ತುರುವೇಕೆರೆ ವಿಧಾನಸಭಾ ಚುನಾವಣೆ ಕಣದಲ್ಲಿ 11 ಮಂದಿ ಅಭ್ಯರ್ಥಿಗಳು
ತುರುವೇಕೆರೆ : 2023 ವಿಧಾನ ಸಭೆ ಚುನಾವಣೆ ನಾಮಪತ್ರವನ್ನು ವಾಪಸ್ ಪಡೆಯುವ ಕೊನೆಯ ದಿನ ಪಕ್ಷೇತರ ಅಭ್ಯರ್ಥಿ ಎಂ.ಕೆ. ವರದರಾಜು ನಾಮಪತ್ರ ವಾಪಸ್ ಪಡೆದಿದ್ದು, ಚುನಾವಣೆ ಕಣದಲ್ಲಿ 11 ಮಂದಿ ಅಭ್ಯರ್ಥಿಗಳು ಉಳಿದಂತಾಗಿದೆ ಎಂದು ಚುನಾವಣಾಧಿಕಾರಿಗಳು ಪ್ರಕಟಿಸಿದ್ದಾರೆ.
ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು 14 ಮಂದಿ ನಾಮಪತ್ರ ಸಲ್ಲಿಸಿದ್ದರು, ನಾಮಪತ್ರ ಪರಿಷ್ಕರಣೆ ವೇಳೆ 2 ನಾಮ ಪತ್ರಗಳು ತಿರಸ್ಕೃತಗೊಂಡು 12 ಮಂದಿ ನಾಮಪತ್ರಗಳು ಕ್ರಮವಾಗಿದ್ದವು. ಈ ಪೈಕಿ ಪಕ್ಷೇತರ ಅಭ್ಯರ್ಥಿ ಎಂ.ಕೆ. ವರದರಾಜು ನಾಮಪತ್ರ ವಾಪಸ್ ಪಡೆದಿದ್ದಾರೆ. ಕಣದಲ್ಲಿ ಕ್ರಮವಾಗಿ ಕಾಂಗ್ರೇಸ್ ಪಕ್ಷದ ಬಿಎಂಎಲ್ ಕಾಂತರಾಜ್, ಜೆ.ಡಿ.ಎಸ್. ಪಕ್ಷದ ಎಂ.ಟಿ.ಕೃಷ್ಣಪ್ಪ, ಬಿ.ಜೆ.ಪಿ. ಪಕ್ಷದ ಮಸಾಲಜಯರಾಮ್, ಅಮ್ ಆದ್ಮಿ ಪಾರ್ಟಿಯ ಜಯರಾಮ್.ಜಿ.ಸಿ. ಬಿ.ಎಸ್.ಪಿ.ಯ ಎಂ.ಸಿ.ಶ್ರೀನಿವಾಸ್, ನೋಂದಾಯಿತ ರಾಜಕೀಯ ಪಕ್ಷಗಳಾದ ಭಾರತೀಯ ಬಹುಜನ ಕ್ರಾಂತಿ ದಳದಿಂದ ಹೆಚ್.ಬಿ.ಪುಟ್ಟಪ್ಪ. ಉತ್ತಮ ಪ್ರಜಾಕೀಯ ಪಾರ್ಟಿಯ ಭರತ್.ಎಸ್.ಕೆ.ಆರ್.ಎಸ್. ಪಕ್ಷದಿಂದ ರಾಮಪ್ರಸಾದ್,ಆರ್.ಪಿ.ಐ. ಪಕ್ಷದ ಹಟ್ಟಯ್ಯ, ಪಕ್ಷೇತರ ಅಭ್ಯರ್ಥಿಗಳಾಗಿ ಕಪನೀಗೌಡ, ನಾರಾಯಣ, ಕಣದಲ್ಲಿ ಉಳಿದಿದ್ದಾರೆ.