ಕೊಂಡವಾಡಿ ಚಂದ್ರಶೇಖರ್ ಶಾಸಕರಾಗಲಿ : ಶ್ರೀ ಹನುಮಂತನಾಥ ಸ್ವಾಮೀಜಿ
ಮಧುಗಿರಿ ಕ್ಷೀರಭವನದಲ್ಲಿ ಕೊಂಡವಾಡಿ ಚಂದ್ರಶೇಖರ್ ಅವರ 54 ನೇ ಹುಟ್ಟುಹಬ್ಬ ಆಚರಣೆ
ಮಧುಗಿರಿ: ಬಡತನದಿಂದ ಬಂದ ವ್ಯಕ್ತಿ ಬಡವರ ಕಷ್ಟಕ್ಕೆ ಪರಿಹಾರ ನೀಡಿದರೆ ಅವನು ಜನನಾಯಕ. ಅಂತಹ ವ್ಯಕ್ತಿತ್ವವುಳ್ಳ ಕೊಂಡವಾಡಿ ಚಂದ್ರಶೇಖರ್‌ಗೆ ಶಾಸಕರಾಗುವ ಅರ್ಹತೆಯಿದ್ದು ಆ ನಿಟ್ಟಿನಲ್ಲಿ ಮುಂದುವರೆಯಲಿ ಎಂದು ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಹನುಮಂತನಾಥ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಕ್ಷೀರಭವನದಲ್ಲಿ ತುಮುಲ್ ರೈತ, ನೌಕರರ ಕಲ್ಯಾಣ ಟ್ರಸ್ಟ್ ಹಾಗೂ ಕೊಂಡವಾಡಿ ಚಂದ್ರಶೇಖರ್‌ರ 54 ನೇ ಹುಟ್ಟುಹಬ್ಬ, ಅಭಿಮಾನಿ ಬಳಗದಿಂದ ನಡೆದ ಉಚಿತ ಆರೋಗ್ಯ ತಪಾಸಣಾ ಹಾಗೂ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು ಕೊಂಡವಾಡಿ ಚಂದ್ರಶೇಖರ್ ತುಮುಲ್ ಅಧ್ಯಕ್ಷರಾದ ನಂತರ ಜಿಲ್ಲೆಯಲ್ಲಿ ಕ್ಷೀರಕ್ರಾಂತಿಯಾಗಿದೆ. ನಷ್ಟದಲ್ಲಿದ್ದ ಒಕ್ಕೂಟವನ್ನು ಅಭಿವೃದ್ಧಿಪಡಿಸಿ ರೈತ ಕಲ್ಯಾಣ ಟ್ರಸ್ಟ್ ಆರಂಭಿಸಿ ಹಾಲು ಉತ್ಪಾದಕರ ಬದುಕಿಗೆ ಸಹಕಾರಿಯಾಗಿದ್ದಾರೆ. ರೈತ ಕುಟುಂಬದಲ್ಲಿ ಹುಟ್ಟಿ ಹಲವು ರೈತಪರ ಯೋಜನೆ ಜಾರಿಗೆ ತಂದಿದ್ದು ಸಹಸ್ರಾರು ಕುಟುಂಬಗಳು ಹೈನುಗಾರಿಕೆಯಲ್ಲಿ ತೊಡಗಿವೆ. ಚಂದ್ರಶೇಖರ್ ತುಮುಲ್ ಅಧ್ಯಕ್ಷರಾಗಿ ಉತ್ತಮ ಆಡಳಿತ ನೀಡಿದ್ದು, ಜನರ ನಾಡಿ ಮಿಡಿತ ಅರಿತಿದ್ದಾರೆ. ನಂಬಿದವರ ಕಾಯುವ ಗುಣ ಇರುವವನು ನಾಯಕರಾಗುತ್ತಾರೆ. ಇಂತವರು ರಾಜಕೀಯಕ್ಕೆ ಬಂದರೆ ಜನರಿಗೂ ಅನುಕೂಲವಾಗಲಿದ್ದು, ಅವರು ಮುಂದೆ ಶಾಸಕರಾಗಿ ಬರಲಿ. ಮನುಷ್ಯ ಎಲ್ಲಿದ್ದರೂ ಆರೋಗ್ಯವಿಲ್ಲದಾಗಿದ್ದು ದ್ವೇಷ, ಅಸೂಯೆಯಿಂದ ದೂರವಾದರೆ ಮಾತ್ರ ನೆಮ್ಮದಿ ಸಾಧ್ಯ.
ನಮ್ಮ ಹುಟ್ಟನ್ನು ಯಾರೂ ನೋಡಲ್ಲ. ಆದರೆ ನಮ್ಮ ಅಂತ್ಯವನ್ನು ಇಡೀ ಜಗತ್ತೇ ನೋಡಬೇಕು. ಅಂತಹ ನಡತೆ ನಮಗಿದ್ದರೆ ಆ ಜನ್ಮ ಸಾರ್ಥಕ. ತುಮುಲ್ ಇಂದು ಯಶಸ್ಸಿಗೆ ಎಲ್ಲ ರೈತರು ಕಾರಣರಾಗಿದ್ದು ಅದನ್ನು ಬೆಳೆಸುವುದು ನಿಮ್ಮ ಕೈಲಿದೆ. ಯಾರನ್ನು ನೀವು ಗೌರವಿಸದಿದ್ದರೂ ಸರಿ ಆದರೆ ರೈತ ಹಾಗೂ ಸೈನಿಕನ ಕ್ಷೇಮವನ್ನು ನಾವು ಸದಾ ಬಯಸಬೇಕು. ಸಾವಿರಾರು ಅನ್ನದಾತರ ನೆರವಿನಿಂದ ಮಠ ನಡೆಯುತ್ತಿದೆ. ನೀವು ಮಕ್ಕಳನ್ನು ಸಂಸ್ಕಾರವAತರಾಗಿ ಮಾಡಿ. ಸಂಕಷ್ಟದಲ್ಲಿದ್ದರೆ ನಮ್ಮ ಮಠಕ್ಕೆ ತಂದು ಬಿಡಿ. 1 ನೇ ತರಗತಿಯಿಂದ ಮೆಡಿಕಲ್ ವರೆಗೂ ಉಚಿತವಾಗಿ ನಾನೇ ಓದಿಸಿ ಸಮಾಜದ ಆಸ್ತಿಯಾಗಿ ಮಾಡುತ್ತೇನೆ. ಸಾವು ಎಲ್ಲಿದ್ದರೂ ಬರುತ್ತೆ ಹಾಗಂತ ಭಗವಂತ ನೀಡಿದ ಸುಂದರ ಬದುಕು ಹಾಗೂ ದೇಶಕ್ಕೆ ಅನ್ನ ನೀಡುವ ಪುಣ್ಯವನ್ನು ಆತ್ಮಹತ್ಯೆಯ ಮೂಲಕ ಯಾವ ರೈತನೂ ಕಳೆದುಕೊಳ್ಳಬಾರದು. ಯಾರು ಮೋಸ ಮಾಡಿದರೂ ಹಸು ಹಾಗೂ ಹಾಲು ಒಕ್ಕೂಟ ಮೋಸ ಮಾಡಲ್ಲ ಎಂದರು.
ಸಿದ್ದರಬೆಟ್ಟ ಕ್ಷೇತ್ರದ ಶ್ರೀ ವೀರಭದ್ರ ಶಿವಾಚಾರ್ಯ ಶ್ರೀಗಳು ಮಾತನಾಡಿ ಕೊಂಡವಾಡಿ ಚಂದ್ರಶೇಖರ್ ಜನಪರವಾದ ರೈತಕಲ್ಯಾಣ ಟ್ರಸ್ಟ್ ಆರಂಭಿಸಿದ್ದು ಹೈನುಗಾರಿಕೆ ಅಭಿವೃದ್ಧಿ ಪಥದಲ್ಲಿದೆ. ಬರಪೀಡಿತ ಕ್ಷೇತ್ರದಲ್ಲಿ ಹೈನುಗಾರಿಕೆಯಿಂದ ರೈತ ಸದೃಡವಾಗಿದ್ದಾನೆ. ಮುಂದೆ ತುಮುಲ್ ವತಿಯಿಂದ ಕಷ್ಟದಲ್ಲಿನ ರೈತರಿಗೆ ಹಸು ಕೊಳ್ಳಲು ಬಡ್ಡಿರಹಿತ ಸಾಲ ನೀಡಿ ಹಾಲಿನ ರೂಪದಲ್ಲೇ ಸಾಲವನ್ನು ಪಡೆದು ಅವನ ಅಭಿವೃದ್ಧಿಗೆ ಶ್ರಮಿಸಲಿ. ಉತ್ತಮ ಆರೋಗ್ಯಕ್ಕೆ ತುಪ್ಪ ಸಹಕಾರಿಯಾಗಿದ್ದು, ಉತ್ಪಾದಕರಿಗೆ ಕನಿಷ್ಟ ದರದಲ್ಲಿ ತುಪ್ಪ ವಿತರಣೆಯಾಗಲಿ. ಹಾಲಿನ ಉತ್ಪನ್ನಗಳು ಆರೋಗ್ಯಕ್ಕೆ ಸಹಕಾರಿಯಾಗಿದ್ದು, ಆರ್ಥಿಕತೆಯ ಜೊತೆ ಆರೋಗ್ಯವು ನಿಮ್ಮದಾಗಲಿ. ಈ ಕ್ಷೀರಕ್ರಾಂತಿಗೆ ಕಾರಣರಾದ ಕೊಂಡವಾಡಿ ಚಂದ್ರಶೇಖರ್ ಭವಿಷ್ಯ ಉತ್ತಮವಾಗಲಿ ಎಂದರು.
