ತಿಪಟೂರು : ನವೆಂಬರ್ 1ರಂದು ಕಲ್ಪತರು ಕ್ರೀಡಾಂಗಣದಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವ ಅಂಗವಾಗಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಆಸಕ್ತಿ ತೋರದ ತಾಲ್ಲೂಕು ಮಟ್ಟದ ಅಧಿಕಾರಿಗಳ ಮೇಲೆ ಶಾಸಕ ಕೆ ಷಡಕ್ಷರಿಯವರು ಗರಂ ಆದರು. ತಾಲೂಕು ಆಡಳಿತ ಸೌಧದಲ್ಲಿ ಉಪವಿಭಾಗಾಧಿಕಾರಿ ಹಾಗೂ ಶಾಸಕ ಕೆ ಷಡಕ್ಷರಿಯವರ ಅಧ್ಯಕ್ಷತೆಯಲ್ಲಿ ಕರೆದಿದ್ದ ಕನ್ನಡ ರಾಜ್ಯೋತ್ಸವ ಸಭೆಯಲ್ಲಿ ಶಾಸಕರು ಕೇಳಿದ ಸಲಹೆ ಸೂಚನೆಗಳಿಗೆ ಉತ್ತರಿಸದೆ ಸುಮ್ಮನೆ ಕುಳಿತಿದ್ದ ಅಧಿಕಾರಿಗಳ ಮೇಲೆ ಶಾಸಕರು ಸಿಟ್ಟಾದ ಘಟನೆ ನೆಡೆಯಿತು.
ರಾಜ್ಯೋತ್ಸವದ ಅಂಗವಾಗಿ ಎಲ್ಲ ಇಲಾಖೆಗಳ ವತಿಯಿಂದ ಸರ್ಕಾರ ಜನರಿಗೆ ನೀಡುವ ಸವಲತ್ತು, ಸೌಲಭ್ಯಗಳ ಒಳಗೊಂಡ ಸ್ವಬ್ದಚಿತ್ರಗಳ ನಿರ್ಮಿಸಿಕೊಂಡು, ಹಾಗೂ ಆಯಾ ಆಯಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ವ್ಯಕ್ತಿಗಳನ್ನು ಗುರುತಿಸುವ ಕೆಲಸ ಮಾಡಬೇಕು ಹಾಗೂ ಇಲಾಖೆಯ ಕಟ್ಟಡಗಳನ್ನು ಅಲಂಕಾರವನ್ನು ಮಾಡುವ ಸಲುವಾಗಿ ರಾಜ್ಯೋತ್ಸವದ ಪೂರ್ವಬಾವಿ ಸಭೆಯಲ್ಲಿ ಅಧಿಕಾರಿಗಳಿಂದ ನೀರಸ ಪ್ರತಿಕ್ರಿಯೆ ಬಂದಾಗ ಅಧಿಕಾರಿಗಳ ವಿರುದ್ಧ ಷಡಕ್ಷರಿ ಅವರು ಕೆಂಡಮಂಡಲವಾದರು.
ಶಾಸಕ ಕೆ ಷಡಕ್ಷರಿ ಮಾತನಾಡಿ ನವಂಬರ್ 1ನೇ ರಂದು ಕಲ್ಪತರು ಕ್ರೀಡಾಂಗಣದಲ್ಲಿ ಕಾರ್ಯಕ್ರಮವು ಆಯೋಜನೆ ಮಾಡಲಾಗಿದ್ದು ಆಯಾ ಆಯಾ ಇಲಾಖೆಗಳಲ್ಲಿ ಬೆಳಗ್ಗೆ 8:00ಗೆ ಧ್ವಜರೋಹಣ ನೆರವೇರಿಸಿ ನಂತರ ಗ್ರಾಮದೇವತೆ ಕೆಂಪಮ್ಮ ದೇವಿ ದೇವಸ್ಥಾನದಿಂದ ಎಲ್ಲಾ ಇಲಾಖೆಗಳ ಸ್ತಬ್ಧ ಚಿತ್ರಗಳೊಂದಿಗೆ ಮೆರವಣಿಗೆ ಮೂಲಕ ಕಲ್ಪತರು ಕ್ರೀಡಾಂಗಣಕ್ಕೆ ತಲುಪುವ ವ್ಯವಸ್ಥೆ ಆಗಬೇಕು ಕಾರ್ಯಕ್ರಮದಲ್ಲಿ ಯಾರಿಗೂ ಸಹ ತೊಂದರೆಯಾಗದಂತೆ ಕರ್ತವ್ಯ ನಿರ್ವಹಿಸಬೇಕು ಹಾಗೂ ಸರ್ಕಾರಿ ಅಧಿಕಾರಿಗಳು ಕಡ್ಡಾಯವಾಗಿ ರಾಜ್ಯೋತ್ಸವ ಆಚರಣೆಯಲ್ಲಿ ಹಾಜರಾಗಬೇಕು, ಗೈರು ಹಾಜರಾದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮವನ್ನು ಜರಗಿಸಲಾಗುವುದು ಎಂದು ತಿಳಿಸಿದರು. ಸ್ವಾತಂತ್ರ‍್ಯ ದಿನಾಚರಣೆಯಲ್ಲಿ ಉಂಟಾದ ತೊಂದರೆಯು ಮತ್ತೆ ಮರುಕಳಿಸಿದಂತೆ ಎಚ್ಚರಿಕೆ ವಹಿಸಬೇಕೆಂದು ತಹಶೀಲ್ದಾರ್ ಪೌರಯುಕ್ತರಿಗೆ ಹಾಗೂ ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಅವರಿಗೆ ಸೂಚನೆ ನೀಡಿದರು.
ಅಗ್ನಿಶಾಮಕ ಇಲಾಖೆಯವರು ಸಾರ್ವಜನಿಕರಿಗೆ ಹಾಗೂ ಮಕ್ಕಳಿಗೆ ಕ್ರೀಡಾಂಗಣದಲ್ಲಿ ಅಗ್ನಿ ಅವಘಡಕ್ಕೆ ಸಂಬAಧಿಸಿದ ಸಂದರ್ಭದಲ್ಲಿ ಪಾರಾಗುವ ತುಣುಕು ಪ್ರದರ್ಶನವನ್ನು ನೆರವೇರಿಸಬೇಕು, ಸರ್ಕಾರದ ಯೋಜನೆಗಳ ಒಳಗೊಂಡ ಚಿತ್ರಗಳನ್ನು ಜನರಿಗೆ ತಿಳಿಸುವ ವ್ಯವಸ್ಥೆ ಮಾಡಬೇಕು ಶಾಸಕ ಕೆ ಷಡಕ್ಷರಿ ಇಲಾಖಾ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ತಹಶೀಲ್ದಾರ್ ಪವನ್‌ಕುಮಾರ್ ಮಾತನಾಡಿ ಎಲ್ಲಾ ಇಲಾಖೆಗಳಲ್ಲೂ ಸಹ ದೀಪಾಲಂಕಾರ ವ್ಯವಸ್ಥೆ ಮತ್ತು ಧ್ವಜಾರೋಹಣವು ನೆರವೇರಬೇಕು ಹಾಗೂ ಎಲ್ಲಾ ಇಲಾಖೆಗಳಲ್ಲಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ವೇಳಾಪಟ್ಟಿಯಂತೆ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಪ್ಷಾರ್ಚನೆ ನಂತರ ರಾಷ್ಟçಗೀತೆ, ನಾಡಗೀತೆಯ ಜೊತೆಯಲ್ಲಿ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಎಲ್ಲಾದರೂ ಇರು ಎಂತಾದರೂ ಇರು,ಒಂದೇ ಒಂದೇ ಕರ್ನಾಟಕ ಒಂದೇ, ಹೊತ್ತಿತ್ತೋ ಹೊತ್ತಿತ್ತೋ ಕನ್ನಡ ದೀಪ, ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಕನ್ನಡ ಗೀತೆಗಳನ್ನು ಕಡ್ಡಾಯವಾಗಿ ಹಾಡಬೇಕು ಎಂದು ತಿಳಿಸಿದರು.
ಪೂರ್ವಬಾವಿ ಸಭೆಯಲ್ಲಿ ಉಪವಿಭಾಗಾಧಿಕಾರಿ ಶ್ರೀಮತಿ ಸಪ್ತ ಶ್ರೀ, ತಾಲೂಕು ದಂಡಾಧಿಕಾರಿ ಪವನ್ ಕುಮಾರ್ ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗೆಡೆ, ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಸುದರ್ಶನ್, ನಗರ ಪೊಲೀಸ್ ಠಾಣೆಯ ಸಬ್‌ಇನ್ನ್ಪೆಕ್ಟರ್ ವೆಂಕಟೇಶ್ ಸೇರಿದಂತೆ ತಾಲ್ಲೂಕು ಮಟ್ಟ್ಟದ ಇಲಾಖಾಧಿಕಾರಿಗಳು, ಕನ್ನಡ ಪರ ಸಂಘಟನೆಗಳು ಹಾಜರಿದ್ದರು.