ಕೆಂಪಮ್ಮದೇವಿ ಜಾತ್ರಾ ಮಹೋತ್ಸವಕ್ಕೆ ದಲಿತರಿಗೆ ಸಮಾಜಿಕ ಬಹಿಷ್ಕಾರ : ಕುಣಿಕೇನಹಳ್ಳಿ ಗ್ರಾಮದ ದೇವಸ್ಥಾನಗಳನ್ನು ಸರ್ಕಾರ ವಶಕ್ಕೆ ಪಡೆದು ಸಮಾಜಿಕ ನ್ಯಾಯ ಒದಗಿಸಲು ಛಲವಾದಿ ಮಹಾಸಭಾ ಕಾರ್ಯದರ್ಶಿ ಜಗದೀಶ್ ಆಗ್ರಹ

ತುರುವೇಕೆರೆ : ತಾಲೂಕಿನ ಕುಣಿಕೇನಹಳ್ಳಿ ಗ್ರಾಮದಲ್ಲಿರುವ ಕೆಂಪಮ್ಮ ದೇವಿ ಜಾತ್ರಾ ಮಹೋತ್ಸವಕ್ಕೆ ದಲಿತರಿಗೆ ಸಮಾಜಿಕ ಬಹಿಷ್ಕಾರ ಹಾಕಿರುವ ಮೇಲ್ವರ್ಗದವರ ನಡೆಯನ್ನು ವಿರೋಧಿಸಿ, ದೇಗುಲವನ್ನು ಸರ್ಕಾರಕ್ಕೆ ವಶಪಡಿಸಿಕೊಂಡು ಜಿಲ್ಲಾಡಳಿತ ಸಾಮಾಜಿಕ ನ್ಯಾಯ ನೀಡಬೇಕೆಂದು ತಾಲ್ಲೂಕು ಛಲವಾದಿ ಮಹಾಸಭಾ ಕಾರ್ಯದರ್ಶಿ ಕುಣಿಕೆಹಳ್ಳಿ ಜಗದೀಶ್ ಆಗ್ರಹಿಸಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡುತ್ತಾ ಕೆಂಪಮ್ಮದೇವಿ ಜಾತ್ರಾ ಮಹೋತ್ಸವ ವಿಷಯಕ್ಕೆ ಸಂಬಂಧಿಸಿದಂತೆ ಮೂರು ತಿಂಗಳ ಹಿಂದೆ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಮಧ್ಯಪ್ರವೇಶಿಸಿ ಗ್ರಾಮಸ್ಥರುಗಳ ನಡುವೆ ಶಾಂತಿ ಸಭೆಯನ್ನು ಕೂಡ ಮಾಡಲಾಗಿತ್ತು.ಆದರೆ ಗ್ರಾಮದಲ್ಲಿ ಸಾಮರಸ್ಯ ಮೂಡಿಸಲು ತಾಲ್ಲೂಕು ಆಡಳಿತ ವಿಫಲವಾಗಿದೆ ಎಂದು ಹೇಳಿದರು.
ಕಳೆದ 15 ದಿನಗಳ ಹಿಂದೆ ನಡೆದ ಶಾಂತಿ ಸಭೆಯ ನಿರ್ಣಯದಂತೆ ಜಾತ್ರಾ ಮಹೋತ್ಸವ ನಡೆಸಲು ತಾಲೂಕು ಆಡಳಿತದ ವತಿಯಿಂದ ಕಂದಾಯ ತನಿಖಾಧಿಕಾರಿ ಶಿವಕುಮಾರಸ್ವಾಮಿ ಹಾಗೂ ಸರ್ಕಾರಿ ಅಧಿಕಾರಿಗಳು ಗ್ರಾಮದ ಕೆಲ ಮುಖಂಡರುಗಳ ಒಳಗೊಂಡಂತೆ ಒಂದು ಕಮಿಟಿಯನ್ನು ಸಹ ರಚನೆ ಮಾಡಿದ್ದು ಜಾತ್ರಾ ಮಹೋತ್ಸವ ನಡೆಸಲು ದಿನಾಂಕವನ್ನು ಸಹ ನಿಗದಿ ಮಾಡಲಾಗಿತ್ತು,
ಗ್ರಾಮಸ್ಥನಾದ ಮೇಲ್ವರ್ಗದ ಕೆ ಎಂ ಕೃಷ್ಣಸ್ವಾಮಿ ಎಂಬ ವ್ಯಕ್ತಿ ಕಮಿಟಿಯಲ್ಲಿದ್ದಂತಹ ಸದಸ್ಯರುಗಳಿಗೆ ತಾಲೂಕು ಆಡಳಿತದಿಂದ ಜಾತ್ರಾ ಮಹೋತ್ಸವ ನಡೆಸುವ ತೀರ್ಮಾನ ಮಾಡಿದೆ ಹಾಗಾಗಿ ನೀವ್ಯಾರು ಭಾಗವಹಿಸಬಾರದು ಅವರೇ ಮಾಡಿಕೊಳ್ಳಲಿ ಎಂದು ದಾರಿ ತಪ್ಪಿಸುವ ಕೆಲಸವನ್ನು ಮಾಡಿದ್ದರು.
ಕೆ ಎಮ್ ಕೃಷ್ಣಸ್ವಾಮಿ ಎಂಬ ವ್ಯಕ್ತಿಯಿಂದ ಜಾತ್ರಾ ಮಹೋತ್ಸವವು ನಿಂತು ಹೋಗಿದ್ದು, ತಾಲೂಕು ಆಡಳಿತದ ಒಬ್ಬ ವೆಕ್ತಿಗೆ ಮನ್ನಣೆ ನೀಡಿ ಕಮಿಟಿಯನ್ನು ತೀರ್ಮಾನವನ್ನು ಕಡೆಗಣಿಸಿದ್ದಾರೆ ಎಂದರು.
