ಗುಬ್ಬಿಬ್ರೇಕಿಂಗ್ ಸುದ್ದಿ

ಪುಟ್ಟ ಬಾಲಕನ ಮೇಲೆ ಹರಿದ ಎಲೆಕ್ಟ್ರಿಕ್ ಕಾರು : ಮಗು ಸ್ಥಳದಲ್ಲಿಯೇ ಸಾವು

ಗುಬ್ಬಿ :-ಅಂಗಡಿ ಮುಂದಿನ ರಸ್ತೆ ಬದಿಯಲ್ಲಿ ಸೈಕಲ್ ಮೇಲೆ ಕುಳಿತು ಆಟವಾಡುತ್ತಿದ್ದ ಪುಟ್ಟ ಬಾಲಕನ ಮೇಲೆ ಎಲೆಕ್ಟ್ರಿಕಲ್ ಕಾರೊಂದು ಹರಿದ ಪರಿಣಾಮ ಮಗು ಸ್ಥಳದಲ್ಲಿಯೇ ಸಾವನಪ್ಪಿರುವ ಹೃದಯ ವಿದ್ರಾವಕ ಘಟನೆ ನಿಟ್ಟೂರು ಗ್ರಾಮದಲ್ಲಿ ನಡೆದಿದೆ.

ತಾಲ್ಲೂಕಿನ ನಿಟ್ಟೂರು ಗ್ರಾಮದ ರಾಘವೇಂದ್ರ ಟೆಕ್ಸ್ ಟೈಲ್ ಜವಳಿ ಅಂಗಡಿಯ ಮಾಲೀಕನ ಮಗ ಶೋಭಿತ್ ರಾಘವ್ ಸುಮಾರು 13 ವರ್ಷದ ಪುಟ್ಟ ಬಾಲಕ ಅಪಘಾತದಿಂದ ಮೃತಪಟ್ಟ ದುರ್ದೈವಿ ಎನ್ನಲಾಗಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

 

 

ನಿಟ್ಟೂರು ಗ್ರಾಮದಲ್ಲಿ ಬಟ್ಟೆ ಅಂಗಡಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಮೊಹನ್ ಕುಮಾರ್ ಮತ್ತು ಪತ್ನಿ ಶಾಲೆಗೆ ರಜೆ ಇದ್ದ ಕಾರಣ ಮಗುವನ್ನು ಕೂಡ ಅಂಗಡಿಯ ಬಳಿ ಕರೆದೋಯ್ದಿದ್ದು, ಅಂಗಡಿಯ ಮುಂದೆ ತನ್ನ ಸೈಕಲ್ ನಲ್ಲಿ ಕುಳಿತು ಆಟವಾಡುತ್ತಿದ್ದ ಸಂದರ್ಭದಲ್ಲಿ ಯಮ ಸ್ವರೂಪಿಯಾಗಿ ಬಂದ ಕಾರು ಏಕಾಏಕಿ ಮಗುವಿನ ಮೇಲೆ ಹರಿದು ಮಗುವನ್ನ ಸ್ಥಳದಲ್ಲಿಯೇ ಬಲಿ ಪಡೆದ ಘಟನೆ ಇಂದು ನಡೆದಿದೆ.

ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯರ ಸಹಾಯದಿಂದ ಗುಬ್ಬಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯವೇ ಮಗು ತನ್ನ ಕೊನೆಯುಸಿರು ಎಳೆದಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.ಸ್ಥಳಕ್ಕೆ ಗುಬ್ಬಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮಗುವಿನ ಸಾವಿಗೆ ಕಾರಣರಾದ ಕಾರು ಮತ್ತು ಕಾರಿನ ಚಾಲಕನ ವಿರುದ್ಧ ದೂರು ದಾಖಲಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker