ಮಾವಿನಕೆರೆ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಬಸಮ್ಮಚಂದ್ರಶೆಟ್ಟಿ ಅವಿರೊಧ ಆಯ್ಕೆ
ತುರುವೇಕೆರೆ : ತಾಲೂಕಿನ ಮಾವಿನಕೆರೆ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಬಸಮ್ಮಚಂದ್ರಶೆಟ್ಟಿ ಅವಿರೊಧವಾಗಿ ಆಯ್ಕೆಯಾದರು.
ಮಾವಿನಕೆರೆ ಗ್ರಾ.ಪಂ. ನಲ್ಲಿ 13 ಸದಸ್ಯ ಬಲವಿದ್ದು, ಈ ಹಿಂದಿನ ಅಧ್ಯಕ್ಷೆ ದಾಕ್ಷಾಯಣಮ್ಮ ವಿರುದ್ದ ಸದಸ್ಯರುಗಳು ಆಗಸ್ಟ್ 19 ರಂದು ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದರು. ಆ ವೇಳೆ ಅವಿಶ್ವಾಸ ಗೊತ್ತುವಳಿಯಲ್ಲಿ ದಾಕ್ಷಾಯಣಮ್ಮ ಅವರ ಅಧ್ಯಕ್ಷಗಾದಿ ಪದಚ್ಯುತಿಗೊಂಡು ಅಧ್ಯಕ್ಷ ಸ್ಥಾನ ಖಾಲಿಯಾಗಿತ್ತು. ಖಾಲಿಯಾಗಿದ್ದ ಆದ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಬಸಮ್ಮಚಂದ್ರಶೆಟ್ಟಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ನಾಮಪತ್ರ ಸಲ್ಲಿಸಿದ್ದರು. ಅಂತಿಮವಾಗಿ ಕಣದಲ್ಲಿ ಏಕೈಕರಾಗಿ ಉಳಿದ ಬಸಮ್ಮಚಂದ್ರಶೆಟ್ಟಿ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆಂದು ತಹಶೀಲ್ದಾರ್ ಚಂದ್ರಶೇಖರ್ ಘೋಷಣೆ ಮಾಡಿದರು.
ನೂತನ ಅಧ್ಯಕ್ಷರಾಗಿ ಬಸಮ್ಮಚಂದ್ರಾಶೆಟ್ಟಿ ಆಯ್ಕೆಯಾಗುತ್ತಿದ್ದಂತೆ ಅಭಿಮಾನಿಗಳು ಹಾಗೂ ಹಿತೈಷಿಗಳು ಪಟಾಕಿ ಸಿಡಿಸಿ , ಸಿಹಿ ಹಂಚಿ ಸಂಭ್ರಮಿಸಿದರು. ನೂತನ ಅದ್ಯಕ್ಷರನ್ನು ಉಪಾದ್ಯಕ್ಷ ಪಾಂಡು, ಸದಸ್ಯರಾದ ಸತೀಶ್,ಈಶ್ವರ್,ಸಂದ್ಯಾಗೋವಿಂದರಾಜ್,ಲೋಕೇಶ್,ಸುಲೋಚನಾ,ಶಾರದಮ್ಮ,ತೇಜಸ್ವಿನಿ ಹಾಗೂ ಮುಖಂಡರುಗಳಾದ ಕೆಂಪೇಗೌಡ, ಗೋವಿಂದರಾಜ್,ಗಣೇಶ್‌ಗೌಡ, ಪಿ.ಡಿ.ಓ. ಚಂದ್ರಶೇಖರ್ ಮತ್ತು ಸಿಬ್ಬಂಧಿಗಳು ನೂತನ ಅದ್ಯಕ್ಷರನ್ನು ಅಭಿನಂದಿಸಿದರು.