ಕುಣಿಗಲ್ಕೃಷಿಜಿಲ್ಲೆತುಮಕೂರುರಾಜಕೀಯಸುದ್ದಿ

ಕುಣಿಗಲ್ : ಸಂತೆಮಾವತ್ತೂರು ಸಹಕಾರ ಸಂಘದ ಚುನಾಣೆಯಲ್ಲಿ ಮತಪತ್ರ ದುರುಪಯೋಗ ಆರೋಪ: ಚುನಾವಣೆ ರದ್ದು

ಕುಣಿಗಲ್ : ತಾಲೂಕಿನ ಸಂತೆ ಮಾವತ್ತೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯಬೇಕಾಗಿತ್ತು. ಚುನಾವಣೆಯ ಚುನಾವಣಾ ಅಧಿಕಾರಿ ರಾಜಕೀಯ ಒತ್ತಡಕ್ಕೆ ಮಣಿದು ಮತ ಪತ್ರ ದುರುಪಯೋಗ ಮಾಡಿಕೊಂಡು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಅನುಕೂಲ ಮಾಡುತ್ತಿದ್ದಾರೆ ಎಂದು ಈತನನ್ನು ಈ ಕೂಡಲೇ ಅಮಾನತು ಮಾಡಬೇಕೆಂದು ಜೆಡಿಎಸ್ ತಾಲೂಕ್ ಅಧ್ಯಕ್ಷ ಬಿ ಎನ್ ಜಗದೀಶ್ ಮತ್ತು ಮುಖಂಡರುಗಳು ಪ್ರತಿಭಟನೆ ನಡೆಸಿದ ಪರಿಣಾಮ ಚುನಾವಣೆ ರದ್ದಾಗಿರುವ ಘಟನೆ ನಡೆದಿದೆ.

ಸಂತೆ ಮಾವುತೂರಿನ ವಿ ಎಸ ಎಸ ಏನ್ ಸದಸ್ಯರ ಚುನಾವಣೆ ಭಾನುವಾರ ನಡೆಯುತ್ತಿತ್ತು ಈ ಚುನಾವಣೆಗೆ ಚುನಾವಣಾ ಅಧಿಕಾರಿ ಶಾಸಕರ ಒತ್ತಡಕ್ಕೆ ಮಣಿದು ಸುಮಾರು ಬ್ಯಾಲೆಟ್ ಪೇಪರ್ಗಳನ್ನು ಕಾಂಗ್ರೆಸ್ ಬೆಂಬಲಿತ 11 ಅಭ್ಯರ್ಥಿಗಳು ಮಾತ್ರ ಗೆಲ್ಲಬೇಕೆಂದು ಮತ ಪತ್ರವನ್ನು ಮೊದಲೇ ನೀಡಿ  ಚುನಾವಣೆಯನ್ನು ಅಕ್ರಮವಾಗಿ ನಡೆಸುತ್ತಿದ್ದನು.

 

 

ಮತಗಟ್ಟೆಯ ಒಳಭಾಗದಲ್ಲಿ ಏಜೆಂಟರಾಗಿ ಕುಳಿತಿದ್ದ ದಾಸೇಗೌಡ ಹಾಗೂ ಬಾಲು ನಾಯಕ್ ಚುನಾವಣಾ ಅಧಿಕಾರಿ ಮತಗಟ್ಟೆ ಒಳಬಾಗದಲ್ಲಿ ಸಹಾಯ   ಮಾಡುತ್ತಿರುವ ಅಕ್ರಮವನ್ನು ಕಂಡುಹಿಡಿದ ಹಿನ್ನೆಲೆಯಲ್ಲಿ ಚುನಾವಣೆ ಅಕ್ರಮ ಬೆಳಕಿಗೆ ಬಂದಿತು. ಮತಗಟ್ಟೆ ಅಧಿಕಾರಿ ವಾಮ ಮಾರ್ಗದಲ್ಲಿ ಚುನಾವಣೆಯನ್ನು ನಡೆಸಿದರೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಗತಿ ಏನಾಗಬೇಕು? ನಮ್ಮ ದೇಶದ ಸಂವಿಧಾನ ತತ್ವ ಸಿದ್ಧಾಂತಗಳು ಎತ್ತ ಸಾಗುತ್ತಿದೆ ಎಂದು ಪ್ರಶ್ನೆ ಮಾಡಿ ಬೇಸರ ವ್ಯಕ್ತಪಡಿಸಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯನ್ನು ರದ್ದುಪಡಿಸಬೇಕೆಂದು ಜಗದೀಶ್ ಒತ್ತಾಯಿಸಿದ ಅವರು
ಭಾನುವಾರ ನಡೆಯುತ್ತಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 11 ಜನ ಗೆಲ್ಲಬೇಕು ಎಂಬ ಉದ್ದೇಶದಿಂದ ಚುನಾವಣಾ ಅಧಿಕಾರಿ ಸಂಪೂರ್ಣ ಅಕ್ರಮ ಎಸಗಿದ್ದಾರೆ ಈತನ ಮೇಲೆ ಸರ್ಕಾರ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳದಿದ್ದರೆ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು ಈ ಸಂಬಂಧ ಪೊಲೀಸರಿಗೆ ದೂರು ದಾಖಲಿಸಿದ್ದೇವೆ ಎಂದು ಜೆಡಿಎಸ್ ತಾಲೂಕ ಅಧ್ಯಕ್ಷ ಬಿಎನ್ ಜಗದೀಶ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮಾಜಿ ಅಧ್ಯಕ್ಷ ಬಲರಾಮ್, ಮಾಜಿ ತಾಪಂ ಅಧ್ಯಕ್ಷ ಹರೀಶ್ ನಾಯಕ್, ತರೀಕೆರೆ ಪ್ರಕಾಶ್, ದಾಸೇಗೌಡ, ಶಿವಕುಮಾರ್, ಒಳಗೊಂಡಂತೆ ಅನೇಕ ಮುಖಂಡರು ಸಾರ್ವಜನಿಕರು ಉಪಸ್ಥಿತರಿದ್ದರು.

ಭಾನುವಾರ ಸಂತೆ ಮಾವುತೂರಿನಲ್ಲಿ ನಡೆಯುತ್ತಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ರದ್ದು ಪಡಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

 

ವರದಿ: ರೇಣುಕಾ ಪ್ರಸಾದ್

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker