ನಿವೇಶನಕ್ಕಾಗಿ ರಾಷ್ಟ್ರಪತಿಗಳಿಗೆ ಪತ್ರ ಬರೆದ ಶಾಲಾ ಬಾಲಕಿ
ತುರುವೇಕೆರೆ : ತಾಲೂಕಿನ ತೂಯಲಹಳ್ಳಿ ಗ್ರಾಮದ ಬಾಲಕಿ ಮನೆ ಕಟ್ಟಿಕೊಳ್ಳಲು ನಿವೇಶ ನೀಡುವಂತೆ ರಾಷ್ಟçಪತಿಗಳಿಗೆ ಕಳೆದ ತಿಂಗಳ 29 ರಂದು ಪತ್ರ ಬರೆದು ಮನವಿ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.
ತಾಲೂಕಿನ ಮಾಯಸಂದ್ರ ಹೋಬಳಿ ತೂಯಲಹಳ್ಳಿ ಗ್ರಾಮದ ನಿವಾಸಿ ನಾಗರಾಜ್ ಎಂಬುವರ ಮಗಳು ಲಕ್ಷಿö್ಮÃ(11) ಮನೆ ನಿರ್ಮಿಸಿಕೊಳ್ಳಲು ನಿವೇಶನ ನೀಡುವಂತೆ ಮನವಿ ಮಾಡಿರುವ ಬಾಲಕಿಯಾಗಿದ್ದು, ತೂಯಲಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7 ನೇ ತರಗತಿಯಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದಾಳೆ.
ಪತ್ರದ ಸಾರಾಂಶ :-
“ನಾನು ತಂದೆ ತಾಯಿ ಹಾಗೂ ಇಬ್ಬರು ಸಹೋದರಿಯೊಂದಿಗೆ ಗುಡಿಸಲಿನಲ್ಲಿ ವಾಸವಿದ್ದೇನೆ. ನಾವು ಸದ್ಯ ವಾಸಿಸುತ್ತಿರುವ ಸ್ಥಳದಲ್ಲಿ ಮನೆ ಕಟ್ಟಿಕೊಳ್ಳಲು ನಮ್ಮ ಸಂಬದಿಕರು ತಕಾರಾರು ಮಾಡುತ್ತಿದ್ದಾರೆ. ನಾವುಗಳು ಗುಡಿಸಿಲಿನಲ್ಲಿ ವಾಸವಿದ್ದೇವೆ. ಮನೆ ಕಟ್ಟಿಕೊಳ್ಳಲು ನಿವೇಶನವಿಲ್ಲ.
ಮಳೆಗಾಲ ಶುರುವಾದರೇ ಗುಡಿಸಿಲಿನಲ್ಲಿ ವಾಸವಿರುವ ನಮ್ಮ ಕುಟುಂಬದ ಸದಸ್ಯರೆಲ್ಲರೂ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ದಯಮಾಡಿ ತಾವುಗಳು ನಮಗೆ ಮನೆ ನಿರ್ಮಿಸಿಕೊಳ್ಳುವುದಕ್ಕಾಗಿ ನಿವೇಶನ ಕೊಡಿಸಿ ಎಂದು ರಾಷ್ಟçಪತಿಗಳವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ತಹಶೀಲ್ದಾರ್ ಬೇಟಿ :-
ತೂಯಲಹಳ್ಲಿ ಸರಕಾರಿ ಶಾಲೆಯ ವಿದ್ಯಾರ್ಥಿನಿ ಲಕ್ಷ್ಮೀ ನಿವೇಶನಕ್ಕಾಗಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿರುವ ಹಿನ್ನಲೆಯಲ್ಲಿ ಗ್ರಾಮ ಲೆಕ್ಕಿಗರು, ಹಾಗೂ ಸ್ಥಳೀಯ ಪಂಚಾಯಿತಿ ಪಿ.ಡಿ.ಓ. ರವರೊಂದಿಗೆ ತಹಶೀಲ್ದಾರ್ ವೈ.ಎಂ. ರೇಣುಕುಮಾರ್ ಬೇಟಿ ನೀಡಿ ಪರಿಶೀಲನೆ ನಡೆಸಿದರು. ನಿವೇಶನ ಮಂಜೂರಾತಿ ಕುರಿತಂತೆ ಪಿ.ಡಿ.ಓ. ರವರು ತುರ್ತು ಕ್ರಮ ವಹಿಸುವಂತೆ ಸೂಚನೆ ನೀಡಿದ್ದಾರೆ.
ಬೇಟಿ ವೇಳೆ ಗ್ರಾಮ ಲೆಕ್ಕಿಗ ಅಣ್ಣಪ್ಪ, ಪಿ.ಡಿ.ಓ. ಅಣ್ಣೇಗೌಡ, ಹಾಗೂ ಶಾಲೆಯ ಶಿಕ್ಷಕರು ಇದ್ದರು.