ಮಧುಗಿರಿ : ಮುಂಬರುವ ಜಿಲ್ಲೆಯ ಲೋಕಸಭಾ ಅಭ್ಯರ್ಥಿಯ ಯಾರೆಂಬುದರ ಬಗ್ಗೆ ಹೈಕಮಾಂಡ್ ಪರಿಶೀಲಿಸಿ ಅದಷ್ಟೂ ಬೇಗಾ ತನ್ನ ನಿರ್ಧಾರ ಪ್ರಕಟಿಸಲಿದೆ ಎಂದೂ ಸಹಕಾರ ಸಚಿವರಾದ ಕೆ.ಎನ್ ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಗುಟ್ಟೆ ಗ್ರಾಮಕ್ಕೆ ಕ್ಷೇತ್ರದ ಶಾಸಕರು ಹಾಗೂ ಸಹಕಾರ ಸಚಿವರು ಭೇಟಿ ನೀಡಿ ಗ್ರಾಮಸ್ಥರಿಂದ ಆಹವಾಲು ಸ್ವೀಕರಿಸಿ ನಂತರ ಮಾತನಾಡಿದ ಅವರು,
ಪಕ್ಷದಿಂದ ಯಾರೇ ಅಭ್ಯರ್ಥಿಯಾದರೂ ಕಾಂಗ್ರೆಸ್ ಪಕ್ಷಕ್ಕೆ ತೊಂಬತ್ತೊಂಬತ್ತುರಷ್ಟು ಮತ ಹಾಕಬೇಕು
ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಮೇಲ್ನೋಟಕ್ಕೆ ಮುದ್ದಹನುಮೇಗೌಡರಿಗೆ ಲೋಕಾಸಭಾ ಟಿಕೆಟ್ ನೀಡುವ ಅವಕಾಶವಿದೆ,
ಪಕ್ಷದ ಹೈಕಮಾಂಡ್ ನವರು ಲೋಕಸಭೆಯ ಟಿಕೆಟ್ ನೀಡುವ ಬಗ್ಗೆ ತೀರ್ಮಾನ ಮಾಡಲಿದ್ದಾರೆ, ಕೊಡಿಗೇನಹಳ್ಳಿಯ ಹೋಬಳಿಯಲ್ಲಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾಗಿದ್ದ ನನಗೆ ನೀಡಿ ಆರ್ಶೀವದಿಸಿ ಸಚಿವರನ್ನಾಗಿಸಿದ್ದೀರಾ.
ಮುಂದೆ ನಾನು ಪಾರ್ಲಿಮೆಂಟ್ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಈ ಭಾಗದಲ್ಲಿ ಪ್ರಚಾರ ಮಾಡಲು ಬರುತ್ತೇನೆ. ಈಗಲೇ ಹೇಳ್ತಾ ಇದ್ದೀನಿ ನಾನು ಹೇಳಲಿಲ್ಲ ಅಂತ ನೀವು ತಿಳಿದುಕೊಳ್ಳಬಾರದು ನೀವೆಲ್ಲ ಕಾಂಗ್ರೆಸ್ ಗೆ ಮತ ನೀಡಬೇಕು. ನಿಮ್ಮ ಓಟಗಳನ್ನು ಹಾಕುವ ಮೂಲಕ ಎಲ್ಲರಿಗೂ ಗೌರವ ತರಬೇಕು.
ಒಟ್ಟಿನಲ್ಲಿ ಪಕ್ಷದಿಂದ ಯಾರೇ ಅಭ್ಯರ್ಥಿಯಾಗಲಿ ನೀವೆಲ್ಲ ಕಾಂಗ್ರೆಸ್ ಪಕ್ಷಕ್ಕೆ ತೊಂಬತ್ತೊಂಬತ್ತು ರಷ್ಟು ಮತ ಹಾಕಬೇಕು. ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಅನೇಕ ಯೋಜನೆಗಳನ್ನು ಮತ್ತು ಕಾರ್ಯಕ್ರಮಗಳನ್ನು ರಾಜ್ಯದ ಜನರಿಗೆ ಕೊಟ್ಟಿದ್ದಾರೆ.
ರಾಜ್ಯದಲ್ಲಿ ಯಾರೊಬ್ಬರೂ ಉಪವಾಸವಿಲ್ಲ. ಇಂತಹ ಪುಣ್ಯದ ಕೆಲಸ ಮಾಡಿರುವಂತವರಿಗೆ ಓಟು ಹಾಕುವುದರ ಮೂಲಕ ಗೌರವ ಕೊಡಬೇಕು ಮತ್ತು ಅವರ ಋಣ ತೀರಿಸಬೇಕು ಎಂದರು.
ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ವಾರದಲ್ಲಿ ಜನರ ಸಮಸ್ಯೆ ಬಗೆಹರಿಸಬೇಕು .ಗ್ರಾಮದಲ್ಲಿ ಅಗತ್ಯವಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದು ಶೀಘ್ರವೇ ಕಾಮಾಗಾರಿಗಳನ್ನು ಆರಂಭಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯ ಆರಂಭಕ್ಕೂ ಮುನ್ನಾ ಮಾರ್ಗ ಮಧ್ಯೆ ಇರುವ ದೊಡ್ಡಮಾಲೂರು ಕೆರೆ ಏರಿ ರಸ್ತೆಯ ಅವ್ಯವಸ್ಥೆಯನ್ನು ಖುದ್ದು ಪರಿಶೀಲಿಸಿ ಅದಷ್ಟೂ ಬೇಗ ಕೆರೆಯ ಏರಿಯದಲ್ಲಿ ಆಳವಡಿಸಲಾಗಿರುವ ವಿದ್ಯುತ್ ಬೀದಿ ದೀಪ ಹಾಗೂ ರಸ್ತೆ ದುರಸ್ಥಿಯು ಸೇರಿದಂತೆ ಅಕ್ಕ ಪಕ್ಕ ಬೆಳೆದಿರುವ ಗಿಡಗಳನ್ನು ತೆರವುಗೊಳಿಸಿ ಸಾರ್ವಜನಿಕರ ಹಾಗೂ ವಾಹನಗಳ ಸುಗುಮವಾಗಿ ಸಾಗುವುದಕ್ಕೆ ವ್ಯವಸ್ಥೆಯನ್ನು ಕಲ್ಪಿಸುವಂತೆ ಸೂಚಿಸಿದರು.
ಜಾಲಿಹಳ್ಳಿ ಗ್ರಾಮಕ್ಕೆ ಸಂಚರಿಸಲು ಒಳ್ಳೆಯ ರಸ್ತೆ ಇದೆಯೆಂದು ನಾನು ಭಾವಿಸಿದ್ದೆ. ಆದರೆ ಇಲ್ಲಿನ ಜನರು ಮೊನ್ನೆ ದಿನ ನನ್ನ ಗಮನಕ್ಕೆ ತಂದಾಗಲೆ ಆ ರಸ್ತೆಯ ದುಃಸ್ಥಿತಿಯ ಬಗ್ಗೆ ಗೊತ್ತಾಗಿದ್ದು ಹಾಗಾಗಿ ಶೀಘ್ರ ರಸ್ತೆ ಅಭಿವೃದ್ದಿಯಾಗಬೇಕು.
ಅದೇ ರೀತಿ ಗುಟ್ಟೆ ಗ್ರಾಮದಲ್ಲಿ ನೀರಿನ ಸಮಸ್ಯೆ ಜೊತೆಗೆ ಶುದ್ದ ನೀರಿನ ಘಟಕದ ಸಮಸ್ಯೆ ಇರುವ ಬಗ್ಗೆ ಜನರಿಂದ ಸಾಕಷ್ಟು ದೂರುಗಳು ಕೇಳಿ ಬಂದಿವೆ ನಾನು ಮತ್ತೆ ಇನ್ನೊಂದು ವಾರದಲ್ಲಿ ಇಲ್ಲಿಗೆ ಬರುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇವುಗಳನ್ನು ಸರಿಪಡಿಸಿರಬೇಕು , ಮನೆ ಮನೆಗೆ ಭೇಟಿ ನೀಡಿ ಮಾಶಾಸನ, ವೃದ್ದಪ್ಯ ವೇತನ, ಅಂಗವಿಕರ ವೇತನ, ರೇಷನ್ ಕಾರ್ಡ್, ಗೃಹಲಕ್ಷ್ಮಿ ಯೋಜನೆಯ ಹಣ ಬಾರದವರಿಗೆ ಹಾಗೂ ಇನ್ನಿತರ ಸಮಸ್ಯೆ ಗಳೆನ್ನು ಬಗೆಹರಿಸಿರಬೇಕೆಂದರು.
ಕೆಪಿಸಿಸಿ ಸದಸ್ಯ ಎಂ ಎಸ್ ಮಲ್ಲಿಕಾರ್ಜುನಯ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿನಾರಾಯಣರೆಡ್ಡಿ, ಕೆ.ಎಮ್.ಎಫ್. ನಿರ್ದೇಶಕ ಎಂ.ಪಿ. ಕಾಂತರಾಜು, ತಹಶೀಲ್ದಾರ್ ಸಿಬ್ಗತ್ ವುಲ್ಲಾ, ಲೋಕೇಪಯೋಗಿ ಇಲಾಖೆಯ ಇಇ ಸುರೇಶ್ ರೆಡ್ಡಿ, ಜಿಲ್ಲಾ ಪಂಚಾಯಿತಿ ಎಇಇ ಮಂಜುನಾಥ್, ಇಒ ಲಕ್ಷ್ಮಣ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ರಾಮಕೃಷ್ಣಪ್ಪ , ಪಿಡಿಒ ಗೋಪಾಲಕೃಷ್ಣ, ಮುಖಂಡರಾದ ಕೆ.ಟಿ. ತಿಮ್ಮಾರೆಡ್ಡಿ, ರಾಜಶೇಖರ್ ರೆಡ್ಡಿ, ಪಿ. ಕೃಷ್ಣಪ್ಪ , ಪ್ರೂಟ್ ಕೃಷ್ಣ , ಜೆ.ಡಿ ವೆಂಕಟೇಶ್ ಹಾಗೂ ಗ್ರಾಮಸ್ಥರು ಇದ್ದರು.