ಕ್ರೈಂ ನ್ಯೂಸ್ಗುಬ್ಬಿ
ಗಂಡ ಹೆಂಡತಿಯ ಜಗಳ ಕೊಲೆಯಲ್ಲಿ ಅಂತ್ಯ
ಗುಬ್ಬಿ : ಗುಬ್ಬಿ ತಾಲೂಕಿನ ಕಡಬ ಹೋಬಳಿ ಮಂಚಿಹಳ್ಳಿ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ಸುಮಾರು 10 ಗಂಟೆ ಸಮಯದಲ್ಲಿ ಮಂಚಿನಿಂದ ಕೊಚ್ಚಿ ಕೊಲೆಗೈದು ಗಂಡ ಪರಾರಿಯಾದ ಘಟನೆ ನಡೆದಿದೆ.
ಸುಮಾರು 35 ವರ್ಷದ ವಸಂತಮ್ಮ ಕೊಲೆಯಾದ ಮಹಿಳೆ ಈಕೆಯ ಗಂಡ ಈಶ್ವರಯ್ಯ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದು ತಪ್ಪಿಸಿ ಕೊಂಡು ಹೋಗಿದ್ದಾನೆ ಎಂದು ತಿಳಿಯಲಾಗಿದೆ.
ಕೌಟಂಬಿಕ ಕಲಹವೇ ಈ ಕೊಲೆಗೆ ಕಾರಣವಾಗಿದ್ದು ಎನ್ನಲಾಗುತ್ತಿದೆ ಸಿ. ಎಸ್.ಪುರ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.