ಪಾವಗಡ : ಯುಗಾದಿ ಹಬ್ಬದ ಪ್ರಯುಕ್ತ ಪತ್ರಿಕಾ ವಿತರಕರಿಗೆ ಸ್ವಾಮಿ ಜಪಾನಂದಜೀ ಅವರಿಂದ ಆಹಾರದ ದಿನಸಿ ಕಿಟ್ ವಿತರಣೆ
ಪಾವಗಡ : ಪತ್ರಿಕೆ ವಿತರಣೆ ಮಾಡುವ ಕೆಲಸದ ಬಗ್ಗೆ ಕೀಳರಿಮೆ ಬೇಡ ಅದೊಂದು ಪವಿತ್ರ ಕೆಲಸ ಅಂತ್ಯಂತ ಮಹತ್ವದ ಸುದ್ದಿ ಲೇಖನಗಳನ್ನು ಒಳಗೊಂಡೊಂತಹ ಪತ್ರಿಕೆಯನ್ನು ಮನೆ ಮನೆಗೆ ಹಂಚಿ ಸುದ್ದಿಯನ್ನು ಜನರಿಗೆ ತಲುಪಿಸುವ ಕೆಲಸ ಮಹತ್ವದ ಕೆಲಸ ಎಂದು ಸ್ವಾಮಿ ಜಪಾನಂದಜೀ ತಿಳಿಸಿದರು.
ರಾಮಕೃಷ್ಣ ಸೇವಾಶ್ರಮದಲ್ಲಿ ಇಂದು ನೂತನ ಸಂವತ್ಸರದ ಯುಗಾದಿ ಹಬ್ಬದ ಪ್ರಯುಕ್ತ 40 ಜನ ಪತ್ರಿಕಾ ವಿತರಕರಿಗೆ ಶ್ರೀರಾಮಕೃಷ್ಣ ಸೇವಾಶ್ರಮದ ವತಿಯಿಂದ ಯುಗಾದಿ ಹಬ್ಬದ ಶುಭಾಶಯಗಳನ್ನು ತಿಳಿಸುತ್ತಾ ದಿನಸಿ ಪದಾರ್ಥಗಳು ಹಾಗೂ ನೂತನ ವಸ್ತ್ರಗಳನ್ನು ವಿತರಿಸಿ ಮಾತನಾಡಿ ಅಬ್ದುಲ ಕಲಾಂ ಅವರಂತಹವರು ಪತ್ರಿಕೆ ಹಂಚಿ ದೊಡ್ಡ ವಿಜ್ಞಾನಿ ಹಾಗೂ ಭಾರತದ ರಾಷ್ಟ್ರಪತಿಯಾದರು. ನೀವು ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವುದಕ್ಕೆ ಈ ವೃತ್ತಿ ಸಹಕಾರಿಯಾಗಲಿದೆ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಎಸ್.ಎನ್.ಪ್ರಸನ್ನಮೂರ್ತಿ ಮಾತನಾಡಿ ಶ್ರೀ ರಾಮಕೃಷ್ಣ ಸೇವಾಶ್ರಮವು ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಪ್ರತೀ ಹಬ್ಬಗಳಲ್ಲಿ ದಿನಪತ್ರಿಕೆ ಹಂಚುವವರನ್ನು ಗುರುತಿಸಿ ಸಹಾಯಹಸ್ತ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಪತ್ರಿಕೆ ಹಂಚುವ ಕೆಲಸ ಸಣ್ಣಕೆಲಸ ಎಂಬ ಕೀಳರಿಮೆ ಬೇಡ ಅದೊಂದು ಪವಿತ್ರವಾದ ಕೆಲಸ ಪತ್ರಕರ್ತರ ಹಾಗೂ ಪತ್ರಿಕಾ ವಿತರಕರ ಸೇವೆಯನ್ನು ಗುರುತಿಸಿ ಸದಾ ಅವರಿಗೆ ನೆರವನ್ನು ನೀಡುತ್ತಿರುವುದಕ್ಕೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸ್ವಾಮಿಜಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತದೆ ಎಂದರು.
ಜಯಸಿಂಹ ಮಾತನಾಡಿ ಯಾರೊಬ್ಬರನ್ನೂ ಮರೆಯದೆ ಎಲ್ಲ ಸ್ತರಗಳ ಜನರನ್ನು ಗುರುತಿಸಿ ಈ ತೆರನಾದ ಸೇವೆ ಸಲ್ಲಿಸುತ್ತಿರುವುದು ಅತ್ಯಂತ ಶ್ಲಾಘನೀಯ ಬಹುಶಃ ರಾಜ್ಯದಲ್ಲಿಯೇ ಪತ್ರಿಕಾ ವಿತರಕರನ್ನು ಈ ತೆರನಾಗಿ ಗುರುತಿಸಿ ಅವರ ವಿದ್ಯಾಭ್ಯಾಸಕ್ಕೆ ಮತ್ತು ಆರೋಗ್ಯಕ್ಕೆ ಎಲ್ಲ ರೀತಿಯ ಸಹಕಾರ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ಲೋಕೇಶ್, ದೇವರಾಜು, ಎಂ.ವೆಂಕಟೇಶ್, ಭರತ್ ಹಾಗೂ ರೋಹಿತ್ ರವರುಗಳು ಭಾಗವಹಿಸಿದ್ದರು.