ಮಧುಗಿರಿ : ರಾಜ್ಯದಲ್ಲಿ ಅಪಘಾತ , ಪ್ರಾಣ ಹಾನಿಗಳ ಸಂಖ್ಯೆಯು ಶೇ.50ರಷ್ಟು ಇಳಿಮುಖವಾಗುತ್ತಿದೆ ಎಂದು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ತಿಳಿಸಿದರು.
ಭಾನುವಾರ ಸಂಜೆ ಕಾಟಗಾನಹಟ್ಟಿ ಬಳಿ ಸಂಭವಿಸಿದ 6 ಜನರು ಮೃತಪಟ್ಟ ಭೀಕರ ಅಪಘಾತ ಸ್ಥಳಕ್ಕೆ ಪೊಲೀಸ್ ಹಾಗೂ ಕೆ ಶಿಫ್ ರಸ್ತೆ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ನಂತರ ಮಾತನಾಡಿದ ಅವರು ,
ರಾಜ್ಯದಲ್ಲಿ ಈ ಹಿಂದೆ ಸಾವಿರಾರು ಸಂಖ್ಯೆಯಲ್ಲಿ ರಸ್ತೆ ಅಪಘಾತಗಳು ಮತ್ತು ಪ್ರಾಣ ಹಾನಿಗಳು ಸಂಭವಿಸುತ್ತಿದ್ದವು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಾಗೂ ಮೈಸೂರು ರಸ್ತೆ ನಿರ್ಮಿಸಿದ ನಂತರ ಅಪಘಾತಗಳು ನಿಯಂತ್ರಣವಾಗಿವೆ.
ನಮ್ಮ ಬಳಿ ಇರುವ ಅನುದಾನವನ್ನು ರಸ್ತೆಗಳ ತಿರುವು ಹಾಗೂ ಅಪಘಾತ ವಲಯಗಳು ಇರುವ ಕಡೆ ರಸ್ತೆ ಸುರಕ್ಷತಾ ನಿಯಮಗಳನ್ನು ಆಳವಡಿಕೆ ಮತ್ತು ಅಪಘಾತಗಳ ನಿಯಂತ್ರಣಕ್ಕಾಗಿ ಈ ಅನುದಾನ ಬಳಸಿಕೊಳ್ಳುವಂತೆ ಪಿಡಬ್ಲ್ಯೂಡಿ , ಎನ್ ಹೆಚ್ ಐ ಅಧಿಕಾರಿಗಳಿಗೆ ಬಳಸಿಕೊಳ್ಳುವಂತೆ ಈಗಾಗಲೇ ಸೂಚಿಸಲಾಗಿದೆ.
ಇಲಾಖೆಯ ವತಿಯಿಂದ 100 ಕೋಟಿ ರೂ ಗಳ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಈ ವಿಷಯಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ಒಪ್ಪಿಗೆ ನೀಡಿ ಅನುದಾನ ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆಗೆ ಪತ್ರವನ್ನು ಕಳುಹಿಸಿ ಕೊಡಲಾಗಿದೆ.
ಮೈಸೂರು ರಸ್ತೆಯಲ್ಲಿ ವಾಹನ ಸವಾರರು ವಾಹಗಳನ್ನು ಅತಿ ಹೆಚ್ಚು ವೇಗವಾಗಿ ಚಲಾಯಿಸಿದರೆ ಅವರ ಮೊಬೈಲ್ ಗಳಿಗೆ ದಂಡದ ಮಾಹಿತಿ ಬರುತ್ತಿದೆ ಅದೇ ರೀತಿ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಸಿ ಸಿ ಕ್ಯಾಮರಾ ಗಳ ಆಳವಡಿಕೆ ಮಾಡುತ್ತೀರಾ ಎಂದು ಪತ್ರಕರ್ತರು ಸಚಿವರನ್ನು ಪ್ರಶ್ನಿಸಿದರು.
ಈ ಬಗ್ಗೆ ಪತ್ರಿಕ್ರಿಯಿಸಿದ ಸಚಿವರು ರಸ್ತೆಗಳು ಗುಣಮುಟ್ಟದಿಂದ ಕೂಡಿವೆ ನಿಯಮಗಳನ್ನು ಉಲ್ಲಂಘಿಸಿದರೆ ದಂಡ ಬೀಳುವುದು ಅನಿವಾರ್ಯ ಮುಂದಿನ ದಿನಗಳಲ್ಲಿ ರಾಜ್ಯ ಮತ್ತು ಎನ್ ಹೆಚ್ ಹೈವೆಗಳ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು.
ಇಲ್ಲಿನ ಕೆ ಶಿಫ್ ಮುಖ್ಯ ರಸ್ತೆಯು ಗುಣಮಟ್ಟದಿಂದ ಕೂಡಿದೆ. ನೇರವಾಗಿರುವ ಈ ರಸ್ತೆಯಲ್ಲಿ ಅಪಘಾತ ನಡೆದಿರುವುದು ಆಶ್ಚರ್ಯಕರ ವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಯನ್ನು ಬಗೆಹರಿಸಲಾಗುವುದು. ಇದೇ ಸಂಧರ್ಭದಲ್ಲಿ
ಮೃತಪಟ್ಟ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು.
ಎ ಡಿ ಜಿ ಅಲೋಕ್ ಕುಮಾರ್ , ಕೇಂದ್ರ ವಲಯ ಐ ಜಿ ಲಾಬುರಾಂ , ಎಸ್ ಪಿ ಆಶೋಕ್ ಕೆ.ವಿ , ಎ ಎಸ್ ಪಿ ಮರಿಯಪ್ಪ , ಉಪವಿಭಾಗಾಧಿಕಾರಿ ಗೊಟೂರು ಶಿವಪ್ಪ
ಮುಖಂಡ ನಿಖಿತ್ ರಾಜ್ ಮೌರ್ಯ ಹಾಗೂ ಮತ್ತಿತರ ಅಧಿಕಾರಿಗಳು ಇದ್ದರು.