ತುರುವೇಕೆರೆ ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಟಿ.ಕೆ.ಚಿದಾನಂದ್ ಅವಿರೋಧ ಆಯ್ಕೆ

ತುರುವೇಕೆರೆ : ಸ್ಥಳೀಯ ಪಟ್ಟಣ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಟಿ.ಕೆ.ಚಿದಾನಂದ್ ಅವಿರೋಧವಾಗಿ ಆಯ್ಕೆಯಾದರು.
ಈ ಹಿಂದಿನ ಅಧ್ಯಕ್ಷ ಅಂಜನ್‌ಕುಮಾರ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನೆಡೆಯಿತು. 14 ಸದಸ್ಯ ಬಲವುಳ್ಳ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಟಿ.ಕೆ. ಚಿದಾನಂದ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಅಂತಿಮವಾಗಿ ಕಣದಲ್ಲಿ ಉಳಿದ ಟಿ.ಕೆ. ಚಿದಾನಂದ್ ಅವಿರೋದವಾಗಿ ಆಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಗಳು ಹಾಗೂ ತಾಲೂಕು ದಂಡಾದಿಕಾರಿ ನಯೀಮುನ್ನಿಸ್ಸಾ ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ಚಿದಾನಂದ್ ಮಾತನಾಡಿ ಪ.ಪಂ. ಅಧ್ಯಕ್ಷ ಸ್ಥಾನ ಸಾಮಾನ್ಯವರ್ಗಕ್ಕೆ ಮೀಸಲಿದ್ದರೂ ಪರಿಶಿಷ್ಟ ಸಮುದಾಯಕ್ಕೆ ಸೇರಿದ ನಾನು ಅಧ್ಯಕ್ಷನಾಗಿ ಆಯ್ಕೆಯಾಗಲು ಅಮೂಲ್ಯ ಸಹಕಾರವಿತ್ತ ಶಾಸಕ ಮಸಾಲಜಯರಾಮ್ ರವರಿಗೆ ಅನಂತ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನನ್ನ ಆಯ್ಕೆಗೆ ಸಹಕರಿಸಿದ ಎಲ್ಲಾ ನನ್ನ ಸಹ ಸದಸ್ಯರಿಗೂ ವಂದನೆಗಳನ್ನು ತಿಳಿಸುತ್ತೇನೆ.ಪಟ್ಟಣದ ಅಭಿವೃದ್ದಿಗೆ ಶ್ರಮವಹಿಸಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.
ಶುಭಾಷಯ ಕೋರಿದ ಶಾಸಕರು- ಸಂಸದರು
ಪಟ್ಟಣ ಪಂಚಾಯತ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಟಿ.ಕೆ.ಚಿದಾನಂದ್‌ರವರಿಗೆ ಶುಭ ಕೋರಿದರು ಆನಂತರ ಮಾತನಾಡಿದ ಸಂಸದ ಜಿ.ಎಸ್. ಬಸವರಾಜ್ ಹಾಗೂ ಶಾಸಕ ಮಸಾಲಜಯರಾಮ್‌ರವರು ನೂತನ ಅಧ್ಯಕ್ಷರು ಪಟ್ಟಣದ ನಾಗರೀಕರ ಆಶಯಗಳಿಗೆ ಪೂರಕವಾಗಿ ಕಾರ್ಯ ನಿರ್ವಹಿಸಲಿ ಜನಮೆಚ್ಚುಗೆಗೆ ಪಾತ್ರವಾಗಲಿ. ಪಟ್ಟಣವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯಲಿ ಎಂದು ಆಶಿಸಿದರು.
ನೂತನ ಅಧ್ಯಕ್ಷರನ್ನು ನಿಕಟಪೂರ್ವ ಅಧ್ಯಕ್ಷರಾದ ಅಂಜನ್‌ಕುಮಾರ್, ಉಪಾದ್ಯಕ್ಷೆ ಭಾಗ್ಯಮ್ಮ, ಸದಸ್ಯರಾದ ಯಜಮಾನ್‌ಮಹೇಶ್,ಮಧು, ಜಯಮ್ಮ,ಸ್ವಪ್ನಾನಟೇಶ್,ರವಿ, ಎನ್.ಆರ್.ಸುರೇಶ್, ಮುಖಂಡರಾದ ವಿ.ಟಿ.ವೆಂಕಟರಾಮ್,ದುಂಡರೇಣುಕಯ್ಯ, ಸೋಮೇನಹಳ್ಳಿಜಗದೀಶ್, ದಂಡಿನಶಿವರಕುಮಾರ್,ಸೇರಿದಂತೆ ಅನೇಕ ಮುಖಂಡರುಗಳು ಅಭಿನಂದಿಸಿದರು.