ಬಲಿಷ್ಟ ಭಾರತ ನಿರ್ಮಾಣಕ್ಕಾಗಿ ಬಿಜೆಪಿಗೆ ಮತ ನೀಡಲು ಶಾಸಕ ಬಿ. ಸುರೇಶ್ ಗೌಡ ಕರೆ
ತುಮಕೂರು : ವಸುದೈವ ಕುಟುಂಬಕಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟು ಬಲಿಷ್ಠ ಭಾರತ ನಿರ್ಮಾಣಕ್ಕಾಗಿ ಕೆಲಸ ಮಾಡುತ್ತಿರುವ ಬಿಜೆಪಿಯ ಕಮಲದ ಗುರ್ತಿಗೆ ಮತ ನೀಡುವಂತೆ ಶಾಸಕ ಬಿ ಸುರೇಶ್ ಗೌಡ ಕರೆ ನೀಡಿದರು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಾಣವರ ಗೇಟ್ ನಲ್ಲಿರುವ ಬಿಜೆಪಿ ಕಾರ್ಯಾಲಯ ಶಕ್ತಿಸೌಧದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಶಾಸಕ ಬಿ.ಸುರೇಶ್ ಗೌಡ ಮಾತನಾಡಿದರು.
ಈ ಲೋಕಸಭಾ ಚುನಾವಣೆ ದೇಶದ ರಾಜಕಾರಣದಲ್ಲಿ ಬಹಳ ಮಹತ್ವದ್ದಾಗಿದೆ ಇದಕ್ಕೆ ಐತಿಹಾಸಿಕ ಮಹತ್ವವಿದೆ ಈ ಬಾರಿ ಬಿಜೆಪಿಯನ್ನು ಪ್ರಧಾನ ಪಕ್ಷವಾಗಿ ಒಳಗೊಂಡಿರುವ ಎನ್‌ಡಿಎ ಮೈತ್ರಿಕೂಟವು 400ಕ್ಕೂ ಅಧಿಕ ಸಂಸದರನ್ನು ಪಡೆಯುವುದರ ಗುರಿಯೊಂದಿಗೆ ಜನರ ಮುಂದೆ ಹೋಗುತ್ತಿದ್ದೇವೆ.
ಈ ಗುರಿಯನ್ನು ಜನರು ಈಡೇರಿಸುತ್ತಾರೆ ಎಂಬ ನಂಬಿಕೆ ನಮ್ಮದಾಗಿದೆ ಎಂದು ಶಾಸಕ ಬಿ ಸುರೇಶ್ ಗೌಡ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಾವು ಈ ಚುನಾವಣೆ ಎದುರಿಸುತ್ತಿದ್ದೇವೆ, ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಇಷ್ಟು ಬಲಿಷ್ಠವಾದ ಮತ್ತು ನಿಸ್ವಾರ್ಥವಾಗಿ ಕೆಲಸ ಮಾಡುವಂತಹ ಪ್ರಧಾನಿ ಸಿಕ್ಕಿದ್ದು ಭಾರತದ 130 ಕೋಟಿ ಜನರ ಪುಣ್ಯ ಎಂದು ಸುರೇಶ್ ಗೌಡ ಬಣ್ಣಿಸಿದರು.
ಪ್ರಧಾನಿಯಾಗಿ ಕಳೆದ 10 ವರ್ಷಗಳಿಂದ ಒಂದೇ ಒಂದು ದಿನವೂ ಕೂಡ ರಜೆ ತೆಗೆದುಕೊಳ್ಳದೆ ಕೆಲಸ ಮಾಡುತ್ತಿದ್ದಾರೆ ಅವರಿಗೆ ದೇಶದ ಹಿತದ ಜೊತೆಗೆ ಬಡವರ ಕಲ್ಯಾಣಕ್ಕಾಗಿ ದೇಶವೇ ನನ್ನ ಪರಿವಾರ ಎಂದು ನರೇಂದ್ರ ಮೋದಿ ಕೆಲಸ ಮಾಡುತ್ತಿದ್ದಾರೆ ಇದು ನಮಗೆ ಅತ್ಯಂತ ಪ್ರೇರಣದಾಯಕವಾಗಿದೆ ಎಂದು ಹೇಳಿದರು.
