ನಗರದ ಕಳ್ಳತನ ಪ್ರಕರಣಗಳನ್ನು ತಡೆಗಟ್ಟಿ : ಮಾಜಿ ಶಾಸಕ ಡಾ.ರಫೀಕ್ ಅಹ್ಮದ್
ತುಮಕೂರು : ನಗರದಲ್ಲಿ ರಾತ್ರಿವೇಳೆಯಲ್ಲಿ ಪಾರ್ಕಿಂಗ್ ಮಾಡಿರುವ ವಾಹನಗಳ ಕಿಟಕಿ, ಗಾಜು ಹೊಡೆದು ಕಳ್ಳತನ ಮಾಡುವುದು, ಮನೆಗಳಲ್ಲಿ ಯಾರೂ ಇಲ್ಲದ ವೇಳೆ ಅಂತಹ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳರು ಕೈಚಳಕ ತೋರಿ ಒಡವೆ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿರುವ ಘಟನೆಗಳು ನಿರಂತರವಾಗಿ ಹೆಚ್ಚಾಗುತ್ತಿದೆ. ಇಷ್ಟಲ್ಲದೇ ಮುಖ್ಯರಸ್ತೆಗಳಲ್ಲಿರುವ ಬೀದಿಬದಿ ವ್ಯಾಪಾರಿಗಳ ತಳ್ಳುವ ಗಾಡಿಗಳನ್ನು ಕೂಡ ಕಳ್ಳತನ ಮಾಡುತ್ತಿದ್ದಾರೆ.
ಇಂತಹ ಕಳ್ಳತನವೆಸಗುತ್ತಿರುವ ಒಬ್ಬ ಕಳ್ಳನನ್ನೂ ಪತ್ತೆ ಹಚ್ಚುವಲ್ಲಿ ಪೋಲಿಸ್ ಸಿಬ್ಬಂಧಿ ವಿಫಲರಾಗಿದ್ದಾರೆ. ಇದಕ್ಕೆ ಕಾರಣವಾದರೂ ಏನು ಎಂದು ತಿಳಿಸಲಿ. ಸಿಬ್ಬಂಧಿಗಳ ಕೊರತೆಯೇ ಅಥವಾ ಇಚ್ಚಾಶಕ್ತಿಯ ಕೊರತೆಯೇ ಎಂದು ಸ್ಪಷ್ಟಪಡಿಸಬೇಕು. ಹಲವಾರು ದೂರುಗಳು ದಾಖಲಾದರೂ ಸಹ ಕಳ್ಳರ ಜಾಡು ಹಿಡಿಯುವಲ್ಲಿ ಎಡವುತ್ತಿರುವುದೇಕೆ ಎಂಬುದು ಸಾರ್ವಜನಿಕ ವಲಯದಲ್ಲಿ ಗೊಂದಲ ಮೂಡಿಸಿದೆ.
ನಗರದೆಲ್ಲೆಡೆ ಸ್ಮಾರ್ಟ್ಸಿಟಿ ವತಿಯಿಂದ ಹಾಗೂ ಪೋಲಿಸ್ ಇಲಾಖೆ ವತಿಯಿಂದ ದುಬಾರಿ ವೆಚ್ಚದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಿದ್ದಾರೆ ಆದರೂ ಕೂಡ ಕಳ್ಳರನ್ನು ಬೇಧಿಸುವಲ್ಲಿ ಸಾಧ್ಯವಾಗುತ್ತಿಲ್ಲ. ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳು ಸರಿಯಾದ ಸ್ಥಿತಿಯಲ್ಲಿ ಚಾಲ್ತಿಯಲ್ಲಿದೆಯೇ ಎಂಬ ಅನುಮಾನ ಮೂಡಿದೆ. ಪೋಲಿಸ್ ಇಲಾಖೆಯ ನಿರ್ಲಕ್ಷö್ಯತೆಯೇ ಇದಕ್ಕೆ ಪ್ರಬಲ ಕಾರಣವಾಗಿದೆ. ಇವರ ನಿರ್ಲಕ್ಷö್ಯತೆ ತಿಳಿದಿರುವ ಕಳ್ಳರು ಇನ್ನಷ್ಟು ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿ ಸಾರ್ವಜನಿಕರ ನಿದ್ದೆಗೆಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಡಾ.ರಫೀಕ್ ಅಹ್ಮದ್ ತಿಳಿಸಿದ್ದಾರೆ.
ಇಂತಹ ದೂರುಗಳಿಗೆ ವಿಶೇಷ ಒತ್ತು ನೀಡಿ ಸೂಕ್ಷö್ಮ ಸ್ಥಳಗಳಲ್ಲಿ ಗಸ್ತು ತಿರುಗುವ ಸಿಬ್ಬಂಧಿಗಳನ್ನು ಹೆಚ್ಚಿನ ಸಂಖ್ಯೆAiÀiಲ್ಲಿ ನೇಮಕ ಮಾಡಬೇಕು ನುರಿತ ಸಿಬ್ಬಂಧಿಗಳ ವಿಶೇಷ ತಂಡ ರಚಿಸಿ ಕಳ್ಳರನ್ನು ಬಂಧಿಸಿ ಸಾರ್ವಜನಿಕರಿಗೆ ಆಗಿರುವ ನಷ್ಟ ಭರಿಸಬೇಕು ಎಂದು ಡಾ.ರಫೀಕ್ ಅಹ್ಮದ್ ಒತ್ತಾಯಿಸಿದ್ದಾರೆ.
ಇನ್ನಾದರೂ ಪೋಲಿಸ್ ಇಲಾಖೆ ಇಂತಹ ಪ್ರಕರಣ ತಡೆಯುವಲ್ಲಿ ಕಳ್ಳರ ಎಡೆಮುರಿ ಕಟ್ಟಿ ಸಾರ್ವಜನಿಕರಲ್ಲಿರುವ ದುಗುಡವನ್ನು ದೂರಮಾಡಬೇಕು ಎಂದು ಡಾ.ರಫೀಕ್ ಅಹ್ಮದ್ ಆಗ್ರಹಿದ್ದಾರೆ.