ತುಮುಲ್ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ಮಾತನಾಡಿ ದೇಶದ ಯಾವುದೇ ಹಾಲು ಒಕ್ಕೂಟ ಮಾಡದ ಕೆಲಸವನ್ನು ರೈತಕಲ್ಯಾಣ ಟ್ರಸ್ಟ್ ಸ್ಥಾಪಿಸಿ ಮಾಡಲಾಗಿದೆ. ಹುಟ್ಟುಹಬ್ಬವನ್ನು ನನ್ನ ಸಹಕಾರಿಗಳೊಂದಿಗೆ ಆಚರಿಸಲು ಇಚ್ಛಿಸಿದ್ದು, ಬೃಹತ್ ಆರೋಗ್ಯ ಶಿಬಿರವನ್ನು ನಡೆಸಿ ಅಳಿಲು ಸೇವೆ ಮಾಡಿದ್ದೇನೆ. ಮುಂದೆ ಮತ್ತಷ್ಟೂ ಜನಪರ ಕಾರ್ಯ ಮಾಡಲು ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದ್ದು, ಕ್ಷೇತ್ರದ ಸೇವೆಯನ್ನು ಮುಂದುವರೆಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ರೇಷ್ಮೆ ನಿಗಮದ ಅಧ್ಯಕ್ಷ ಎಸ್.ಆರ್.ಗೌಡ, ಮಾಜಿ ಜಿ.ಪಂ. ಸದಸ್ಯ ಕೆಂಚಮಾರಯ್ಯ, ತುಮುಲ್ ವ್ಯವಸ್ಥಾಪಕ ನಿರ್ದೇಶಕ ಸುಭ್ರಾಯ ಭಟ್ ಮಾತನಾಡಿದರು. ಹಾಲು ಉತ್ಪಾದಕರ ಪ್ರತಿಭಾವಂತ ಮಕ್ಕಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ಧನ ಹಾಗೂ ಮೃತಪಟ್ಟ ರೈತರು, ಹಸುಗಳ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕೆಎಂಎï ನಿರ್ದೇಶಕ ಪ್ರಕಾಶ್, ತುಮುಲ್ ಜಿ.ಎಂ. ನಾಗರಾಜ್, ಜಿಲ್ಲಾ ರೋಟರಿ ಅಧ್ಯಕ್ಷ ಬಸವರಾಜ್, ತಾ.ಪಂ. ಮಾಜಿ ಅಧ್ಯಕ್ಷ ಸುನಂದಾಸಿದ್ದಪ್ಪ, ಮಾಜಿ ಉಪಾಧ್ಯಕ್ಷ ಲಕ್ಷ್ಮೀನರಸಪ್ಪ, ಮಾಜಿ ಸದಸ್ಯರಾದ ನರಸಿಂಹರಾಜು, ದೊಡ್ಡಯ್ಯ, ರಂಗನಾಥ್, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸುಮುಖ್ ಚಂದ್ರಶೇಖರ್, ಮಾಜಿ ಜಿ.ಪಂ. ಸದಸ್ಯ ಆದಿನಾರಾಯಣರೆಡ್ಡಿ, ಮಾಜಿ ಪೀಕಾರ್ಡ್ ಅಧ್ಯಕ್ಷ ಚಿಕ್ಕೋಬರೆಡ್ಡಿ, ವಿಎಸ್‌ಎಸ್‌ಎನ್ ಅಧ್ಯಕ್ಷರು, ನಿರ್ದೇಶಕರು, ತುಮುಲ್ ತಾಲೂಕು ವಿಸ್ತರಣಾಧಿಕಾರಿ ಶಂಕರ್‌ನಾಗ್, ವೈದ್ಯ ಡಾ.ದೀಕ್ಷಿತ್, ಸೂಪರವೈಸರ್ ಅಫರೋಜ್, ಮುಖಂಡರಾದ ಬಿಜವರ ಶ್ರೀನಿವಾಸ್ , ಸಂಜೀವೇಗೌಡ, ಜಯರಾಮರೆಡ್ಡಿ, ತಾಲೂಕಿನ ಡೇರಿ ಸಿಬ್ಬಂದಿಗಳು ಹಾಲು ಉತ್ಪಾದಕರು ಇದ್ದರು.