2 ಲಕ್ಷಗಳಿಗೂ ಅತ್ಯಧಿಕ ಮತಗಳಿಂದ ಜಯ ವಿ. ಸೋಮಣ್ಣ:-
ತುಮಕೂರು ಜಿಲ್ಲೆ ನನಗೆ ಹೊಸದಲ್ಲ ಕಳೆದ 40 ವರ್ಷಗಳಿಂದ ಒಡನಾಟವನ್ನು ಇಟ್ಟುಕೊಂಡಿರುವ ನನಗೆ ತುಮಕೂರು ಜಿಲ್ಲೆ ನನ್ನ ತಾಯಿನಾಡಿನಷ್ಟೇ ಪವಿತ್ರವಾದದ್ದು ಎಂದು ಸೋಮಣ್ಣ ಹೇಳಿದರು.
ಈ ಚುನಾವಣೆಯಲ್ಲಿ ಎಲ್ಲೆಡೆ ನರೇಂದ್ರ ಮೋದಿ ಅವರ ಪರವಾದಂತ ಅಲೆಯಿದ್ದು ಎರಡು ಲಕ್ಷಗಳಿಗೂ ಅತ್ಯಧಿಕ ಮತಗಳಿಂದ ಜಯಗಳಿಸುವುದಾಗಿ ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಅನೇಕ ಕಾರ್ಯಕರ್ತರು ತಮ್ಮ ಸ್ವತಹ ಜೇಬಿನಿಂದ ಹಣ ಹಾಕಿಕೊಂಡು ಸ್ವಯಂ ಪ್ರೇರಿತರಾಗಿ ಗ್ರಾಮಗಳಿಗೆ ಹೋಗಿ ಮೋದಿ ಅವರಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ವಿ ಸೋಮಣ್ಣ ಹೇಳಿದರು.
ದೇವೇಗೌಡರ ಆಶೀರ್ವಾದವಿದೆ
ದೊಡ್ಡ ಗೌಡರ ಆಶೀರ್ವಾದ ಇದ್ದು ಜೆಡಿಎಸ್ ಕಾರ್ಯಕರ್ತರು ಕೂಡ ಬಿಜೆಪಿಯ ಜೊತೆಗೆ ಕೈಜೋಡಿಸಿ ಎಲ್ಲಾ ಕಡೆ ಕೆಲಸ ಮಾಡುತ್ತಿದ್ದಾರೆ ಈ ನಿಟ್ಟಿನಲ್ಲಿ ಮಧುಗಿರಿ ಕೊರಟಗೆರೆ ಚಿಕ್ಕನಾಯಕನಹಳ್ಳಿ ತುಮಕೂರು ನಗರ ತುರುವೇಕೆರೆ ತಿಪಟೂರು ತುಮಕೂರು ಗ್ರಾಮಾಂತರ ಹಾಗೂ ಗುಬ್ಬಿ ಸೇರಿದಂತೆ ಎಲ್ಲೆಡೆಯೂ ಕೂಡ ಜೆಡಿಎಸ್ ಕಾರ್ಯಕರ್ತರು ಕೂಡ ಕೆಲಸ ಮಾಡುತ್ತಿದ್ದು ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವಂತ ಕೆಲಸ ಆಗಬೇಕು ಎಂದು ಬಿಜೆಪಿ ಕಾರ್ಯಕರ್ತರಿಗೆ ಸೋಮಣ್ಣ ಮನವಿ ಮಾಡಿದರು.
ಗ್ಯಾರೆಂಟಿ ಯೋಜನೆಗಳಿಗಾಗಿ ಸರ್ಕಾರದ ಬೊಕ್ಕಸ ಖಾಲಿ ಖಾಲಿ
ಕೇವಲ ಗ್ಯಾರಂಟಿ ಯೋಜನೆಗಳಿಗಾಗಿ ಸರ್ಕಾರದ ಬೊಕ್ಕಸ ಖಾಲಿಯಾಗಿದ್ದು ರಾಜ್ಯದ ಸರ್ವಾಂಗಣ ಅಭಿವೃದ್ಧಿ ಆಗಲು ಹೇಗೆ ಸಾಧ್ಯ ಇದಕ್ಕೆ ಎಲ್ಲಿಂದ ಹಣ ತರುತ್ತೀರಿ ಎಂದು ಸುರೇಶ್ ಗೌಡ ಪ್ರಶ್ನಿಸಿದರು.
