
ಮಧುಗಿರಿ : ದೇಹದ ಸದೃಡತೆಗೆ ಕ್ರೀಡೆ ಸಹಕಾರಿ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದರು.
ಪಟ್ಟಣದ ರಾಜೀವ್ ಗಾಂಧೀ ಕ್ರೀಡಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬೆಂಗಳೂರು ವಿಭಾಗಮಟ್ಟದ ವಾಲೀಬಾಲ್ ಪಂದ್ಯಾವಳಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ವಿದ್ಯಾಭ್ಯಾಸಕ್ಕೆ ಎಷ್ಟು ಆಸಕ್ತಿ ವಹಿಸುತ್ತೀರೋ ಅಷ್ಟೇ ಆಸಕ್ತಿಯನ್ನೂ ಕ್ರೀಡೆಗೂ ವಿನಿಯೋಗಿಸಿ. ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ. ಎರಡನ್ನೂ ಸಮಾನವಾಗಿ ಸ್ವೀಕರಿಸಿ ಕ್ರೀಡಾ ಸ್ಪೂರ್ತಿ ಮೆರೆಯಿರಿ. ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದ್ದು, ಸರ್ಕಾರ ಉನ್ನತ ಶಿಕ್ಷಣದಲ್ಲಿ, ಉದ್ಯೋಗದಲ್ಲಿ ಕ್ರೀಡಾ ಪಟುಗಳಿಗೆ ಮೀಸಲಾತಿ ನಿಗದಿಗೊಳಿಸಿದ್ದು, ಇಂತಹ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಶಾಲೆಗೆ ಮತ್ತು ಪೋಷಕರಿಗೆ ಕೀರ್ತಿ ತನ್ನಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಮಧುಗಿರಿಯ ಏಕಶಿಲಾ ಬೆಟ್ಟವು ಏಷ್ಯಾಖಂಡದಲ್ಲೇ ಅತೀ ದೊಡ್ಡ ಏಕಶಿಲಾ ಬೆಟ್ಟ ಎಂದು ಖ್ಯಾತಿ ಗಳಿಸಿದ್ದು, ಇಲ್ಲಿನ ಪಕೃತಿಯ ಸೊಬಗನ್ನು ಕಣ್ತುಂಬಿಸಿಕೊಳ್ಳಿ. ವಿದ್ಯಾರ್ಥಿಗಳಿಗೆ ಯಾವುದೇ ಸೌಲಭ್ಯಕ್ಕೆ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ, ಎಸಿ ಗೋಟೂರು ಶಿವಪ್ಪ, ಪುರಸಭಾಧ್ಯಕ್ಷ ಲಾಲಾಪೇಟೆ ಮಂಜುನಾಥ್, ಉಪಾಧ್ಯಕ್ಷೆ ಸುಜಾತ ಶಂಕರ್ ನಾರಾಯಣ್, ತಹಶೀಲ್ದಾರ್ ಶಿರೀನ್ ತಾಜ್, ಡಿಡಿಪಿಐ ಗಿರಿಜಾ, ಬಿಇಓ ಹನುಮಂತರಾಯಪ್ಪ, ಶಿಕ್ಷಣಾಧಿಕಾರಿ ಎಂ ವಿ ರಾಜಣ್ಣ, ಜಿಲ್ಲಾ ಸಾಕ್ಷರತಾ ಅಧಿಕಾರಿ ನರಸಿಂಹಯ್ಯ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಚಿತ್ತಯ್ಯ, ಪ್ರಭಾರ ಟಿಪಿಓ ಯರಗಾಮಯ್ಯ, ಪುರಸಭೆ ಸದಸ್ಯರಾದ ಅಲೀಂ, ಎಂ.ವಿ ಗೋವಿಂದರಾಜು, ತಿಮ್ಮರಾಯಪ್ಪ, ಮಂಜುನಾಥ್ ಆಚಾರ್, ನಾಗಲತಾ ಲೋಕೇಶ್, ಶೋಭಾರಾಣಿ, ಶ್ರೀಧರ್, ಮುಖಂಡರಾದ ತುಂಗೋಟಿ ರಾಮಣ್ಣ, ಎಂಜಿ ಉಮೇಶ್, ಆನಂದ ಕೃಷ್ಣ, ಆನಂದ್, ಎಸ್.ಬಿ.ಟಿ ರಾಮು ಇತರರಿದ್ದರು.