ಜಿಲ್ಲೆತುಮಕೂರುಮಧುಗಿರಿಸುದ್ದಿ

ಫಲಾನುಭವಿಗಳಿಗೆ 5 ಸಾವಿರ ನಿವೇಶನಗಳ ಹಂಚಿಕೆ : ಸಹಕಾರ ಸಚಿವ ಕೆ.ಎನ್. ರಾಜಣ್ಣ

ಜನಸ್ಪಂದನಾ ಹಾಗೂ ಖಾತ ಆಂದೋಲನ ಕಾರ್ಯಕ್ರಮದಲ್ಲಿ ಹೇಳಿಕೆ

ಮಧುಗಿರಿ :  ತಲಾ ತಲಾಂತರಗಳಿಂದ ತಮ್ಮ ಪೂರ್ವಜರ ಹೆಸರಿನಲ್ಲಿ ಇರುವಂತಹ ಜಮೀನುಗಳ ಖಾತೆ ಪಹಣಿಗಳನ್ನು ತಿದ್ದು ಪಡಿ ಮಾಡಿಸಿ ಕೊಳ್ಳುವಂತಹ ಜವಾಬ್ದಾರಿ ನಿಮ್ಮದ್ದಾಗಿದೆ ಎಂದು ಸಹಕಾರಿ ಸಚಿವರಾದ ಕೆ ಎನ್ ರಾಜಣ್ಣ ಕರೆ ನೀಡಿದರು.
ಐಡಿ ಹೋಬಳಿಯ ಬ್ರಹ್ಮಸಂದ್ರ ಗ್ರಾಮ ಪಂಚಾಯತಿ ಆವರಣದಲ್ಲಿ ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯತಿಯ ಸಹಯೋಗ ದಿಂದ ಜನಸ್ಪಂದನಾ ಹಾಗೂ ಖಾತ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ,
ಈ ಹಿಂದೆ ಭೂಮಿಯ ಬೆಲೆ ಕಡಿಮೆ ಇತ್ತು ಆದರೆ ಇಂದೂ ಅದೇ ಭೂಮಿಯ ಬೆಲೆ ಗಗನಕ್ಕೇರಿದ್ದು ಆದರೆ ಇನ್ನೂ ಕೆಲವರು ತಮ್ಮ ಜಮೀನುಗಳ ದಾಖಲೆಗಳನ್ನು ಸರಿಪಡಿಸಿಕೊಂಡಿಲ್ಲ ಆ ಜವಾಬ್ದಾರಿ ನಿಮ್ಮದ್ದು ಹಾಗೂ ಸರ್ಕಾರದ್ದು ಆಗಿದೆ.
ತಾಲೂಕಿನಲ್ಲಿನ ಯಾದವ ಸಮುದಾಯದ ಹಾಗೂ ಇತರೆ ಸಮುದಾಯಗಳ ಜನರು ಮೂರು ತಲೆ ಮಾರುಗಳಿಂದಲೂ ಜಮೀನುಗಳ ಖಾತೆ ಪಹಣಿ ಗಳನ್ನು ಸರಿಪಡಿಸಿಕೊಂಡಿಲ್ಲ.
ಸರ್ಕಾರ ನೀಡುವಂತಹ ಮಾಶಾಸನಗಳಿಂದ ಯಾರೂ ವಂಚಿತರಾಗಬಾರದು , ಶುದ್ದ ನೀರಿನ ಘಟಕಗಳನ್ನು ಹದಿನೈದು ದಿನಗಳೊಳಗೆ ಸರಿಪಡಿಸ ಬೇಕು. ಗ್ರಾಮದ ಜನರು ತಮ್ಮ ದಿನ ನಿತ್ಯದ ಕೆಲಸ ಕಾರ್ಯಗಳಿಗಾಗಿ ಹೋಗುತ್ತಿದ್ದು ಅವರ ಬೇಡಿಕೆಯಂತೆ ಗ್ರಾಮ ಸರ್ಕಾರಿ ಬಸ್ ವ್ಯವಸ್ಥೆ ಮಾಡಿಕೊಡಲಾಗುವುದು.
2018-23 ರ ವರೆವಿಗೂ ಮನೆಗಳ ನಿರ್ಮಾಣ ಆಗಿಲ್ಲ ಈಗಾಗಲೇ ಸರ್ಕಾರಿ ಜಮೀನುಗಳನ್ನು ಗುರುತಿಸಲಾಗಿದ್ದು ತಾಲೂಕಿನಲ್ಲಿ ಸುಮಾರು 5 ಸಾವಿರ ನಿವೇಶನಗಳನ್ನು ಫಲಾನುಭವಿಗಳಿಗೆ ಹಂಚಬಹುದಾಗಿದೆ. ರಾಯದುರ್ಗಾ – ತುಮಕೂರು ರೈಲ್ವೆ ಮಾರ್ಗಕ್ಕೆ ಅಗತ್ಯವಿರುವ ಭೂಮಿಯನ್ನು ರೈಲ್ವೆ ಇಲಾಖೆಗೆ ಇನ್ನೂ ಕೆಲವು ದಿನಗಳಲ್ಲಿ ಹಸ್ತಾಂತರಿಸಿ ಅದಷ್ಟೂ ಬೇಗಾ ಕಾಮಗಾರಿಗೆ ಚಾಲನೆ ನೀಡಲಾಗುವುದು.
ಮುಂದಿನ ಮಳೆಗಾಲಕ್ಕೆ ಹಾಗೂ ಏಪ್ರಿಲ್ ಮಾಹೆಯಲ್ಲಿ ತಾಲೂಕಿನ ಕೆರೆಗಳಿಗೆ ಎತ್ತಿನ ಹೊಳೆ ಯೋಜನೆಯ ನೀರನ್ನು ಹರಿಸಲಾಗುವುದು ಇದಕ್ಕಾಗಿ 6 ಸಾವಿರ ಕೋಟಿ ರೂ ವೆಚ್ಚವಾಗಲಿದೆ. ಡಿಸಿ 4 ಮತ್ತು ಡಿಸಿ 6 ಗೇಟ್ ಗಳ ಮೂಲಕ ಮಾರಿ ಕಣಿವೆಗೆ ನೀರು ಹರಿಸಲಾಗುತ್ತಿದೆ. ಎತ್ತಿನಹೊಳೆ ಯೋಜನೆಯಲ್ಲಿ 15 ಸಾವಿರ ಹೆಚ್ ಪಿ ಸಾರ್ಮಾರ್ಥ್ಯದ ಕಂಪ್ಯೂಟರ್ ನಿಯಂತ್ರಣದ ಮೋಟಾರ್ ಗಳನ್ನು ನೀರೆತ್ತಲು ಬಳಸಲಾಗುತ್ತಿದೆ.
ನೀರಾವರಿ ತಜ್ಞ ಜಿ.ಎಸ್ ಪರಮಶಿವಯ್ಯ ನವರ ಪ್ರಯತ್ನದಿಂದಾಗಿ ಎತ್ತಿನ ಹೊಳೆ ನೀರು ತಾಲೂಕಿಗೆ ಹರಿಯಲು ಸಹಕಾರಿಯಾಗಿದ್ದು ಅವರನ್ನು ಈ ಸಂಧರ್ಭದಲ್ಲಿ ನೆನೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಮುಂದಿನ ಪೀಳಿಗೆಗೆ ಪ್ರಕೃತಿ ದತ್ತಾವಾಗಿರುವ ಕೊಡುಗೆಗಳನ್ನು ನೀಡಬೇಕು. ಇಂದೂ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ವಿದ್ದು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು.
