ಮಸಾಲಜಯರಾಮ್ ಶಾಸಕರಾದ ನಂತರ ಬಂತು ಕೊರೊನೋ : ಬಾಣಸಂದ್ರ ರಮೇಶ್ ವ್ಯಂಗ್ಯ
ತುರುವೇಕೆರೆ : ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪವನರ ಕಾಲದಲ್ಲಿ ಮಳೆಯಾಗದೇ ಬರ ಬಂದಿತ್ತು ಎಂದು ವ್ಯಂಗ್ಯವಾಡುವ ಶಾಸಕ ಮಸಾಲಜಯರಾಮ್ ಅವರೇ ನೀವು ಶಾಸಕರಾದ ನಂತರ ಕೊರೊನೋ ವಕ್ಕರಿಸಿದ್ದು ಎಂಬುದು ನೆನಪಿರಲಿ ಎಂದು ಯುವ ಜೆ.ಡಿ.ಎಸ್. ಘಟಕದ ಅಧ್ಯಕ್ಷ ಬಾಣಸಂದ್ರ ರಮೇಶ್ ಠಕ್ಕರ್ ನೀಡಿದರು.
ತಾಲೂಕಿನ ಕುಣಿಕೇನಹಳ್ಳಿಯಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಎಂ.ಟಿ.ಕೃಷ್ಣಪ್ಪನವರು ಶಾಸಕರಾಗಿದ್ದ ವೇಳೆ ಹೋರಾಟ ಮಾಡಿ ಕ್ಷೇತ್ರದ ಎಲ್ಲ ಕೆರೆಕಟ್ಟೆಗಳಿಗೆ ಹೇಮೆ ಹರಿಸಿದ್ದರು. ಪ್ರಕೃತಿ ಸಹಜವಾಗಿ ಸುರಿದ ಮಳೆ ನನ್ನ ಕಾಲ್ಗುಣದಿಂದ ಸುರಿಯಿತು ಎಂದು ಶಾಸಕ ಮಸಾಲಜಯರಾಮ್ ಬಿಂಬಿಸಿಕೊಳ್ಳುತ್ತಿದ್ದಾರೆ. ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನವರ ಅಭಿವೃದ್ದಿಗೆ ಸಾಕ್ಷಿಗಲ್ಲುಗಳಾಗಿ ವೇಳೆ ಪಟ್ಟಣದ ಬಸ್ ನಿಲ್ದಾಣ , ಕೋರ್ಟ್, ಪಾಲಿಟೆಕ್ನಿಕ್ ಕಾಲೇಜು, ಡಿಗ್ರಿಕಾಲೇಜು, ವಸತಿ ಶಾಲೆಗಳು, ಪ್ರವಾಸಿ ಮಂದಿರ, ಚೆಕ್ ಡ್ಯಾಂಗಳು, ಏತ ನೀರಾವರಿ ಯೋಜನೆಗಳು ಜನತೆಯ ಮುಂದಿವೆ. ಶಾಸಕ ಮಸಾಲಜಯರಾಮ್ ಅವರೇ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಶೂನ್ಯ ಎಂದು ಜನತೆಗೂ ಗೊತ್ತಿದೆ. 2023 ರಲ್ಲಿ ಎಂ.ಟಿ.ಕೃಷ್ಣಪ್ಪನವರು ಶಾಸಕರನ್ನಾಗಿ ಕ್ಷೇತ್ರದ ಅಭಿವೃದ್ದಿ ಮಾಡಲಿದ್ದಾರೆ ಎಂದು ಭವಿಷ್ಯ ನುಡಿದರು.
ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ಕಳೆದ 15 ಕಾಲ ಶಾಸಕನಾಗಿ ಕ್ಷೇತ್ರದ ಅಭಿವೃದ್ದಿಗೆ ಒತ್ತು ನೀಡಿದ್ದೇನೆ. ಕಳೆದ ಚುನಾವಣೆಯಲ್ಲಿ ಅತ್ಯಲ್ಪ ಮತಗಳಿಂದ ಪರಾಭವಗೊಂಡಿದ್ದೇನೆ. ಇದು ನನ್ನ ಕೊನೆಯ ಚುನಾವಣೆ ಈ ಬಾರಿ ನನಗೆ ಮತ ನೀಡಿ ಆಶೀರ್ವದಿಸಿ ಎಂದರು.
ರಾಜ್ಯ ಯುವ ಜೆ.ಡಿ.ಎಸ್ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟಚಂದ್ರೇಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಸ್ವಾಮಿ, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಬಿ.ಎಸ್.ದೇವರಾಜ್, ವಕ್ತಾರಯೋಗೀಶ್, ಹಿರಿಯ ಮುಖಂಡ ತಾವರೇಕೆರೆ ತಿಮ್ಮೇಗೌಡ, ದಂಡಿನಶಿವರ ಶಂಕರೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಕಣತೂರು ಪ್ರಸನ್ನ, ಕಲ್ಲಬೋರನಹಳ್ಳಿ ಜಯರಾಮ್ ಮತ್ತಿತರಿದ್ದರು.