ಜಿಲ್ಲೆತುಮಕೂರುರಾಜಕೀಯಸುದ್ದಿ

ದ್ವೇಷದ ರಾಜಕಾರಣ ಮಾಡುವ ಕೇಂದ್ರ ಬಿಜೆಪಿ ಸರ್ಕಾರ ಜನರಿಗೆ ಮಂಕುಬೂದಿ ಎರಚಿ ಅಧಿಕಾರಕ್ಕೆ ಬಂದಿದೆ: ನ್ಯಾ.ಪ್ರೊ.ರವಿ ವರ್ಮಕುಮಾರ್

ತುಮಕೂರು: ಕೇಂದ್ರದ ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದ್ದು ಪ್ರಪಂಚದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳನ್ನು ಐ.ಟಿ., ಇಡಿ ಗಳನ್ನು ದುರ್ಬಳಕೆ ಮಾಡಿ ಸರ್ಕಾರದ ವಿರುದ್ಧ ಮಾತನಾಡಿದವರಿಗೆ ಜೈಲಿಗೆ ಕಳಸುವ ಸಂಸ್ಕೃತಿ ಬೆಳಸಿ ಕೊಂಡಿದೆ ಇದನ್ನ ಬಂಡವಾಳ ಮಾಡಿಕೊಂಡು ಜನರಿಗೆ ಮುಂಕು ಬೂದಿ ಎರಚಿ ಅಧಿಕಾರಕ್ಕೆ ಬಂದಿದ್ದಾರೆ ಈಗಾಗಿ ಇಂತಹ ಸರ್ಕಾರಕ್ಕೆ ಜನರು ಯೋಚಿಸಿ ಮತ ನೀಡಬೇಕೆಂದು ಹೈಕೋರ್ಟ್ ನ ಮಾಜಿ ಅಡ್ವಕೇಟ್ ನ್ಯಾ.ಪ್ರೊ.ರವಿವರ್ಮ ಕುಮಾರ್ ಅವರು ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಜಾಗೃತ ಮತದಾರರ ಬಳಗ ಆಯೋಜನೆ ಮಾಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದವರು
ಪ್ರಪಂಚದಲ್ಲಿ ಕೇಳಿ ಅರಿಯದ ಬೃಹತ್ ಭ್ರಷ್ಠಚಾರದಲ್ಲಿ ತೊಡಗಿರುವ ಬಿಜೆಪಿ ಪಕ್ಷಕಕ್ಕೆ ಎಚ್ಚತ ಮತದಾರರು ಯಾವುದೇ ಕಾರಣಕ್ಕೂ ಮತ ನೀಡ ಬಾರದು ಮನವಿ ಮಾಡುತ್ತೇನೆ ಸರ್ಕಾರದ ಕಿತ್ತೊಗಿಯರಿ ಭಾಜಪಾ ಪಕ್ಷ ಭ್ರಷ್ಟಾಚಾರ ತೊಡಗಿದವರಿಗೆ ಅಧಿಕಾರ ಕೊಟ್ಟಿದ್ದಾರೆ ಎಡಿಎ ಒಕ್ಕೂಟ ದಲ್ಲಿ ಜೊತೆಯಲ್ಲಿ ಇರುವ ಆರವತ್ತು ಭಷ್ಟಚಾರಿಗಳಿಗೆ ಗುರ್ತಿಸಿ ಅಧಿಕಾರ ನೀಡಿದ್ದಾರೆ ಎಂದು ಗುಡುಗಿದರು.

ಇಡೀ ವಿಶ್ವದಲ್ಲೇ ಭ್ರಷ್ಟಚಾರದಲ್ಲಿ ತೊಡಗಿರುವ ಐತಿಹಾಸಿಕ ಸರ್ಕಾರ ಬಿಜೆಪಿ ಪಕ್ಷ ವಾಗಿದ್ದು ಜಾತ್ಯಾತೀತ ನಾಯಕ ದೇವೆಗೌಡ ಅವರು ಕೂಡಾ ಬಿಜೆಪಿ ದುರಾಡಳಿತಕ್ಕೆ ಮಾರು ಹೋಗಿ ಅವಕಾಶವಾದಿ ರಾಜಕಾರಣಿಯಾಗಿದ್ದಾರೆ ತನ್ನ ಕುಟುಂಬ ರಾಜಕಾರಣ ಉಳಿಸಿ ಕೊಳ್ಳಲು ಸಹಸ್ರ ಸಹಸ್ರ ಕಾರ್ಯಕರ್ತರಿಗೆ ಮೊಸ ಮಾಡಿದ್ದಾರೆ ಒಂದು ಬಾರಿ ತುಮಕೂರಿನಲ್ಲಿ ಹಿಂದುಳಿದ ವರ್ಗಗಳ ಸಭೆ ಗೆ ಕರೆದು ಕೊಂಡು ಹೋದರು ನಾನು ಕೂಡಾ ಹೋಗಿದೆ ಅನೇಕ ವಿಚಾರ ಸಮಸ್ಯೆಗಳ ಬಗ್ಗೆ ಚರ್ಚಿಸಿದ ಅವರು ಮಾತನಾಡುತ್ತಾ ಚುನಾವಣೆ ಯಾದ ನಂತರ ಮೋದಿ ಜೊತೆಗೆ ಕೈ ಜೊಡಿಸುತ್ತಿರಿ ಎಂಬ ವಿಚಾರಕ್ಕೆ ದೇವೆಗೌಡ ಅವರು ಗೆಲ್ಲಲಿ ಸೋಲಲಿ ಮೋದಿ ಸರ್ಕಾರ ಬೆಂಬಲಿಸುವುದಿಲ್ಲ ಎಂದ ಅವರು ಇವತ್ತು ಸುಳ್ಳುಗಾರರಾಗಿ ಅವಕಾಶವಾದಿ ರಾಜಕಾರಣಿಯಾಗಿ ಲೋಕಸಭಾ ಎಲ್ಲಾ ಟಿಕೆಟ್ ಕುಟುಂಬಕ್ಕೆ ನೀಡಿದ್ದಾರೆ ತುಮಕೂರು ಜಿಲ್ಲೆ ಜೆಡಿಎಸ್ ಭದ್ರ ಕೋಟೆ ಯಾಗಿತ್ತು ಆದರೆ ಯಾರಿಗೂ ಟಿಕೆಟ್ ನಿಡಿಲಿಲ್ಲ ಹಾಗಾಗಿ ಇಂತಹ ಪಕ್ಷದ ಜೊತೆಗೆ ಹೊಗಿರುವ ಇವರಿಗೆ ಹಾಗೂ ಬಿಜೆಪಿಗೆ ಸಹ ಮತ ನೀಡಬೇಡಿ ಎಂದರು.

ನಮ್ಮ ದೇಶದಲ್ಲಿ ಅನೇಕ ಪ್ರಧಾನಿಗಳು ದೇಶಕ್ಕೆ ಅಚ್ಚುಮೆಚ್ಚಿನ ಕೊಡುಗೆ ನೀಡಿದ್ದಾರೆ ಮೋದಿಯವರು ಸಣ್ಣ ಪ್ರಮಾಣದ ಸಹಾಯ ಮಾಡಿ ನಾನು ವಿಶ್ವ ನಾಯಕನೇಂದು ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ ಆದರೆ ಈ ಹಿಂದೆ ದೇಶ ಅಳಿದ ಅನೇಕ ಪ್ರದಾನಿಗಳು ಅವರೆಲ್ಲರೂ ಬೆಸ್ಟ್ ಪ್ರಧಾನಿ ಗಳಾಗಿದ್ದಾರೆ ಅದರೆ ಜನರಿಗೆ ಮಂಕು ಬೂದಿ ಎರಚಿ ಕೋಮುವಾದಕ್ಕೆ ಬೆಂಬಲಿಸುವ ಬಿಜೆಪಿ ಪಕ್ಷವನ್ನು ಯಾವ ಕಾರಣದಿಂದಾಗಿ ಅಧಿಕಾರಕ್ಕೆ ತರಬಾರದು ಮತ್ತು ಮತ ಹಾಕಬಾರದು ಬಿಜೆಪಿಯ ವಿರುದ್ಧ ವಾಗಿ ಮತ ಚಲಾಯಿಸ ಬೇಕು ಎಂದರು.

74 ವರ್ಷಗಳ ಐತಿಹಾಸಿಕ ಇತಿಹಾಸ ಹೊಂದಿರುವ ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎಂಬ ಹೇಳಿಕೆಯನ್ನ ನೀಡಿರುವ ಬಿಜೆಪಿಗರು ಮನುಸ್ಮೃತಿ ಅಧಿಕಾರಕ್ಕೆ ತರಲು ಹವಣಿಸುತ್ತಿದ್ದಾರೆ ಮನು ಸ್ಮೃತಿ ಅಧಿಕಾರಕ್ಕೆ ಬರುತ್ತದೆ ಇದ್ದರಿಂದ ದುಡಿಯುವ ವರ್ಗಕ್ಕೆ ಶಿಕ್ಷಣ ಇಲ್ಲದೇ, ಮಹಿಳೆಯರ ಸ್ವಾತಂತ್ರ‍್ಯ ತೆಗೆದು ಅಡಿಯಾಳಗಿ ದುಡುಸಿಕೊಳ್ಳುವ ಕಾನೂನು ಮಾಡುವುದು ಹಿಗಾಗಿ ಸಮಾನತೆ ಕಿಳುವುದು ಇದರ ಉದ್ದೇಶ ಅದಕ್ಕಾಗಿ ಸಂವಿಧಾನ ಬದಲಾವಣೆ ಮಾಡುವ ಮಾತುಗಳನ್ನು ಆಡುತ್ತಿದ್ದಾರೆ ಎಂದರು.