ವಿದ್ಯಾಭ್ಯಾಸದಿಂದ ವಿದ್ಯಾರ್ಥಿಗಳನ್ನು ವಂಚಿತರನ್ನಾಗಿಸುವ ಪೋಷಕರನ್ನು ಪೊಲೀಸ್ ಠಾಣೆಯಲ್ಲಿ ಎರಢು ದಿನಗಳ ಕಾಲ ಇರಿಸುವಂತಹ ಕಾನೂನು ಜಾರಿ ಮಾಡಬೇಕು.
ಹೈನುಗಾರಿಕೆಯಿಂದ ರೈತರಲ್ಲಿ ಆರ್ಥಿಕ ಶಕ್ತಿ ಹೆಚ್ಚಾಗಿದೆ. ಉತ್ಪಾದಕ ಸಂಘಗಳಲ್ಲಿ ಇತ್ತೀಚೆಗೆ ಆಳವಡಿಸಲಾಗಿರುವ ಎನ್ ಡಿ ಡಿ ಪಿ ತಂತ್ರಾಂಶಕ್ಕೆ ಆಳವಡಿಕೆಗೆ ಮಂಡ್ಯದಲ್ಲಿ ಮೊದಲು ವಿರೋಧ ವ್ಯಕ್ತವಾಯಿತು ನಂತರ ಇದೇ ತಂತ್ರಜ್ಞಾನ ವಿರಬೇಕೆಂಬ ಮಾತುಗಳು ರೈತರುಗಳಿಂದ ಕೇಳಿ ಬರುತ್ತಿವೆ. ತಂತ್ರಜ್ಞಾನ ಆಳವಡಿಕೆಯಿಂದ ಹಾಲು ಉತ್ಪಾದಕರಿಗೆ ಅನೂಕೂಲವಿದ್ದು ಮುಂದಿನ ದಿನಗಳಲ್ಲಿ ನೇರವಾಗಿ ಫಲಾನುಭವಿ ಖಾತೆಗೆ ಹಾಲು ಹಾಕಿದ ದಿನವೇ ಹಣ ವರ್ಗಾವಣೆ ಮಾಡಬೇಕೆಂಬ ಉದ್ದೇಶ ಹೊಂದಲಾಗಿದೆ.
ರಾಜ್ಯ ಮತ್ತು ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಹಕಾರ ಸಂಘಗಳನ್ನು ತೆರೆಯುವ ಉದ್ದೇಶವಿದೆ. ಸಹಕಾರ ಸಂಘಗಳನ್ನು ತೆರೆಯುವ ಮೂಲಕ ರೈತರಲ್ಲಿ ಆರ್ಥಿಕ ಶಕ್ತಿಯು ವೃದ್ಧಿಯಾಗಲಿದೆ.
ಜಮೀನುಗಳಲ್ಲಿನ ರಸ್ತೆಗಳ ಬಗ್ಗೆ ಹೆಚ್ಚು ದೂರುಗಳಿದ್ದು ಜಮೀನುಗಳ ಅಕ್ಕಪಕ್ಕಾದವರು ಪರಸ್ಪರ ಹೊಂದಾಣಿಕೆ ಪ್ರೀತಿ ವಿಶ್ವಾಸದಿಂದ ಇರಬೇಕೆಂದರು.
ಜಿ.ಪಂ ಸಿಇಓ ಪ್ರಭು ಜಿ ಮಾತನಾಡಿ ಪ್ರತಿ ಹದಿನೈದು ದಿಗಳಿಗೊಮ್ಮೆ ಸರಣಿ ಜನಸ್ಪಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಆಡಳಿತಕ್ಕೆ ಹೆಚ್ಚು ವೇಗವನ್ನು ನೀಡಲಾಗುತ್ತಿದೆ. ಎನ್ ಆರ್ ಇ ಜಿ ಕಾಮಗಾರಿಯಲ್ಲಿ ರಾಜ್ಯದಲ್ಲಿಯೇ ಜಿಲ್ಲೆ ಪ್ರಥಮ ಸ್ಥಾನ ಪಡೆಯುವುದರ ಮೂಲಕ  630 ಕೋಟಿ ರೂ ಗಳಷ್ಟು ಅಭಿವೃದ್ಧಿ ಸಾಧಿಸಲಾಗಿದೆ.
230 ಕೋಟಿ ರೂ ಗಳಷ್ಟು ಶಾಲೆಗಳ ಅಭಿವೃದ್ಧಿ ಬಳಲಾಗುತ್ತಿದೆ.1696 ಕಾಮಗಾರಿಗಳು ಚಾಲನೆ ನೀಡಲಾಗಿದೆ. ಬ್ರಹ್ಮ ಸಮುದ್ರ ಗ್ರಾ.ಪಂ ಗೆ 2 ಕೋಟಿ ರೂ ಗಳಲ್ಲಿ ಕಾಮಗಾರಿಗಳನ್ನು ಮಾಡಲಾಗುವುದು , ತಾಲೂಕಿಗೆ 1000 ನಿವೇಶನ ಮಂಜೂರು ಆಗಿವೆ. ಜಿಲ್ಲೆಯಲ್ಲಿ 40 ಗ್ರಾಮಗಳಲ್ಲಿ ಜಾಗ ಗುರುತಿಸಲಾಗಿದೆ.
ಗ್ರಾಮೀಣಾಭಿವೃದ್ಧಿ ಯೋಜನೆಯಡಿಯಲ್ಲಿ 326 ಕಾಮಗಾರಿಗಳಿಗೆ , 240 ಕೋಟಿ ರೂ ಗಳನ್ನು ಕಾಮಗಾರಿ ಗಳಿಗೆ ವ್ಯಯಿಸಲಾಗುತ್ತಿದೆ.
ಇನ್ನೊಂದು ವಾರದಲ್ಲಿ ಇ ಸ್ವತ್ತು ಅಭಿಯಾನಕ್ಕೆ ಚಾಲನೆ ನೀಡುವ ಮೂಲಕ ಗ್ರಾಮಗಳ ಪ್ರತಿಯೊಂದು  ಸ್ವತ್ತುಗಳನ್ನು ವ್ಯಾಪ್ತಿಗೆ ತರುವ ಉದ್ದೇಶವಿದ್ದು  ಒಂದು ತಿಂಗಳ ಕಾಲ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಗ್ರಾಮಗಳಲ್ಲಿನ ಜನರ ಉತ್ತಮ ಆರೋಗ್ಯಕ್ಕಾಗಿ  ಪ್ರತಿಷ್ಠಿತ ಆಸ್ಪತ್ರೆ ಗಳ ಸಹಕಾರದೊಂದಿಗೆ ಉಚಿತ ವಾಗಿ ವೈದ್ಯಕೀಯ ಸೌಲಭ್ಯಗಳನ್ನು ಮನೆಯ ಬಾಗಿಲಿಗೆ ತಲುಪಿಸಲಾಗುವುದು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ ತಾಲೂಕು ಮಟ್ಟದ ಅಧಿಕಾರಿಗಳು ಜನ ಸ್ಪಂದನಾ ಕಾರ್ಯಕ್ರಮದಲ್ಲಿ ಬದಂತಹ ಅರ್ಜಿಗಳ ಸಮಸ್ಯೆಯನ್ನು ಬಗೆಹರಿಸ ಬೇಕು ಅಲ್ಲಿ ಬಗೆಹರಿಯಲಿಲ್ಲವೆಂದರೆ ಜಿಲ್ಲಾ ಮಟ್ಟದಲ್ಲಿ ಬಗೆಹರಿಸಲಾಗುವುದು.
ಕಳೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೈಕ್ಷಣಿಕ ಜಿಲ್ಲೆಯು 30 ನೇ ಸ್ಥಾನ ಗಳಿಸಿತ್ತು ಮುಂಬರುವ ಪರೀಕ್ಷೆಯಲ್ಲಿ ಅತ್ಯನ್ನುತ ಸ್ಥಾನಗಳಿಸಲು ಶಿಕ್ಷಕರು ಕ್ರಮ ವಹಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಡ್ಡಾಯವಾಗಿ ವೈದ್ಯರು ಸಿಬ್ಬಂದಿಗಳು ಕಡ್ಡಾಯವಾಗಿ ಇರಲೇಬೇಕು. ಸಂಕ್ರಾಮಿಕ ರೋಗಗಳು ಕಂಡು ಬರುವುತ್ತಿರುವುದರಿಂದ ನೀರನ್ನು ಕುದಿಸಿ ಆರಿಸಿ ಕುಡಿಯ ಬೇಕು , ವಿಶೇಷ ಸಂಧರ್ಭದಲ್ಲಿ ಸಮಿತಿಗಳ ಅನುಮತಿ ಪಡೆದು ಜಾತ್ರೆ ಹಬ್ಬ ಹರಿದಿನಗಳನ್ನು ಆಚರಿಸಿ , ರೈಲು ಮಾರ್ಗ , ಎತ್ತಿನ ಹೊಳೆ ಯೋಜನೆಗಳ ಭೂ ಸ್ವಾಧೀನಕ್ಕೆ ಸಾರ್ವಜನಿಕರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಜಿಲ್ಲೆಯಲ್ಲಿ 1 ಲಕ್ಷ 93 ಸಾವಿರ ಪಾವತಿ ವಾರಸು ಖಾತೆಗಳಿದ್ದು ಇವುಗಳಲ್ಲಿ 20 ಸಾವಿರ ಖಾತೆಗಳನ್ನು ಮಾಡಲಾಗಿದೆ.
ಗ್ರಾಮದ ಅಂಗನವಾಡಿಯ ಪುಟಾಣಿ ಬಾಲಕರು ಪ್ರಮುಖ ಸಚಿವರು ಹಾಗೂ ರಾಜ್ಯದ ಮಾಹಿತಿಯನ್ನು ಒದಗಿಸಿ ಕೊಟ್ಟರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ ವಿ , ಉಪವಿಭಾಗಾಧಿಕಾರಿ ಗೊಟೂರು ಶಿವಪ್ಪ , ತಹಸೀಲ್ದಾರ್ ಶಿರಾನ್ ತಾಜ್ , ತಾ.ಪಂ ಇಓ ಲಕ್ಷಣ್ , ಡಿವೈಎಸ್ ಪಿ ರಾಮಚಂದ್ರಪ್ಪ , ಗ್ರಾ.ಪಂ ಅಧ್ಯಕ್ಷೆ ಬಾಲಕ್ಕಬಡೀಗೇರಪ್ಪ , ಉಪಾಧ್ಯಕ್ಷ ಚಿತ್ತಯ್ಯ, ಮಾಜಿ ಜಿ.ಪಂ ಸದಸ್ಯ ಜಿ.ಜೆ ರಾಜಣ್ಣ , ತಾ.ಪಂ ಮಾಜಿ ಅಧ್ಯಕ್ಷೆ ಇಂದಿರಾದೇನನಾಯ್ಕ ,  ರಾಜು ಕೆ.ಎ , ಕೃಷ್ಣ ಮೂರ್ತಿ , ದೇವರಾಜು ,ಮೈದನಹಳ್ಳಿ ಕಾಂತರಾಜು , ಆರ್ ಐ ಚಿಕ್ಕರಾಜು , ವಿ ಎ ಜಗದೀಶ್ , ಮೋಹನ್ ಕುಮಾರ್ , ರವಿ ಕುಮಾರ್ , ಪಿಡಿಓ ಬೋರಣ್ಣ  ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು , ಗ್ರಾಮಸ್ಥರು ಹಾಜರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker