ಕೊರಟಗೆರೆಜಿಲ್ಲೆತುಮಕೂರುರಾಜಕೀಯರಾಜ್ಯ

ಸಂಸದರೇ ಕೊರಟಗೆರೆ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು..? : ಮೋದಿ ಹೆಸರಲ್ಲಿ ಬಂದು ಮತ ಕೇಳ್ತಿರಾ.. : ಡಾ.ಜಿ.ಪರಮೇಶ್ವರ್ ಪ್ರಶ್ನೆ

ಕೊರಟಗೆರೆ : ಸಾವಿರ ಜನ ಹೇಳಿದ್ರು ಬೆಂಗಳೂರಿಗೆ ಬನ್ನಿ ಅಂತಾ.. ನಾನು ಹಠಕ್ಕೆ ಬಿದ್ದೀದಿನಿ ಕೊರಟಗೆರೆ ಕ್ಷೇತ್ರದಿಂದ್ಲೇ ಸ್ಪರ್ಧೆ ಮಾಡ್ತೀನಿ.. 2023ರ ವಿಧಾನಸಭಾ ಚುನಾವಣೆಯು ನನಗೆ ಅಗ್ನಿಪರೀಕ್ಷೆ.. ಬನ್ರೋ  ಯಾರು ಬರ್ತೀರೋ ಬನ್ನಿ.. ಯಾವ ಮೀಸೆನೂ ಇಲ್ಲ ಗೀಸೆಗೂ ಹೆದರೋಲ್ಲ. ಸಂಸದರೇ ಕೊರಟಗೆರೆ ಕ್ಷೇತ್ರಕ್ಕೆ ನಿಮ್ಮ ಕಾಣಿಕೆ ಏನು ತೋರಿಸಿ ನಿಮ್ಮ ಲೆಕ್ಕಾ ಆಮೇಲೆ, ಚುನಾವಣೆ ಪ್ರಚಾರಕ್ಕೆ ಬನ್ನಿ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಗುಡುಗಿದರು.
ಕೊರಟಗೆರೆ ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಒಕ್ಕಲಿಗರ ಮುಖಂಡರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ತುಮಕೂರಿನ ಸಂಸದರೇ 5ವರ್ಷದ ನಿಮ್ಮ ಸಾಧನೆಯ ಅಂಕಿಅಂಶ ಜನತೆಗೆ ನೀಡಿ. ಪ್ರಧಾನಿ ಮೋದಿ ಹೆಸರಲ್ಲಿ ಮತ ಕೇಳೊದನ್ನ ಬೀಡಿ. ನಿಮ್ಮ ಅಭಿವೃದ್ದಿ ಹೆಸರಲ್ಲಿ ಚುನಾವಣೆಗೆ ಬನ್ನಿ. ಕೊರಟಗೆರೆ ಕ್ಷೇತ್ರಕ್ಕೆ ಎಷ್ಟು ಸಾರಿ ಬಂದಿದ್ದೀರಾ ಸಂಸದರೇ ನಮಗೆ ಲೆಕ್ಕಾ ಕೋಡಿ. ಭ್ರಷ್ಟಚಾರದ 40% ಕಮಿಷನ್ ಸರಕಾರ ಕರ್ನಾಟಕ ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ. 14ದಿನ ಮಾತ್ರ ಬೊಮ್ಮಾಯಿ ಆಡಳಿತ ಆಮೇಲೆ ನಿಮ್ಮ ಅಧಿಕಾರ ಮುಗಿಯುತ್ತೇ ಕಾಯುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊರಟಗೆರೆ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಕುರುವು ಏನಿದೆ ಎಂಬುದನ್ನ ಮೋದ್ಲು ತೋರಿಸಿ. ನಿಮ್ಮ ನಾಯಕರ ಅಭಿವೃದ್ದಿಯ ಸಾಕ್ಷಿ ಗುಡ್ಡೇಯನ್ನ ಜನತೆಗೆ ತಲುಪಿಸಿ. ಪಾಪ ಕುಮಾರಸ್ವಾಮಿ ಒಳ್ಳೆಯ ಮನುಷ್ಯ ಆಡಳಿತ ಬೇಕಲ್ಲ. ಕುಮಾರಸ್ವಾಮಿ ಮೊದ್ಲು ಕರ್ನಾಟಕದ 224ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಹಾಕ್ಲಿ. 25ಸೀಟು ಬಂದ್ರೇ ವ್ಯವಹಾರ ಮಾಡಿಕೊಳ್ಳೊಣ ಅಂತಾ ಹಗಲು ಕನಸು ಕಾಣ್ತೀದ್ದಾರೆ. ಜೆಡಿಎಸ್ ನಾಯಕರ ಸುಳ್ಳು ಭರವಸೆ ಮತ್ತು ಆಶ್ವಾಸನೆಯನ್ನ ಯಾರು ನಂಬಬೇಡಿ ಎಂದು ಮನವಿ ಮಾಡಿದರು.