52,000 ಕೋಟಿ ರೂಪಾಯಿಗಳು ರಾಜ್ಯ ಬಜೆಟ್ ನಿಂದ 55,000 ಕೊಟ್ರು ರೂಪಾಯಿಗಳ ಗ್ಯಾರಂಟಿ ಯೋಜನೆಗಳಿಗಾಗಿ ಹಣ ಹೋದರೆ ಉಳಿದ ಅಭಿವೃದ್ಧಿ ಯೋಜನೆಗಳಿಗೆ ಸರ್ಕಾರ ಎಲ್ಲಿಂದ ಹಣ ತರುತ್ತದೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ವಿಶ್ವ ಮಾನ್ಯತೆ ಸಿಕ್ಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೊಂಡು ತಿರುಗಾಡುತ್ತಿದ್ದಾರೆ ಆದರೆ ಈ ಗ್ಯಾರೆಂಟಿ ಯೋಜನೆಗಳ ಅನುಷ್ಠಾನಕ್ಕೆ ಸಂಪುಟ ದರ್ಜೆ ಒಬ್ಬ ರಾಜಕಾರಣಿಯನ್ನು ಏಕೆ ನೇಮಕ ಮಾಡಬೇಕು ವಾರ್ಡ್ ಮಟ್ಟದ ಸಮಿತಿ ಏಕೆ ಗ್ಯಾರಂಟಿ ಯೋಜನೆ ಸರಿಯಾಗಿ ಅನುಷ್ಠಾನವಾಗುತ್ತಿಲ್ಲ ಎಂದು ಅರ್ಥ ಮಾಡಿಕೊಳ್ಳಬೇಕೆ ಎಂದು ಸುರೇಶ್ ಗೌಡ ಪ್ರಶ್ನೆಸಿದರು.
ಜಗತ್ತಿನಲ್ಲಿ ನಮ್ಮ ದೇಶದ ವರ್ಚಸ್ಸು ಇನ್ನಷ್ಟು ಹೆಚ್ಚಾಗಬೇಕು ಈ ನಿಟ್ಟಿನಲ್ಲಿ ಈ ಬಾರಿಯ ಚುನಾವಣೆಯಲ್ಲಿ ನಾವು ಭಾರತೀಯ ಜನತಾ ಪಾರ್ಟಿಯನ್ನು ಬೆಂಬಲಿಸುವುದರ ಜೊತೆಗೆ ನಾವೆಲ್ಲ ಅಹರ್ನಿಷಿ ಕೆಲಸ ಮಾಡಬೇಕು ನರೇಂದ್ರ ಮೋದಿ ಅವರ ಗೆಲುವಿಗಾಗಿ ಹಾಗೂ ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೆಲುವಿಗಾಗಿ ಗ್ರಾಮ ಗ್ರಾಮಗಳಲ್ಲಿ ಪ್ರತಿ ಮನೆಗೆ ಭೇಟಿ ನೀಡಿ ಕಟ್ಟ ಕಡೆಯ ವ್ಯಕ್ತಿಯನ್ನು ತಲುಪಿ ಬಿಜೆಪಿಗೆ ಮತ ಕೊಡಿಸುವಂತಾಗಬೇಕು ಎಂದು ಕಾರ್ಯಕರ್ತರಿಗೆ ಸುರೇಶ ಗೌಡ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಶಂಕರ್, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ವೈಎಚ್ ಹುಚಯ್ಯ ಶಿವಕುಮಾರ್ ಸಿದ್ದೇಗೌಡ ಪಂಚೆ ರಾಮಚಂದ್ರಪ್ಪ ನರಸಿಂಹಮೂರ್ತಿ, ಉಮೇಶ್ ಗೌಡ, ಮುಖಂಡರಾದ ಅಂಜಿನಪ್ಪ ಸುಮಿತ್ರದೇವಿ, ರೇಣುಕಮ್ಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.