ಕ್ರೈಂ ನ್ಯೂಸ್ಗುಬ್ಬಿಜಿಲ್ಲೆತುಮಕೂರು
ಶಾಲಾ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ 14 ವರ್ಷದ ಬಾಲಕ ಸಾವು
- ಗುಬ್ಬಿ : ಗುಬ್ಬಿ ಪಟ್ಟಣದ ವಿನಾಯಕ ನಗರ ರಸ್ತೆಯಲ್ಲಿ ಶುಭೋದಯ ಶಾಲಾ ವಾಹನಕ್ಕೆ ದ್ವಿಚಕ್ರ ವಾಹನದಲ್ಲಿ ಬಂದ ಅಪ್ರಾಪ್ತ ವಯಸ್ಸಿನ ತೇಜಸ್ ಸುಮಾರು 14 ವರ್ಷ ವಯಸ್ಸಿನ ಬಾಲಕ ಆಯಾ ತಪ್ಪಿ ಬಸ್ ನ ಹಿಂಬದಿಯ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಧಾರುಣ ಘಟನೆ ನಡೆದಿದೆ.
ಅಪ್ರಾಪ್ತ ಮಕ್ಕಳ ಕೈಗೆ ಪೋಷಕರು ವಾಹನಗಳನ್ನು ನೀಡುತ್ತಿರುವುದು ಕಾನೂನು ಬಾಹಿರವಾಗಿದೆ ಹಾಗಾಗಿ ವಾಹನ ಚಾಲನೆ ಅವಕಾಶ ಮಾಡಿಕೊಟ್ಟ ವಾಹನ ಮಾಲೀಕರ ಮೇಲೆಯೂ ಕ್ರಮ ಜರುಗಿಸಲಾಗುವುದು ಎಂದು ಸರ್ಕಲ್ ಇನ್ಸ್ಪೆಕ್ಟರ್ ಗೋಪಿನಾಥ್ ತಿಳಿಸಿದರು.
ಸ್ಥಳಕ್ಕೆ ಗುಬ್ಬಿ ಪೊಲೀಸರು ಆಗಮಿಸಿ ಸಾವಿಗೀಡಾದ ವ್ಯಕ್ತಿಯನ್ನು ಗುಬ್ಬಿ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.