ತಿಪಟೂರು ನಗರಸಬೆಯ ವಿಶೇಷ ಸಾಮಾನ್ಯ ಸಭೆಯಲ್ಲಿ ಕುಡಿಯುವನೀರು – ಮೋಟರ್ ಕೇಬಲ್ ವಿಷಯದಲ್ಲಿ ತಾರಕಕ್ಕೇರಿದ ಸದಸ್ಯರ ಗದ್ದಲ
ನೀಲಕಂಠಸ್ವಾಮಿ ವೃತ್ತದಲ್ಲಿ ಬಸವೇಶ್ವರ ಪುತ್ಥಳಿ ನಿರ್ಮಾಣಕ್ಕೆ ಸರ್ವಾನುಮತದ ಒಪ್ಪಿಗೆ
ತಿಪಟೂರು : ನಗರಸಭೆಯ ಕಛೇರಿಯ ಸಭಾಂಗಣದಲ್ಲಿ ನಗರಸಭೆಯ ಅದ್ಯಕ್ಷರಾದ ಪಿ.ಜೆ ರಾಮಮೋಹನ್‌ರವರ ಅದ್ಯಕ್ಷತೆಯಲ್ಲಿ ಕರೆದಿದ್ದ ವಿಶೇಷ ಸಭೆಯು ಹೇಮಾವತಿಯ ಕುಡಿಯುವ ನೀರು ಹಾಗೂ ಮೋಟರ್ ಕೇಬಲ್ ವಿಷಯವು ಶೂನ್ಯ ವೇಳೆಯಲ್ಲಿ ಗದ್ದಲ ಹಾಗೂ ಚರ್ಚೆಗೆ ಗ್ರಾಸವಾಯಿತು.
ವಾರ್ಡಗಳಲ್ಲಿ ಜನತೆಗೆ ಕುಡಿಯುವ ನೀರನ್ನು ಸರಿಯಾಗಿ ಸರಬರಾಜು ಮಾಡಲು ಸಾಧ್ಯವಾಗದೆ ಸದಸ್ಯರಾದ ನಾವುಗಳು ಟ್ಯಾಂಕರ್‌ನಿಂದ ನೀರನ್ನು ಕೊಡುತ್ತಿದ್ದು ಸಮಸ್ಯೆಯು ತುಂಬಾ ಗಂಬೀರವಾಗುತ್ತಿದ್ದು, ನಗರದಲ್ಲಿ ವಾಸಮಾಡುತ್ತಿರುವ ಜನತೆಯು ಪ್ರತಿ ಕ್ಷಣವೂ ಸಹ ನಗರಸಬಾ ಸದಸ್ಯರನ್ನು ಬೈದುಕೊಳ್ಳುತ್ತಿದ್ದಾರೆ ಎಂದು ಸದಸ್ಯ ಯೋಗೀಶ ಮಾತನಾಡಿ ಮನುಷ್ಯನಿಗೆ ಗಾಳಿ ಬೆಳಕು ಎಷ್ಟು ಮುಖ್ಯವೂ ಅದರಷ್ಟೆ ನೀರು ಅತಿ ಮುಖ್ಯವಾಗಿದೆ ಎಂದಾಗ ಉಳಿದ ಸದಸ್ಯರು ಸಹ ಧ್ವನಿಗೊಡಿಸಿದರು.
ಸದಸ್ಯರಾದ ಪ್ರಕಾಶ್ ಮಾತನಾಡಿ 24*7 ಕುಡಿಯುವ ನೀರಿಗೆ 210 ಹೆಚ್‌ಪಿ ಮೋಟರ್ ಸಾಮರ್ಥ್ಯದಲ್ಲಿ ನೀರು ಪೋರೈಕೆ ಮಾಡಲು ಅವಕಾಶವಿದ್ದರೂ ವಿದ್ಯುತ್ ವಿತರಣಾ ಸಾಮರ್ಥ್ಯ ಕೊರತೆಯಿರುವುದರಿಂದ ಸಮರ್ಪಕ ಕುಡಿಯುವ ನೀರನ್ನು ನಗರಕ್ಕೆ ಸರಬರಾಜು ಮಾಡಲು ಅಗುತ್ತಿಲ್ಲ ಎಂದು ಪ್ರಶಿಸಿದರು.
ಇದಕ್ಕೆ ಉತ್ತರಿಸಿದ ಅದ್ಯಕ್ಷರಾದ ಪಿ.ಜೆ ರಾಮಮೋಹನ್‌ರವರು ನಗರದಲ್ಲಿ ರೈಲ್ವೆ ಅಂಡರ್‌ಪಾಸ್ ಕಾಮಗಾರಿಯು ನೆಡೆಯುತ್ತಿರುವುದರಿಂದ ಸ್ವಲ್ಪ ಕುಡಿಯುವ ನೀರಿಗೆ ತೊಂದರೆಯಾಗುತ್ತಿದೆ, ಈ ಸಮಸ್ಯೆಗೆ ಬದಲೀ ವ್ಯವವಸ್ಥೆಯನ್ನು ಮಾಡಲಾಗುವುದು, 210 ಹೆಚ್‌ಪಿ ಮೋಟರ್ ನೀರಿನ ಸಾಮರ್ಥ್ಯದ ಬಗ್ಗೆ ಗುತ್ತಿಗೆದಾರನಿಗೆ ಹಲವಾರು ಬಾರಿ ನೋಟಿಸ್ ನೀಡಿ 4 ಕೋಟಿಗೂ ಹೆಚ್ಚು ದಂಡ ವಿಧಿಸಲಾಗಿದ್ದು ಸಂಗ್ರಹ ಮಾಡಲಾಗಿದೆ ಎಂದರು.
ಬಾರೀ ಕುತೂಹಲ ಕೆರಳಸಿದ್ದ ನಗರಸಭೆಯ ನೀಲಕಂಠಸ್ವಾಮಿ ವೃತ್ತದಲ್ಲಿ ಅಶ್ವರೂಡ ಬಸವೇಶ್ವರ ಪುತ್ಥಳಿಯ ನಿರ್ಮಾಣಕ್ಕೆ ಹಾಜರಿದ್ದ ಎಲ್ಲಾ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿ ಪುತ್ಥಳಿ ನಿರ್ಮಾಣಕ್ಕೆ ಅನುಮೋದನೆ ನೀಡಿದರು.
ವಿಶೇಷ ಸಭೆಯಲ್ಲಿ ಪತ್ರಕರ್ತರ ಕಚೇರಿಗೆ ಸ್ಥಳಾವಕಾಶ ನೀಡಲಾಗಿದ್ದು ನಗರಸಭೆಯ ಹಳೇ ಕಟ್ಟಡದಲ್ಲಿ ಕಚೇರಿಯನ್ನು ಮಾಡಿಕೊಡುವಂತೆ ಎಲ್ಲಾ ಸದಸ್ಯರು ಒಪ್ಪಿಗೆ ಸೂಚಿಸಿದರು.
ನಗರಸಭೆಯ ನೀಲಕಂಠಸ್ವಾಮಿ ವೃತ್ತದಲ್ಲಿ ನೆಡೆಯುತ್ತಿರುವ ಕಾಮಗಾರಿಯು ಸರಿಯಾಗಿ ಮಾರ್ಗಸೂಚಿಯಂತೆ ಹಾಗೂ ಕ್ರಿಯಾ ಅನುಮೋದನೆಯಂತೆ ನಡೆಯದೆ ತಳಹದಿಯೂ ತೆಗೆಯದೆ, ಹಳೇ ಕಲ್ಲಿನ ಮೇಲೆಯೇ ಕಾಮಗಾರಿಯು ನೆಡೆಯುತ್ತಿದೆ ಇದನ್ನು ಸರಿಯಾಗಿ ಅಧಿಕಾರಿಗಳು ಗಮನಿಸದೆ ಸುಮ್ಮನೇ ಕುಳಿತುಕೊಂಡಿದ್ದಿರಾ, ಸಂಬಳಕ್ಕೆ ಸರಿಯಾಗಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಮಾಜಿ ಅದ್ಯಕ್ಷ ಟಿ.ಎನ್ ಪ್ರಕಾಶ್ ಸಭೆಯಲ್ಲಿ ಧ್ವನಿ ಎತ್ತಿದರು,
ಸಭೆಯಲ್ಲಿ ಉಪಾಧ್ಯಕ್ಷ ಸೊಪ್ಪು ಗಣೇಶ್, ಸ್ಥಾಯಿ ಸಮಿತಿ ಅದ್ಯಕ್ಷ ಶಶಿಕಿರಣ್, ಪೌರಯುಕ್ತ ಉಮಾಕಾಂತ್, ಸದಸ್ಯರಗಳು, ಅಧಿಕಾರಿಗಳು ಹಾಜರಿದ್ದರು.