ಕೊರಟಗೆರೆಜಿಲ್ಲೆತುಮಕೂರು

ಕಾಂಗ್ರೇಸ್ ಪಕ್ಷ ಮಾತು ಕೋಟ್ರೇ ತಪ್ಪೋದಿಲ್ಲ.. : ಗೃಹಸಚಿವ ಡಾ.ಜಿ.ಪರಮೇಶ್ವರ

ಸ್ವಕ್ಷೇತ್ರದಲ್ಲಿ ಗೃಹ ಸಚಿವರಿಂದ ಮತಬೇಟೆ.. 6 ಹೋಬಳಿಯ 40 ಗ್ರಾಮದಲ್ಲಿ ಮಿಂಚಿನ ಸಂಚಾರ

ಕೊರಟಗೆರೆ : ಬಿಜೆಪಿ ಮತ್ತೇ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸ್ತಾರೇ. ಬಿಜೆಪಿ ನಾಯಕರೇ ಹೇಳ್ತಾರೇ ಸಂವಿಧಾನ ಬದಲಾಗುತ್ತೆ ಅಂತ. ನಮ್ಮ ದೇಶದ ಪ್ರಜಾಪ್ರಭುತ್ವ ಉಳಿಸಬೇಕಾ ಅಥವಾ ಅಳಿಸಬೇಕಾ ಎಂದು ನೀವೇ ಯೋಚಿಸಿ. ಜನರಿಂದ ಆರಿಸಿದ ಸಿಎಂರನ್ನು ಜೈಲಿಗೆ ಕಳಿಸುತ್ತಾರೆ ಇದನ್ನ ಪ್ರಜಾಪ್ರಭುತ್ವ ಅನ್ನುತ್ತೀರಾ ಎಂದು ಪ್ರಧಾನಿ ನರೇಂದ್ರಮೋದಿ ವಿರುದ್ದ ಗೃಹಸಚಿವ ಡಾ.ಜಿ.ಪರಮೇಶ್ವರ ಗುಡುಗಿದರು.

ಕೊರಟಗೆರೆ ವಿಧಾನಸಭಾ ಕ್ಷೇತ್ರದ ಪುರವಾರ, ಕಸಬಾ, ಹೊಳವನಹಳ್ಳಿ, ಕೋಳಾಲ, ತೋವಿನಕೆರೆ ಮತ್ತು ಕೋರಾ ಹೋಬಳಿ ವ್ಯಾಪ್ತಿಯ 40 ಕ್ಕೂ ಅಧಿಕ ಗ್ರಾಮಗಳಲ್ಲಿ ಕಾಂಗ್ರೇಸ್ ಪಕ್ಷದಿಂದ ಗುರುವಾರ ಏರ್ಪಡಿಸಲಾಗಿದ್ದ ಚುನಾವಣಾ ಪ್ರಚಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಾಜಿ ಪ್ರಧಾನಿ ದೇವೇಗೌಡರು ಹೇಳ್ತಾರೇ ಎಲೆಕ್ಷಣ್ ಆದ ತಕ್ಷಣವೇ ಸರಕಾರ ಬಿದ್ದು ಹೋಗುತ್ತದೆ ಎಂದು, ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಕಾದುಕೊಂಡು ಕುಳಿತುಕೊಳ್ಳಿ. ಕೇಂದ್ರ ಸರಕಾರದಿಂದ ಬಡರೈತರ ಸಾಲಮನ್ನಾ ಆಗೋದಿಲ್ಲ ಆದರೇ ಹಣವಂತರ ಸಾವಿರಾರು ಕೋಟಿ ರಾತ್ರೋರಾತ್ರಿ ಮನ್ನಾ ಆಗುತ್ತೇ. ನಮ್ಮ ದೇಶದ ಇಡೀ ಸಂಪತ್ತು ಈಗಾ ಅಂಬಾನಿ ಮತ್ತು ಅದಾಯಿ ಕೈಯಲ್ಲಿದೆ ಎಂದು ಹೇಳಿದರು.

ತುಮಕೂರು ಲೋಕಾಸಭಾ ಅಭ್ಯರ್ಥಿ ಮುದ್ದಹನುಮೇಗೌಡ ಮಾತನಾಡಿ ನನ್ನ ಅವಧಿಯಲ್ಲಿ ತುಮಕೂರು ಜಿಲ್ಲೆಗೆ ಪಾಸ್‌ಪೋರ್ಟ್ ಕಚೇರಿ ಬಂದಿದೆ. ವಿಶ್ವ ಭೂಪಟದಲ್ಲಿ ಇಸ್ರೋಗೆ ಬೇಕಾದ ಉಪಗ್ರಹ ಘಟಕ ತುಮಕೂರಿಗೆ ಬಂದಿದೆ. 3200ಕೋಟಿ ವೆಚ್ಚದ ರಾಷ್ಟಿçÃಯ ಹೆದ್ದಾರಿಗಳ ಅಭಿವೃದ್ದಿ ಆಗಿವೆ. ತುಮಕೂರು-ರಾಯದುರ್ಗ ರೈಲ್ವೆ ಯೋಜನೆ ಪ್ರಾರಂಭ ಆಯ್ತು. 50ಕ್ಕೂ ಅಧಿಕ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿದ್ದೇನೆ. ನಮ್ಮ ಜಿಲ್ಲೆಯ ಹೆಸರನ್ನು ರಾಷ್ಟç ಮತ್ತು ಅಂತರಾಷ್ಟಿçÃಯ ಮಟ್ಟದಲ್ಲಿ ಎತ್ತಿ ಹಿಡಿದಿದ್ದೇನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಮುರುಳಿಧರ ಹಾಲಪ್ಪ, ಕೆಪಿಸಿಸಿ ಸದಸ್ಯ ದಿನೇಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ, ಕೊರಟಗೆರೆ ಬ್ಲಾಕ್ ಅಧ್ಯಕ್ಷ ಅರಕೆರೆಶಂಕರ್, ಅಶ್ವತ್ಥನಾರಾಯಣ್, ಮುಖಂಡರಾದ ಎಂಎನ್‌ಜೆ ಮಂಜುನಾಥ, ವಾಲೇಚಂದ್ರಯ್ಯ, ಜಯರಾಮು, ರವಿಕುಮಾರ್, ಕವಿತಾ, ಬಲರಾಮಯ್ಯ, ಜಯಮ್ಮ, ಮಹಾಲಿಂಗಪ್ಪ, ಮೈಲಾರಪ್ಪ, ಉಮೇಶ್, ಅರವಿಂದ್ ಸೇರಿದಂತೆ ಇತರರು ಇದ್ದರು.

 

 

 

 

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker