ಅಮೂಲ್ಯ ಜೀವಗಳ ಉಳಿವಿಗಾಗಿ ಕಲ್ಲುಗಣಿಗಾರಿಕೆ ನಿಷೇದಿಸಲಿ : ಜೆ.ಡಿ.ಎಸ್. ಪ್ರಧಾನಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್

ತುರುವೇಕೆರೆ : ಜನ ಜಾನುವಾರುಗಳಿಗೆ ಮಾರಕವಾಗಿರುವ ಕಲ್ಲುಗಣಿಗಾರಿಕೆಯನ್ನು ಕೂಡಲೇ ಸ್ಥಗಿತಗೊಳಿಸಲು ಜಿಲ್ಲಾಡಳಿತ ಕೂಡಲೇ ಮುಂದಾಗಬೇಕೆಂದು ರಾಜ್ಯ ಯುವ ಜೆ.ಡಿ.ಎಸ್. ಪ್ರಧಾನಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ಒತ್ತಾಯಿಸಿದರು.
ತಾಲೂಕಿನ ಕೋಳಘಟ್ಟ ಬಳಿ ನೆಡೆಯುತ್ತಿರುವ ಕಲ್ಲುಗಣಿಗಾರಿಕೆಯನ್ನು ಸ್ಥಗಿತಗೊಳಿಸುವಂತೆ ಗ್ರಾಮಸ್ಥರು ಹಮ್ಮಿಕೊಂಡಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು ಕೋಳಘಟ್ಟ ಬಳಿ ಕಲ್ಲುಗಣಿಗಾರಿಕೆಗೆ ನಡೆಯುತ್ತಿರುವುದರಿಂದ ಇಲ್ಲಿನ ನಿವಾಸಿಗಳು ಜೀವಭಯದಿಂದ ಬದುಕುವಂತಾಗಿದೆ. ಕೂಗಳತೆ ದೂರದಲ್ಲಿರುವ ವಾಸದ ಮನೆಗಳ, ಶಾಲೆಗಳ ಆಸುಪಾಸಿನಲ್ಲಿರುವ ದೇಗುಲಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಳ್ಳಲಾರಂಭಿಸಿದೆ. ಸ್ಪೋಟಕದ ತೀವ್ರತೆಗೆ ವಯೋವೃದ್ದರು, ಮಕ್ಕಳು, ಅನಾರೋಗ್ಯ ಪೀಡಿತರು ಜೀವಭಯದಿಂದ ದಿನಕಳೆಯುವಂತಾಗಿದೆ, ಜನ ಹಿತ ಕಾಪಾಡುವ ನಿಟ್ಟಿನಲ್ಲಿ ಕಲ್ಲುಗಣಿಗಾರಿಕೆಯನ್ನು ನಿಷೇದಿಸುವ ಅಗತ್ಯವಿದೆ ಎಂದರು.
ಜನ ಹಿತಕ್ಕೆ ಮಾರಕವಾದ ಕಲ್ಲುಗಣಿಗಾರಿಕೆಯನ್ನು ವಿರೋಧಿಸುವವರ ಸ್ಥಳೀಯರನ್ನು ಡಿ.ವೈ.ಎಸ್.ಪಿ. ರಮೇಶ್ ಅವಾಚ್ಯ ಶಬ್ದಗಳಿಂದ ನಿಂದಿಸಲು ಮುಂದಾಗುತ್ತಿರುವುದು ನೋವಿನ ಸಂಗತಿ, ಸ್ಥಳಿಯ ನಿವಾಸಿಗಳ ಬದುಕಿಗೆ ಮಾರಕವೆನಿಸಿರುವ ಕಲ್ಲುಗಣಿಗಾರಿಕೆಯನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸುವುದು ನ್ಯಾಯ ಸಮ್ಮತವಾದುದು, ಬಂಡವಾಳ ಶಾಹಿಗಳ ಪರ ವಕಾಲತ್ತು ವಹಿಸುತ್ತಿರುವ ಪೋಲೀಸರ ದಬ್ಬಾಳಿಕೆಯಿಂದ ಸ್ಥಳೀಯರು ನೊಂದಿದ್ದಾರೆ. ಜನ ಹಿತಕ್ಕಾಗಿ ಅನಿವಾರ್ಯವಾದರೇ ಎಂತಹ ಹೋರಾಟ ನೆಡೆಸಲು ಸಿದ್ದರಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಮಾಜಿ ಸದಸ್ಯರಾದ ನಾಗರಾಜ್,ಮಲ್ಲಾಗಟ್ಟ ರವಿಕುಮಾರ್,ಮಲ್ಲಿಕಾರ್ಜುನ್, ಧರೀಶ್, ರಾಜಶೇಖರಯ್ಯ, ಗುರುಸಿದ್ದಪ್ಪ,ಶಿಲ್ಪಾ, ಶಿವಮ್ಮ, ಗೌರಮ್ಮ ಸೇರಿದಂತೆ ಅನೇಕ ಮಹಿಳೆಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.