ಕ್ಷೌರಿಕರಿಗೆ ಇ-ಶ್ರಮ್ ಕಾರ್ಡ್ ತರಬೇತಿ
ತುಮಕೂರು : ನಗರದ ಕೆ.ಅರ್ ಬಡಾವಣೆಯ ಶ್ರೀರಾಮ ಮಂದಿರದಲ್ಲಿ ತುಮಕೂರು ತಾಲ್ಲೂಕು ಹಾಗು ನಗರ ಸವಿತಾ ಸಮಾಜದ ಪಧಾದಿಕಾರಿಗಳಿಗೆ ಕೇಂದ್ರ ಸರ್ಕಾರದ ಇ-ಶ್ರಮ್ ಕಾರ್ಡ್ ತರಬೇತಿಯನ್ನು ನೀಡಲಾಯಿತು. ಮೊಬೈಲ್ ನಲ್ಲಿ ಹೇಗೆ ಮಾಡುವುದು ಎಂದು ತರಬೇತಿ ನೀಡಿ ಸ್ಥಳದಲ್ಲೆ ಪಧಾದಿಕಾರಿಗಳಿಗೆ ಇ-ಶ್ರಮ್ ಕಾರ್ಡ್ ಮಾಡಿಕೊಡಲಾಯಿತು.
ಈ ವೇಳೆಯಲ್ಲಿ ತುಮಕೂರು ತಾಲ್ಲೂಕು ನಗರ ಅಧ್ಯಕ್ಷ ಕಟ್ ವೆಲ್ ರಂಗನಾಥ್ ಮಾತನಾಡಿ ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರ ಕಾರ್ಮಿಕ ಇಲಾಖೆಯಿಂದ ನೀಡಿರುವ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಕಾರ್ಡ್ ನಮ್ಮ ರಾಜ್ಯ ಸರ್ಕಾರದ ಸವಲತ್ತನ್ನ ನೀಡಿದೆ. ಅದೇ ರೀತಿ ಇ-ಶ್ರಮ್ ಕಾರ್ಡ್ ಪಡೆಯುವುದರಿಂದ ಅಸಂಘಟಿತ ವಯಲಕ್ಕೆ ಸೇರಿರುವ ಕ್ಷೌರಿಕ ವೃತ್ತಿದಾರರಿಗೆ ಕೇಂದ್ರ ಸರ್ಕಾರದಿಂದ ಬರುವ ಸವಲತ್ತು ಪಡೆಯಲು ಸಾದ್ಯವಾಗುತ್ತದೆ ಎಂದರು. ಹಾಗಾಗಿ ಎಲ್ಲಾ ಸವಿತಾ ಸಮಾಜದ ಬಂಧುಗಳು ಈ ಕಾರ್ಡ್ ಮಾಡಿಸುವಂತೆ ಮನವಿ ಮಾಡಿದರು. ಹಾಗೆಯೇ ಪಧಾದಿಕಾರಿಗಳು ಬಿಡುವಿನ ಸಮಯದಲ್ಲಿ ಸಲೂನ್ ಗಳಿಗೆ ತೆರಳಿ ಇ-ಶ್ರಮ್ ಕಾರ್ಡ್ ಮಾಡಿಕೊಡಬೇಕೆಂದು ತಿಳಿಸಿದರು.
ಈ ಸಂಧರ್ಭದಲ್ಲಿ ಸವಿತಾ ಸಮಾಜದ ಪ್ರತಿನಿಧಿಗಳಾದ ಸುರೇಶ್, ಉಪಾಧ್ಯಕ್ಷರಾದ ರವಿಕುಮಾರ್, ಕೋಶಾಧಿಕಾರಿಗಳಾದ ಮಂಜುನಾಥ್, ನಾಗವಲ್ಲಿ ಅಧ್ಯಕ್ಷರಾದ ಗೋಪಾಲ್, ಹೊನ್ನುಡುಕೆ ಅಧ್ಯಕ್ಷರಾದ ರಘುರಾಮ್, ವೆಂಕಟರಾಮ್, ಹಾಗೂ ಪಧಾದಿಕಾರಿಗಳು ಉಪಸ್ಥಿತರಿದ್ದರು.