ಕರ್ನಾಟಕ ರಾಜ್ಯ ಕೌಶಲ್ಯ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ ಡಾ.ಜಿ.ಪರಮೇಶ್ವರ್ 35ವರ್ಷದ ರಾಜಕೀಯ ಜೀವನಕ್ಕೆ ಒಕ್ಕಲಿಗ ಸಮಾಜವು ಶ್ರೀರಕ್ಷೆಯಾಗಿದೆ. ಒಕ್ಕಲಿಗ ಸಮಾಜ ನಿಮ್ಮ ಪರವಾಗಿದೆ ಒಮ್ಮೆ ಮಾತು ಕೊಟ್ರೇ ನಮ್ಮ ಸಮಾಜ ಯಾವತ್ತೂ ತಪ್ಪೋದಿಲ್ಲ. ನಾವು ನಿಮ್ಮ ಪರವಾಗಿ ಕೊರಟಗೆರೆ ಕ್ಷೇತ್ರದಲ್ಲಿ ಮತಯಾಚನೆ ಮಾಡ್ತೀವಿ. ನೀವು ವಿಧಾನಸೌಧಾ ನೋಡಿಕೊಳ್ಳಿ ಎಂಬ ಭರವಸೆಯನ್ನು ನಾವೇಲ್ಲರೂ ನೀಡಬೇಕಿದೆ ಎಂದು ಮನವಿ ಮಾಡಿದರು.
ಕೋಳಾಲ ಮಾಜಿ ಜಿಪಂ ಸದಸ್ಯ ಪಿ.ಎನ್.ಕೃಷ್ಣಮೂರ್ತಿ ಮಾತನಾಡಿ ಮಾಜಿ ಶಾಸಕ ಸುಧಾಕರಲಾಲ್ ಸಾಧನೆ ಶೂನ್ಯ. ಅವರ ಹೆಸರನ್ನ ಯಾಕೆ ಮತ್ತೇ ಮತ್ತೇ ತರುತ್ತೀರಾ. ಬಿಜೆಪಿ ಅಭ್ಯರ್ಥಿಯ ಬಿಬಿಎಂಪಿ ಹಗರಣದ ತನಿಖೆ ಇನ್ನೂ ಬಾಕಿ ಇದೆ. 2023ಕ್ಕೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೇ. ಕೊರಟಗೆರೆ ಕ್ಷೇತ್ರದಿಂದ ಪರಮೇಶ್ವರ್ ಗೆದ್ದರೇ ಮಾತ್ರ ನಮಗೆಲ್ಲ ಬೆಲೆ ಬರುತ್ತೇ. ನಾವೇಲ್ಲರೂ ನಿಮ್ಮ ಜೊತೆ ಇದ್ದೇವೆ ಎಂಬುದನ್ನ ತೋರಿಸೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯ ಪ್ರಸನ್ನಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆಶಂಕರ್, ಅಶ್ವತ್ಥನಾರಾಯಣ್, ಮಹಿಳಾಧ್ಯಕ್ಷೆ ಜಯಮ್ಮ, ಯುವಧ್ಯಕ್ಷ ವಿನಯ್, ಮಾಜಿ ಜಿಪಂ ಸದಸ್ಯ ಗಂಗಾಧರಪ್ಪ, ತುಮಲ್ ನಿರ್ದೇಶಕ ಈಶ್ವರಯ್ಯ, ಮಾಜಿ ತಾಪಂ ಅಧ್ಯಕ್ಷ ಕೆಂಪರಾಮಯ್ಯ, ಮಾಜಿ ಸದಸ್ಯ ರವಿಕುಮಾರ್, ಮುಖಂಡರಾದ ಗಟ್ಲಹಳ್ಳಿ ಕುಮಾರ್, ಕಾಮರಾಜು, ವೆಂಕಟೇಶ್, ವೆಂಕಟೇಶಮೂರ್ತಿ, ಕಾಕಿಮಲ್ಲಣ್ಣ ಸೇರಿದಂತೆ ಇತರರು ಇದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker