ಅಪರಿಚಿತರಿಂದ ಮಂಡ್ಯ ಮೂಲದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ, ವ್ಯಕ್ತಿ ಸಾವು
ತಿಪಟೂರು : ನಗರದ ಕೆ ಆರ್ ಬಡಾವಣೆಯ ಮೂರನೇ ಮುಖ್ಯರಸ್ತೆಯಲ್ಲಿ ಬೆಳಗಿನ ಜಾವ ಮಂಡ್ಯ ಮೂಲದ ವ್ಯಕ್ತಿಯ ಮೇಲೆ ಅಪರಿಚಿತರು ಮಾರಣಾಂತಿಕವಾಗಿ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಮೃತ ವ್ಯಕ್ತಿಯನ್ನು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯ ಹೊಸಕೆರೆ ಗ್ರಾಮದ ಮಹೇಂದ್ರ (34) ಮಾಹಿತಿ ದೊರೆತಿದೆ. ಮೃತ ವ್ಯಕ್ತಿಯು ರಕ್ತದ ಮಡುವಿನಲ್ಲಿ ರಸ್ತೆಯ ತುಂಬಾ ಓಡಾಡಿರುವ ಗುರುತು ಪತ್ತೆ ಆಗಿದೆ.
ಸ್ಥಳೀಯರ ಮಾಹಿತಿಯ ಪ್ರಕಾರ ವ್ಯಕ್ತಿಯನ್ನು ಯಾರೋ ಅಟ್ಟಾಡಿಸಿಕೊಂಡು ಬಂದಿದ್ದು ಮಾರಣಾಂತಿಕವಾಗಿ ಹಲ್ಲೆ ಮಾಡಿದ ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ.
ಬೆಳಗಿನ ಜಾವ ಐದು ಗಂಟೆ ಸುಮಾರಿನಲ್ಲಿ ರಸ್ತೆಯ ಬದಿಯಲ್ಲಿ ಸಹಾಯಕ್ಕಾಗಿ ಕೂಗುತ್ತಿದ್ದ ಧ್ವನಿ ಕೇಳಿದೆ.
ಮೃತ್ತ ವ್ಯಕ್ತಿಯು ಅರೆ ನಗ್ನಾವಸ್ಥೆಯಲ್ಲಿದ್ದು ದೇಹದ ತುಂಬಾ ಗಾಯಗಳಾಗಿದ್ದು ಅತೀ ಹೆಚ್ಚು ರಕ್ತಸ್ರಾವವಾಗಿದೆ. ಮೃತ ವ್ಯಕ್ತಿಯ ಬ್ಯಾಗ್ ,ಮೊಬೈಲ್, ಡಿಎಲ್ ದೊರೆತಿದೆ.
ಸ್ಥಳಕ್ಕೆ ಡಿವೈಎಸ್ಪಿ ವಿನಾಯಕ ಶೆಟ್ಟಿಗೇರಿ, ತಿಪಟೂರು ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕ ಸಿದ್ದರಾಮೇಶ್ವರ ಆಗಮಿಸಿ ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಮೃತ ದೇಹವನ್ನು ತಿಪಟೂರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ವರ್ಗಾಯಿಸಲಾಗಿದೆ.