
ತುರುವೇಕೆರೆ : ತಾಲೂಕಿನ ಮಾಯಸಂದ್ರ ಹೋಬಳಿ ಸೊರವನಹಳ್ಳಿ ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ಹೊಂದಿಕೊಂಡಂತಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ಮೂಲಭೂತ ಸೌಕರ್ಯ ಕಲ್ಪಿಸಲು ಲೋಕೋಪಯೋಗಿ ಇಲಾಖೆ, ಶಿಕ್ಷಣ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಇನ್ನೂ ನಿದ್ದೆಯಿಂದ ಎದ್ದಿಲ್ಲವೇ ಅಥವಾ ಘಳಿಗೆ ಕೂಡಿಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ, ಕಾರಣ ಶಾಲೆಯ ತಡೆಗೋಡೆಗೆ ಹೊಂದಿಕೊಂಡಂತಿರುವ ಚರಂಡಿಯಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಕೊಳೆತು ನಾರುವ ಕಸ ಕಡ್ಡಿಗಳಿಂದ ಕೂಡಿರುವ ಅನೈರ್ಮಲ್ಯದಿಂದಾಗಿ ಈ ಶಾಲೆಯಲ್ಲಿ ಒಂದನೇ ತರಗತಿಯಿಂದ 5ನೇ ತರಗತಿ ಓದುವ ಪುಟ್ಟ ಮಕ್ಕಳಲ್ಲಿ ಅನಾರೋಗ್ಯ ರುದ್ರ ತಾಂಡವ ಆಡುತ್ತಿದೆ, ಲೋಕೋಪಯೋಗಿ ಇಲಾಖೆಗೆ ಒಳಪಡುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಶಾಲೆಯ ತಡೆಗೋಡೆ ಇದ್ದು ಇಲ್ಲಿ ಕಲುಷಿತ ನೀರು ನಿಂತಲ್ಲೇ ನಿಂತು ಯಾವುದೇ ರೀತಿಯ ಚರಂಡಿ ಇಲ್ಲದೆ ಪುಟ್ಟ ಮಕ್ಕಳಲ್ಲಿ ಅನಾರೋಗ್ಯ ಆವರಿಸುವ ಭಯದಿಂದ ಪೋಷಕರಲ್ಲಿ ಆತಂಕ ಮೂಡಿದ್ದು ಇದರ ಜೊತೆಗೆ ಶಾಲೆಯ ಆವರಣದಲ್ಲಿ ಸುಮಾರು ವರ್ಷಗಳಿಂದ ಒತ್ತುವ ಬೋರ್ವೆಲ್ ಕೆಟ್ಟು ನಿಂತು ಈ ಬೋರ್ವೆಲ್ನಿಂದಾಗಿ ಶಾಲೆಯ ಮಕ್ಕಳು ಸಂಚರಿಸುವ ವೇಳೆ ಅವಗಡ ಸಂಭವಿಸುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿದ್ದು ಇದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಇಲಾಖೆಗಳಿಗೆ ಮಾಹಿತಿ ಸಹ ನೀಡಿದ್ದು ಯಾವುದೇ ಪ್ರಯೋಜನವಿಲ್ಲ, ಇನ್ನು ಈ ಶಾಲೆಯ ಮುಂಭಾಗ ಇರುವ ರಸ್ತೆಯಲ್ಲಿ ದಿನ ನಿತ್ಯ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು, ತಾಲೂಕು ಪಂಚಾಯಿತಿ ಅಧಿಕಾರಿಗಳು ದಿನನಿತ್ಯ ಇದೇ ರಸ್ತೆಯಲ್ಲಿ ಸಂಚರಿಸುತ್ತಾ ನಮಗೆ ಯಾವುದು ಅನ್ವಯಿಸುವುದಿಲ್ಲ ಎಂಬ ಮನಸ್ಥಿತಿಯಲ್ಲಿ ಕೈ ಚೆಲ್ಲಿ ಕುಳಿತಿರುವುದು ಎಷ್ಟು ಸರಿ ಇದೆ ಎಂಬುದೇ ಒಂದು ಯಕ್ಷಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ ಹಾಗಾದರೆ ಇದನ್ನು ಸರಿಪಡಿಸಲು ಶಿಕ್ಷಣ ಮಂತ್ರಿಗಳು, ಲೋಕೋಪಯೋಗಿ ಮಂತ್ರಿಗಳು, ಪಂಚಾಯತ್ ರಾಜ್ ಮಂತ್ರಿಗಳೇ ಏನಾದರೂ ಸ್ಥಳಕ್ಕೆ ಬರಬೇಕೇ ಎಂಬುದು ಒಂದು ನಿಗೂಢ ಕರ ಪ್ರಶ್ನೆಯಾಗಿ ಉಳಿದಿದೆ, ತಾಲೂಕು ವ್ಯಾಪ್ತಿಯ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಈ ನಿರ್ಲಕ್ಷತನದಿಂದ ಶಾಲಾ ಮಕ್ಕಳಲ್ಲಿ ಅನಾರೋಗ್ಯದಿಂದ ಅನಾಹುತ ಸಂಭವಿಸಿದರೆ ಇದರ ನೇರ ಹೊಣೆ ಹೊರುವರು ಯಾರು? ಇದೇ ರೀತಿಯಾದರೆ ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಾತಿ ಮಾಡಲು ಯಾವ ಪೋಷಕರು ತಾನೆ ಮುಂದಾಗುತ್ತಾರೆ? ಇದಲ್ಲದೆ ಇಂತಹ ನಿರ್ಲಕ್ಷ್ಯ ಅಧಿಕಾರಿಗಳಿಂದ ಮೂಲಭೂತ ಸೌಕರ್ಯ ಸಿಗುತ್ತದೆ ಎಂಬುದು ದೂರದ ಮಾತು, ಜೊತೆಗೆ ಸರ್ಕಾರಿ ಶಾಲೆಗಳನ್ನೂ ಮುಚ್ಚಲು ಇಂತಹ ಬೇಜಾಬ್ದಾರಿ ಇಲಾಖೆಗಳೇ ಕಾರಣವಾಗಬಹುದೆ?
- ವರದಿ: ಮಂಜುನಾಥ್ ಕೆ ಎ ತುರುವೇಕೆರೆ.



