ಕುಣಿಗಲ್ ನ ಹೇರೂರು ಬಳಿ ಮಾರಾಕಾಸ್ತ್ರದಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಕೊಲೆ
ಕುಣಿಗಲ್ : ಸುಮಾರು 50 ವರ್ಷದ ವ್ಯಕ್ತಿ ಒಬ್ಬನನ್ನು ಯಾರೋ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಜರುಗಿದೆ.
ತಾಲೂಕಿನ ಕಸಬಾ ಹೋಬಳಿ ಹೇರೂರು ಸಮೀಪವಿರುವ ಕುಳ್ಳ ನಂಜಯ್ಯನಪಾಳ್ಯ ಗ್ರಾಮದ ಮರಿಯಪ್ಪ (50) ಕೊಲೆಯಾದ ದುರ್ದೈವಿ ಈತ ಶುಕ್ರವಾರ ರಾತ್ರಿ ರಸ್ತೆಯಲ್ಲಿ ತನ್ನ ದ್ವಿಚಕ್ರ ವಾಹನದಲ್ಲಿ ತನ್ನ ಗ್ರಾಮಕ್ಕೆ ಹೋಗುವ ಮಾರ್ಗ ಮಧ್ಯೆ ಸುಮಾರು ಈತನ ಮನೆ 500 ಮೀಟರ್ ದೂರದಲ್ಲಿ ದುಷ್ಕರ್ಮಿಗಳು ಓಡಾಡಿಸಿಕೊಂಡು ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಕೊಲೆಯನ್ನು ರಸ್ತೆಯ ಸುಮಾರು 30 ಮೀಟರ್ ದೂರದ ಜಮೀನಿನಲ್ಲಿ ಬಲಗೈ ಹಸ್ತವನ್ನು ಕತ್ತರಿಸಿ, ತಲೆಯನ್ನು ಜಜ್ಜಿದ ಹಿನ್ನೆಲೆಯಲ್ಲಿ ತಲೆಯ ಚುಪೆ ಕಿತ್ತು ಬಂದಿದೆ ಈತ ತೆರಳುತ್ತಿದ್ದ ದ್ವಿಚಕ್ರ ವಾಹನ ರಸ್ತೆಯಲ್ಲಿ ಬಿದ್ದಿದೆ ಒಟ್ಟಾರೆ ಕೊಲೆಯನ್ನು ದುಷ್ಕರ್ಮಿಗಳು ಭೀಕರವಾಗಿ ಮಾಡಿದ್ದಾರೆ ಕೊಲೆಯಾದ ಮರಿಯಪ್ಪನ ಅಣ್ಣ ಅನುಮಾನ ವ್ಯಕ್ತಪಡಿಸಿದ ಗ್ರಾಮದ ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಮೃತ ದುರ್ದೇವಿ ಮರಿಯಪ್ಪ ನಾಲ್ಕು ಜನ ಹೆಣ್ಣು ಮಕ್ಕಳನ್ನು ಅಗಲಿದ್ದಾರೆ ಇವರು ಶಿಕ್ಷಣ ಇಲಾಖೆಯಲ್ಲಿ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು ಎಂದು ಹೆಸರು ಹೇಳಲು ಇಚ್ಚಿಸದ ಕೆಲವು ಸ್ಥಳೀಯ ಸಾರ್ವಜನಿಕರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಸ್ಥಳಕ್ಕೆ ಸರ್ಕಲ್ ಇನ್ಸ್ಪ್‌ಪೆಕ್ಟರ್ ಹಾಗೂ ಡಿವೈಎಸ್ಫಿ ಬೇಟಿ ನೀಡಿ ತನಿಖೆ ಕೈಗೊಂಡಿದ್ದು, ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ತನಿಖೆಯಿಂದ ಸತ್ಯ ಸತ್ಯತೆ ಹೊರ ಬರಬೇಕಾಗಿದೆ..?