
ಕುಣಿಗಲ್ : ತಾಲೂಕಿನ ಹುಲಿಯೂರುದುರ್ಗ ಪೊಲೀಸ್ ಠಾಣೆಯ ಸಬ್ಇನ್ಸ್ ಪೆಕ್ಟರ್ ಸುನಿಲ್ ಕುಮಾರ್ ಕರ್ತವ್ಯ ಲೋಪ ಎಸೆಗಿದ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ವಿ ಅಶೋಕ್ ರವರು ಅಮಾನತುಪಡಿಸಿ ಆದೇಶಿಸಿದ್ದಾರೆ.
ಸುನಿಲ್ ಕುಮಾರ್ ಸಸ್ಪೆಂಡ್ ಆಗಲು ಕಾರಣ ಹುಲಿಯೂರ ದುರ್ಗದ ಕಂಪ್ಲಾಪುರ ಬಳಿ ಡಿಸೆಂಬರ್ 30/ 2023 ರಂದು ರಾತ್ರಿ ವೇಳೆ ಬೆಂಗಳೂರಿನ ರೌಡಿಶೀಟರ್ ಸುರೇಶ್ ಅಲಿಯಾಸ್ ಕ್ಯಾಪ್ಟನ್ ಸೂರಿಯನ್ನು ಮಾರಕಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು ಆರೋಪಿಗಳಾದ ಆಟೋರಾಮು, ನಾಗೇಶ್, ಚಂದ್ರ,ಆನಂದ್, ಸೇರಿದಂತೆ ಇತರರು ತಾವೇ ಖುದ್ದು ಶರಣಾಗಿದ್ದರು . ಈ ಪ್ರಕರಣವನ್ನು ಹುಲಿಯೂರುದುರ್ಗ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ಸರಿಯಾಗಿ ನಿರ್ವಹಣೆ ಮಾಡದೆ ಕರ್ತವ್ಯ ಲೋಪ ಎಸಗಿದ ಹಿನ್ನೆಲೆ ಹಾಗೂ ಇನ್ನಿತರೆ ಕಾರಣಗಳಿಂದ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ವಿ ಅಶೋಕ್ ರವರು ಸಬ್ ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ಅವರನ್ನು ಬುಧವಾರ ಅಮಾನತುಗೊಳಿಸಿ ಆದೇಶಿಸಿದ್ದಾರೆ. ಈ ಹಿಂದೆ ಎಸ್ಪಿ ಅವರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಮೂರು ಮಂದಿ ಸಬ್ ಇನ್ಸ್ಪೆಕ್ಟರ್ ಇಬ್ಬರು ಎ ಎಸ್ ಐ ಗಳು ಕೆಲವು ಕಾನ್ಸ್ಟೇಬಲ್‌ಗಳನ್ನು ಕರ್ತವ್ಯ ಲೋಪದ ಮೇಲೆ ಅಮಾನತುಗೊಳಿಸಿದ್ದರು.
ವರದಿ : ರೇಣುಕಾ ಪ್ರಸಾದ್