ತಿಪಟೂರು

ಸಾರ್ವಜನಿಕರೊಂದಿಗೆ ಗೌರವಯುತವಾಗಿ ವರ್ತಿಸಿ ಅಗತ್ಯ ಮಾಹಿತಿ, ಸೌಲಭ್ಯ ಒದಗಿಸಿ : ಜಿಲ್ಲಾಧಿಕಾರಿ ವೈ .ಎಸ್. ಪಾಟೀಲ್

ತಿಪಟೂರು ತಾಲೂಕಿನ ದಸರಿಘಟ್ಟ ಗ್ರಾಮದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮಕ್ಕೆ ಅನಿರೀಕ್ಷಿತ ಭೇಟಿ

ತಿಪಟೂರು : ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವ ಸಾರ್ವಜನಿಕರೊಂದಿಗೆ ನಮ್ಮ ವರ್ತನೆಗಳು ಗೌರವಯುತವಾಗಿದ್ದು, ಅವರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಸೂಕ್ತ ಸಲಹೆ/ಸೌಲಭ್ಯಗಳನ್ನು ನೀಡಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹೇಳಿದರು.
ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಆಯ್ದ ಗ್ರಾಮಗಳಲ್ಲಿ ಇಂದು ನಡೆಯುತ್ತಿದ್ದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ’ ಕಾರ್ಯಕ್ರಮಗಳಲ್ಲಿ, ತಿಪಟೂರು ತಾಲೂಕಿನ ದಸರಿಘಟ್ಟ ಗ್ರಾಮಕ್ಕೆ ಅನಿರೀಕ್ಷಿತ ಭೇಟಿ ನೀಡುವ ಮೂಲಕ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಜನರ ಸಮಸ್ಯೆ ಸ್ಥಳದಲ್ಲೇ ಆಲಿಸಿ, ಅರ್ಹತೆ ಅನುಸಾರ ಸರ್ಕಾರದ ಸೌಲಭ್ಯಗಳನ್ನು ತ್ವರಿತವಾಗಿ ಸಾರ್ವಜನಿಕರಿಗೆ ಒದಗಿಸಿ ಕೊಡುವುದೇ ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದ್ದು, ಯಾವುದೇ ಸಮಸ್ಯೆ ಇದ್ದರೂ ಮುಕ್ತವಾಗಿ ನಮ್ಮ ಜೊತೆಗೆ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ, ನಿಮ್ಮ ಸಮಸ್ಯೆ ಆಲಿಸಲು ನಿಮ್ಮ ಊರಿಗೆ ಬಂದಿದ್ದೇವೆ ಎಂದು ತಿಳಿಸಿದರು.
ಎಲ್ಲಾ ಇಲಾಖೆಗಳ ತಾಲೂಕ್ ಮಟ್ಟದ ಅಧಿಕಾರಿಗಳು ಗ್ರಾಮದಲ್ಲೇ ವಾಸ್ತವ್ಯ ಹೂಡಿ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿ ಸಮಸ್ಯೆ ಪರಿಹರಿಸಲಾಗುತ್ತಿದ್ದು, ಜಿಲ್ಲೆಯಲ್ಲಿ ೨೫೦೦ ಹೆಚ್ಚು ಹಳ್ಳಿಗಳಿದ್ದು ಈಗ ೫೬೨ ಬೇಚರಾಕ್ ಹಳ್ಳಿಗಳನ್ನು(ಹಾಡಿ, ಹಟ್ಟಿಗಳಂತಹ ಜನವಸತಿ ಪ್ರದೇಶಗಳು) ಕಂದಾಯ ಗ್ರಾಮಗಳನ್ನಾಗಿ ಮಾಡಲಾಗಿದೆ, ಒಂದೂವರೆ ವರ್ಷದಲ್ಲಿ ಸುಮಾರು ೨ ಲಕ್ಷ ಪಹಣಿಗಳನ್ನು ಪರಿಶೀಲಿಸಿ ಸರಿಪಡಿಸಲಾಗಿದೆ, ೩ನೇ ಕಲಂನಲ್ಲಿ ಭೂಮಿ ವಿಸ್ತೀರ್ಣ, ೯ನೇ ಕಲಂನಲ್ಲಿ ಅನುಭವದಾರ, ಮಾಲೀಕರ ಹೆಸರು ಹಾಗೂ ವಿಸ್ತೀರ್ಣ ಹೊಂದಾಣಿಕೆ ಇರುತ್ತಿರಲಿಲ್ಲ ಅಂತಹ ಒಂದು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಜಿಲ್ಲೆಯಲ್ಲಿದ್ದವು. ಅಂತಹ ಪ್ರಕರಣಗಳನ್ನು ಬಗೆಹರಿಸಲಾಗಿದೆ, ಜಿಲ್ಲೆಯ ಎಲ್ಲಾ ಹಳ್ಳಿಗಳಲ್ಲಿ ಸ್ಮಶಾನಕ್ಕೆ ಮತ್ತು ಘನ ತ್ಯಾಜ್ಯ ಸಂಗ್ರಹಣ ಘಟಕಕ್ಕೆ ಜಾಗ ಒದಗಿಸಲಾಗಿದೆ,
ಪಶುಪಾಲನಾ ಇಲಾಖೆಯಿಂದ ವಸ್ತುಪ್ರದರ್ಶನ ಮಳಿಗೆ: ಇಲಾಖಾ ವತಿಯಿಂದ ಸಾರ್ವಜನಿಕರ ದೊರೆಯಬಹುದಾದ ಸಾಲ/ಸೌಲಭ್ಯ ಮಾಹಿತಿ ಒಳಗೊಂಡ ವಸ್ತು ಪ್ರದರ್ಶನದ ಮಳಿಗೆ ಸಾರ್ವಜನಿಕರ ಆಕರ್ಷಿಸಿತು, ಪಶುಪಾಲನಾ ಇಲಾಖೆ ಸಹಾಯಕ ನಿದೇರ್ಶಕರರಾದ ಡಾ. ಕೆಜಿ ನಂದೀಶ ಹಾಗೂ ದಸರಿಘಟ್ಟ ಗ್ರಾಮದ ಪಶು ಚಿಕತ್ಸಾಲಯದ ಪಶು ವ್ಯೆಧ್ಯಾಧಿಕಾರಿ ಕ್ಫಿ. ಮಂಜುನಾಥ್ ನವರು ಇಲಾಖೆಯ ವಿವಿಧ ಯೋಜನೆಗಳ ಕುರಿತು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿದರು.
ಆರೋಗ್ಯ ಇಲಾಖೆಯ ವತಿಯಿಂದ ಸಾರ್ವಜನಿಕರ ಆರೋಗ್ಯ ತಪಾಸಣೆಮಾಡಿ, ವಿವಿಧ ಪರಿಕರಗಳ ವಿತರಿಸಲಾಯಿತು, ವಿವಿಧ ಇಲಾಖೆಗಳು ವಸ್ತುಪ್ರದರ್ಶನ ಮಳಿಗೆ ತೆರದು, ಇಲಾಖೆಯ ವಿವಿಧ ಯೋಜನೆಗಳ ಸೌಲಭ್ಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
೪೯ ಅರ್ಜಿಗಳ ಸಲ್ಲಿಕೆ, ಸ್ಥಳದಲ್ಲೇ ಅರ್ಜಿಗಳ ಇತ್ಯರ್ಥ: ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ದಸರೀಘಟ್ಟ ಗ್ರಾಮಸ್ಥರು ಹಾಗೂ ವಿವಿಧ ಗ್ರಾಮಗಳಿಂದ ಬಂದ ಗ್ರಾಮಸ್ಥರು ೪೯ ಅಹವಾಲು ಅರ್ಜಿಗಳನ್ನು ಸಲ್ಲಿಕೆ ಮಾಡಿದರು, ಕಂದಾಯ ಇಲಾಖೆಗೆ ಸಂಬoಧಿಸಿದ ೩೬, ಪಂಚಾಯತ್ ಇಲಾಖೆಗೆ ಸಂಬoಧಿಸಿದ ೮, ಭೂ ಮಾಪನ ಇಲಾಖೆಗೆ ಸಂಬoಧಿಸಿದ ೦೨, ಸೇರಿದಂತೆ ಹಲವು ಇಲಾಖೆಗಳಿಗೆ ಸಂಬoಧಿಸಿದ ಅರ್ಜಿ ಸಲ್ಲಿಸಿದ್ದರು, ಸಾರ್ವಜನಿಕರ ಹತ್ತು ಹಲವು ಕುಂದುಕೊರತೆಗಳನ್ನು ಸಮಾಧಾನದಿಂದ ಆಲಿಸಿದ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸ್ಥಳದಲ್ಲಿಯೇ ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸಿ ಮಾತನಾಡುತ್ತಾ ಸಾರ್ವಜನಿಕರು ಸಲ್ಲಿಸಿರುವ ಎಲ್ಲಾ ಸಮಸ್ಯೆಗಳು ಬಗೆಹರಿಸಲಾಗಿದ್ದು, ಸರ್ಕಾರಿ ವ್ಯವಸ್ಥೆಯು ಸಾರ್ವಜನಿಕರ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲಾಗುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ ಎಂದರು.
 ಸ್ಥಳದಲ್ಲೇ ಎಲ್ಲಾ ೪೯ ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದು ತಹಸೀಲ್ದಾರ್ ಚಂದ್ರಶೇಖರಯ್ಯ ಮಾಹಿತಿ ನೀಡಿದರು.ನಂತರ ಗ್ರಾಮೀಣ ಪ್ರತಿಭೆಗಳ ಹಾಗೂ ಕಲೆಗೆ ಪ್ರೋತ್ಸಾಹಿಸಲು ಪೂರಕವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಉಪವಿಭಾಗಾಧಿಕಾರಿ ಕಲ್ಪಶ್ರೀ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚೆನ್ನಕೇಶವಮೂರ್ತಿ, ಗ್ರಾಮ ಪಂಚಾಯತಿ ಅಧ್ಯಕ್ಷರು, ಗ್ರಾಮ ಪಂಚಾಯತಿ ಸದ್ಯರು, ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಸ್ಥಳೀಯ ಮುಖಂಡರುಗಳು,  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker