ಮುಂದಾಗಿದ್ದಾರೆ. ಆದರೆ ಅದೃಷ್ಟವಶಾತ್ ಅವರು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾರೆ.
ಸಾರ್ವಜನಿಕರ ಮಾಹಿತಿ ಪ್ರಕಾರ  ಅದೇ ಬಿಸಿ ನೆಲೆ ಗ್ರಾಮದ ಹಸುಗಳ ದಲ್ಲಾಳಿ ಮಾಡುವ ವ್ಯಕ್ತಿಯಾದ ಮಂಜುನಾಥ್(42) ಮತ್ತು ಶಿವು(19) ಈ ಕೃತ್ಯಕ್ಕೆ ಕಾರಣವಿರಬಹುದೆಂದು ಹಾಗೂ ಗೋ ಮಾಂಸ ಸಾಗಿಸಲು ಬಂದಿದ್ದ ಟಾಟಾ ಎಸಿ ವಾಹನ ಚಾಲಕ ಬ್ಯಾಲದಕೆರೆ ರೇವಂತ್ ಎಂಬುವರನ್ನು ಅಮೃತೂರು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.
ಈ ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನೂ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.  ಘಟನಾ ಸ್ಥಳದಲ್ಲಿ  ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆ ಬೀರೂರಿನ ಇತಿಹಾಸ ಪ್ರಸಿದ್ಧ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಬಸವ ಕಳ್ಳತನವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು ಹಾಗೂ ಈ ಸಂಬಂಧ  ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ತಿಳಿದುಬಂದಿದ್ದು  ಈ ಬಸವ ಹಸುವನ್ನು ತುಂಡು ತುಂಡಾಗಿ  ಕತ್ತರಿಸಿರುವ  ಜಾಗದಲ್ಲಿ ಜೀವಂತವಾಗಿ ಸಿಕ್ಕಿದೆ ಪೊಲೀಸರು ಬರುವುದು ಸ್ವಲ್ಪ ತಡವಾಗಿದ್ದರೆ ಈ ಮುದ್ದಾದ ಬಸವ ಕೂಡ ಮಾಂಸದ ತುಂಡಾಗಿ ಕಟುಕರ ಕೈಗೆ ಸಿಲುಕಿ ನಲುಗಿ ಹೋಗುತ್ತಿತ್ತು  ಬಸವಣ್ಣ ಅದೃಷ್ಟವಶಾತ್ ಪಾರಾಗಿದೆ. ಹೇಗೋ ವಿಷಯ ತಿಳಿದ ಬೀರೂರಿನ ದೇವಾಲಯದವರು ಬಸವನನ್ನು ತಮ್ಮ ಗ್ರಾಮಕ್ಕೆ ಕರೆದೊಯ್ಯಲು ಬಂದಿದ್ದಾರೆ. ವಿಷಯ ತಿಳಿದ ಅಮೃತೂರು   ಪಶುವೈದ್ಯರಾದ ರಾಜಣ್ಣಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಹಸುವಿನ ಮಾಂಸ ಎಂದು ಖಾತ್ರಿ ಪಡಿಸಿದ್ದಾರೆ. ಘಟನೆ ನಡೆದ ಸ್ವಲ್ಪ ದೂರದಲ್ಲೇ ನಿರ್ಮಾಣ ಹಂತದಲ್ಲಿದ್ದ ಘನತ್ಯಾಜ್ಯ ವಿಲೇವಾರಿ ಘಟಕದ ಕಟ್ಟಡದಲ್ಲಿ ಇನ್ನೂ ಸುಮಾರು 15 ಹಸುಗಳು13 ಎಮ್ಮೆಗಳು  ಇದ್ದವು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ .ವಿಚಾರ ತಿಳಿದ  ಕುಣಿಗಲ್ ಪೋಲಿಸ್ ಠಾಣೆಯ ಡಿವೈಎಸ್ಪಿ ರಮೇಶ್ ಅಮೃತೂರು  ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಅರುಣ್ ಸಾಲುಂಕೆ ಸಬ್ ಇನ್ಸ್ ಪೆಕ್ಟರ್ ಮಂಗಳಗೌರಮ್ಮ ಮತ್ತಿತರರು ಘಟನಾ ಸ್ಥಳಕ್ಕೆ  ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.  .ಸರ್ಕಾರ ಗೋ ಹತ್ಯೆಗೆ   ಎಷ್ಟೆಲ್ಲ ಕಠಿಣ ಕಾನೂನು ಕ್ರಮಗಳನ್ನು ಕೈಗೊಂಡರು ಇಂತಹ ಘಟನೆಗಳನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ ಎಂದು  ಘಟನೆ ನೋಡಿದ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದದ್ದು ಕಂಡು ಬಂತು!
ವರದಿ: ರೇಣುಕಾಪ್ರಸಾದ್‌‌, ಕುಣಿಗಲ್

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker