ತಿಟೂಪರು : ಶತಮಾನದ ಹಿಂದೆ ನಮ್ಮ ಹಳ್ಳಿಗಳಲ್ಲಿ ಹುಟ್ಟಿಕೊಂಡ ಅನೇಕ ಜಾನಪದ ಕಲೆಗಳಲ್ಲಿ ಯಕ್ಷಗಾನವು ಒಂದು ಶ್ರೇಷ್ಠ ಕಲೆಯಾಗಿ ಬೆಳೆದು ಬಂದಿದ್ದು ಆದರೆ ಇಂದಿನ ದಿನಮಾನಗಳಲ್ಲಿ ಆಧುನಿಕ ನಾಗಾಲೋಟದ ಟಿವಿ ಮುಂತಾದ ದೃಶ್ಯ ಮಾಧ್ಯಮಗಳ ಒಡೆತಕ್ಕೆ ಸಿಲುಕಿ ಪಾರಂಪರಿಕ ಈ ಯಕ್ಷಗಾನ ಕಲೆಯು ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ನಮ್ಮ ತಿಪಟೂರು ತಾಲೂಕಿನ ಅರಳಗುಪ್ಪೆ ಗ್ರಾಮವು ಇಂಥ ಕಲೆಯನ್ನು ಹಿರಿಯರಷ್ಟೇ ಅಲ್ಲದೆ ಮಕ್ಕಳಿಗೂ ಕೂಡ ಕಳಿಸಿ ಕಲೆಯನ್ನು ಮೈಗೂಡಿಸಿಕೊಳ್ಳುವಂತೆ ಮಾಡಿ ಜಿಲ್ಲಾ ಮಟ್ಟದಲ್ಲಿ ಹೆಸರುವಾಸಿಯಾಗಿ ಗ್ರಾಮಕ್ಕೆ ಕೀರ್ತಿ ತಂದಿದೆ ಎಂದು ಹರಳುಗುಪ್ಪೆ ಗ್ರಾಮ ಪಂಚಾಯತಿ ಉಪಾಕ್ಷೆ ಶ್ರೀಮತಿ ಜ್ಯೋತಿ ತಿಮ್ಮಯ್ಯ ಅಭಿಪ್ರಾಯಪಟ್ಟರು.
ಅವರು ತಿಪಟೂರು ತಾಲೂಕಿನ ಕಲ್ಪಶ್ರೀ ಕಲಾವಿದರ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಾಲಯ ಬೆಂಗಳೂರು ಸಹಯೋಗದಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು ಕೇಂದ್ರ ನಾಟಕ ಅಕಾಡೆಮಿ ಪುರಸ್ಕೃತ ಕಲ್ಮನೆ ನಂಜಪ್ಪನವರು ಕಲ್ಪಿಸಿ ಕಲಾವಿದರ ಸಂಘವು ತಿಪಟೂರು ತಾಲೂಕಿನಲ್ಲಿ ಹೆಸರುವಾಸಿಯಾಗಿದ್ದು ನಾನು ಕೂಡ ಹಿಂದೆ ಸಂಘದ ಅಧ್ಯಕ್ಷನಾಗಿ ಹಲವು ಕಾರ್ಯಕ್ರಮವನ್ನು ಹಮ್ಮಿಕೊಂಡು ನಮ್ಮ ಗ್ರಾಮದಲ್ಲಿ ಅನೇಕ ರಂಗ ನಾಟಕಗಳನ್ನು ಪ್ರದರ್ಶಿಸಲು ಗ್ರಾಮಸ್ಥರೆಲ್ಲರ ಸಹಕಾರದಿಂದ ನೆರವಾಗಿದೆ ಎಂದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಎನ್ ನೇತ್ರಾನಂದ ನಮ್ಮ ಗ್ರಾಮದಲ್ಲಿ ಎಲ್ಲ ರೀತಿಯ ಕಲೆಗಳನ್ನು ಕಲಾವಿದರನ್ನು ಗೌರವಿಸುತ್ತಾ ಬಂದಿಡಿದ್ದು ಕಲೆಯ ತವರೂರು ಎಂದರೆ ತಾಲೂಕಿನ ಅರಳುಗುಪ್ಪೆ ತುಮಕೂರು ಜಿಲ್ಲೆಯಲ್ಲಿ ಹೆಸರುವಾಸಿಯಾಗಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನುವಹಿಸಿ ಮಾತನಾಡಿದ ಕಲ್ಪ ಶ್ರೀ ಕಲಾವಿದರ ಸಂಘದ ಅಧ್ಯಕ್ಷ ಶ್ರೀ ಟಿಎಚ್ ಬಸವರಾಜು ಮಕ್ಕಳಲ್ಲಿ ಕರೆಯ ಬಗ್ಗೆ ಆಸಕ್ತಿಯನ್ನು ಮೂಡಿಸಿ ಯಕ್ಷಗಾನವನ್ನು ನೀಡುವ ಮುಖಾಂತರ ಮಕ್ಕಳ ಕಲ ಪ್ರತಿಭೆಯನ್ನು ಬೆಳಕಿಗೆ ತರುವಲ್ಲಿ ಗ್ರಾಮವು ಯಶಸ್ವಿಯಾಗಿದೆ ಇಂಥ ಪ್ರಯತ್ನಗಳು ಪ್ರತಿ ಗ್ರಾಮದಲ್ಲೂ ನಡೆದರೆ ನಮ್ಮ ಪಾರಂಪರಿಕ ಕಲೆಯು ಉಳಿದು ಬೆಳೆಯುವಲ್ಲಿ ಯಾವುದೇ ಸಂದೇಹವಿಲ್ಲ ಎಂದರು ಗ್ರಾಮ ಪಂಚಾಯಿತಿ ಸದಸ್ಯ ಶ್ರೀ ರುದ್ರೇಶ್ ಗ್ರಾಮದ ಮತ್ತೊರ್ವ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಚನ್ನಬಸವಯ್ಯ , ಕಲ್ಪಿ ಶ್ರೀ ಕಲಾವಿದ ಸಂಘದ ಪದಾಧಿಕಾರಿಗಳಾದ ಶ್ರೀ ಜಯರಾಜು ಶ್ರೀ ಮಹಾ ಲಿಂಗಪ್ಪ ಶ್ರೀ ಕುಮಾರಸ್ವಾಮಿ ಆದಿ ನಾಯಕನಹಳ್ಳಿಯ ರಮೇಶ್ ಸಾಹಿತಿ ಸಾರ್ಥವಳ್ಳಿ ಶಿವಕುಮಾರ್ ಗ್ರಾಮದ ಹಿಂದಿನ ಗಾಯಕ ಎಸಿ ಯೋಗೇಶ್ ಹಾಗು ವಸಂತಕುಮಾರ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀ ವೇದಮೂರ್ತಿ ಸೇರಿದಂತೆ ಅನು ಗ್ರಾಮದ ಅನೇಕ ಮುಖಂಡರು ಸಾರ್ವಜನಿಕರು ಕಲಾಭಿಮಾನಿಗಳು ಕಲಾ ಬಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು ಇದೇ ಸಂದರ್ಭದಲ್ಲಿ ವರ್ಷದ ಕನ್ನಡ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಪುಟ್ಟಸ್ವಾಮಿಯವರನ್ನು ಕಲ್ಪಿಸಿ ಕಲಾವಿದರ ಸಂಘದ ಪರವಾಗಿ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು ನಂತರ ಶಾಲಾ ಮಕ್ಕಳ ರತಿ ಕಲ್ಯಾಣ ಎಂಬ ಯಕ್ಷಗಾನ ಪ್ರದರ್ಶನವು ನೆರೆದಿದ್ದ ಜನರ ಮನಮುತ್ತಿದ್ದು ಎಲ್ಲ ಕಲ ಅಭಿಮಾನಿಗಳು ಮಕ್ಕಳನ್ನು ಅಭಿನಂದಿಸಿದರು