ನಾವುಗಳು ಈಗಾಗಲೇ ಇದಕ್ಕೆ ಸಂಬಂಧಪಟ್ಟಂತೆ ಅಸ್ಪೃಶ್ಯತೆ ಆಚರಣೆಗೆ ಮುಖ್ಯ ಕಾರಣಕರ್ತನಾಗುತ್ತಿರುವ ಕೆ ಎಂ ಕೃಷ್ಣಸ್ವಾಮಿ ವಿರುದ್ಧ ದಂಡಿನ ಶಿವರ ಪೊಲೀಸ್ ಠಾಣೆಗೆ ದೂರನ್ನು ದಾಖಲಿಸಲಾಗಿದೆ. ಆದರೆ ಪೊಲೀಸರು ದೂರು ದಾಖಲಿಗೆ ತಿಪ್ಪೇಸಾರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು,
ಆದ್ದರಿಂದ ತಾಲ್ಲೂಕಿನ ದಂಡಾಧಿಕಾರಿಯವರಿಗೆ ಕುಣಿಕೇನಹಳ್ಳಿ ಗ್ರಾಮದಲ್ಲಿರುವ ಎಲ್ಲಾ ದೇವಸ್ಥಾನಗಳನ್ನು ಸರ್ಕಾರದ ವಶಕ್ಕೆ ಪಡೆದು ಸರ್ಕಾರದ ನಿಯಮನುಸಾರ ಜಾತ್ರಾ ಮಹೋತ್ಸವವನ್ನು ನಡೆಸಿದರೆ ಸಮಾಜಿಕ ನ್ಯಾಯ ನೀಡಿದಂತಾಗುತ್ತದೆ ಎಂದು ಹೇಳಿದರು.
ನಮ್ಮ ಮನವಿಗೆ ಸ್ಪಂದಿಸದಿದ್ದರೆ ಕುಣಿಕೇನಹಳ್ಳಿ ಗ್ರಾಮದಿಂದ ಗುರುವಾರದಂದು ತುರುವೇಕೆರೆಯ ತಾಲೂಕು ಆಡಳಿತದ ಕಚೇರಿಯವರೆಗೂ ದಲಿತಪರ ಸಂಘಟನೆ ಮತ್ತು ವಿವಿಧ ಪ್ರಗತಿಪರ ಸಂಘಟನೆಗಳೊಂದಿಗೆ ಪಾದಯಾತ್ರೆ ಹಮ್ಮಿಕೊಂಡು ತಾಲೂಕು ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು.
ಇದರ ಜೊತೆಗೆ ಅಸ್ಪೃಶ್ಯತೆ ಆಚರಣೆ ಮಾಡುತ್ತಿರುವ ಕೆಲ ಮೇಲ್ವರ್ಗದ ವ್ಯಕ್ತಿಗಳ ಮೇಲೆ ಜಾತಿನಿಂದನೆ ದೂರನ್ನು ದಾಖಲು ಮಾಡದಿದ್ದರೆ ಇನ್ನೆರಡು ದಿನದಲ್ಲಿ ದಂಡಿನ ಶಿವರ ಪೊಲೀಸ್ ಠಾಣೆ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದ ಅವರು ಈ ಕೂಡಲೇ ಜಿಲ್ಲಾಡಳಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ತಾಲೂಕು ಆಡಳಿತ ಮತ್ತು ತುರುವೇಕೆರೆ ತಾಲೂಕು ಪೊಲೀಸ್ ಇಲಾಖೆ ಶ್ರೀಘ್ರವಾಗಿ ಕ್ರಮ ಕೈಗೊಂಡು ಸಾಮಾಜಿಕ ನ್ಯಾಯ ನೀಡಬೇಕು ಎಂದು ಆಗ್ರಹ ಪಡಿಸಿದರು.
ಈ ಸಂದರ್ಭದಲ್ಲಿ ಚಲವಾದಿ ಮಹಾಸಭಾದ ಅಧ್ಯಕ್ಷ ಡೋಂಕಿಹಳ್ಳಿ ರಾಮಣ್ಣ, ಸೋಮಶೇಖರಯ್ಯ, ಮಹದೇವಯ್ಯ, ಪ್ರಸನ್ನ,ನೀರುಗುಂದ ಮಹೇಶ್ ಮಾಸ್ಟರ್, ಕಲ್ಲು ಬೋರನಹಳ್ಳಿ ತಿಮ್ಮಣ್ಣ, ಲೋಕೇಶ್,ರಾಜು, ಸಾಸಲು ಕೃಷ್ಣಮೂರ್ತಿ,ಹುಲ್ಲೇಕೆರೆ ಕೃಷ್ಣಮೂರ್ತಿ,ದೇವರಾಜ್ ಅಪ್ಪಸಂದ್ರ, ಲೋಕೇಶ್, ಅಜ್ಜನಹಳ್ಳಿ, ದಾಸಪ್ಪ, ಶಂಕರಯ್ಯ, ಮೂಡ್ಲಯ್ಯ ,ಬಸವರಾಜು,ತಿಮ್ಮರಾಜು ಸೇರಿದಂತೆ ಇತರೆ ಮುಖಂಡರು ಹಾಜರಿದ್ದರು.