ದ್ವೇಷದ ರಾಜಕಾರಣ ಮಾಡುವ ಬಿಜೆಪಿ ಸರ್ಕಾರ ದೆಹಲಿಯಲ್ಲಿರುವ ಮುಖ್ಯಮಂತ್ರಿಗಳಾದ ಅರವಿಂದ್ ಕ್ರೇಜ್ರಿವಾಲ್ ಅವರನ್ನು ತಿಹಾರ್ ಜೈಲಿಗೆ ಇಟ್ಟಿದ್ದಾರೆ ಅದನ್ನು ಸಂಸ್ಥೆಗಳಾದ ಇಡಿ ಐ.ಟಿ.ಗಳನ್ನ ಬಳಸಿಕೊಂಡು ತಮಗಳ ವಿರುದ್ಧ ಛಕಾರವೆತ್ತುವ ರಾಜಕಾರಣಿಗಳನ್ನು ಮೂಲೆಗುಂಪು ಮಾಡುವ ಉದ್ದೇಶವನ್ನು ಬಿಜೆಪಿ ಸರ್ಕಾರ ಹೊಂದಿದ್ದು ಇದಕ್ಕೆ ಹೆದರಿದ ಅನೇಕ ನಾಯಕರುಗಳು ಬಿಜೆಪಿ ಪಕ್ಷಕ್ಕೆ ಫಲಾಯಾನವಾಗುತ್ತಿದ್ದು ದೇಶದಲ್ಲಿ ಕೋಮುವಾದವನ್ನು ಬಿತ್ತುತ್ತ ಜನರಿಗೆ ಭಯದ ವಾತಾವರಣ ನಿರ್ಮಿಸಿ ಉದ್ಯೋಗ ಶಿಕ್ಷಣ ಸೇರಿದಂತೆ ಅರಾಜಕತೆಯನ್ನು ಬಿಜೆಪಿ ಸೃಷ್ಟಿಸಿದೆ ಎಂದರು.

ಈಗಾಗಲೇ ನಾನು ಗಮನಿಸಿದಂತೆ ಗ್ರಾಮೀಣ ಭಾಗಗಳಲ್ಲಿ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಬೆಲೆ ಏರಿಕೆ ನಿರುದ್ಯೋಗ ಕಾರ್ಮಿಕ ಕೃಷಿಕ ಸೇರಿದಂತೆ ಮಹಿಳೆಯರು ಹಾಗೂ ಇತರರಿಗೆ ಕೇಂದ್ರ ಸರ್ಕಾರದಿಂದ ಆಗಿರುವ ಅನ್ಯಾಯ ಹಾಗೂ ಅಸಮಾನತೆಯ ವಿರುದ್ಧವಾಗಿ ಜನರು ಕಾಂಗಿಟ್ಟಿದ್ದು ಬಿಜೆಪಿ ಸರ್ಕಾರ ನಮಗೇನು ಮಾಡಿದೆ ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಈ ಎಲ್ಲಾ ಕಾರಣಗಳಿಂದಾಗಿ ಸಮ ಸಮಾಜದ ನಿರ್ಮಾಣಕ್ಕಾಗಿ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಪರ್ಯಾಯವಾಗಿ ನಿಂತಿರುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದು ಅವರು ಕರೆ ನೀಡಿದರು.

ಪ್ರಗತಿಪರ ಚಿಂತಕ ದಲಿತ ಮುಖಂಡ ಕೆ.ದೊರೈರಾಜು ಮಾತನಾಡಿ ದೇಶದಲ್ಲಿ ಉದ್ಯೋಗ ಇಲ್ಲದ ಯುವಕರು ಬೌದ್ದಿಕ ಸಾಮರ್ಥ್ಯವನ್ನು ಹೊಂದಿದ್ದು ಉದ್ಯೋಗ ಇಲ್ಲದೆ ಹಾಳಗುತ್ತಿದ್ದಾರೆ ಇದೆ ಆದರೆ ಅವರಿಗೆ ಕೇಂದ್ರ ಸರ್ಕಾರ ಮೋಸವಾಗಿದೆ, ಎಸ್.ಸಿ.ಎಸ್ .ಟಿ ಗೆ ಇರುವ ಮೀಸಲಾತಿ ಹಿಂದುಳಿದ ವರ್ಗದವರು ಅನ್ಯಾಯದ ಹಾದಿಯಲ್ಲಿ ಪಡೆಯಲು ಹಾತೊರೆಯುತ್ತಿದ್ದಾರೆ

ಮೋದಿಸರ್ಕಾರ ಎಲ್ಲಾ ವಲಯ ವನ್ನ ಖಾಸಗೀಕರಣ ಮಾಡಿ ಕೇಂದ್ರದ ಸರ್ಕಾರದ ಅಡಿಯಲ್ಲಿ ಕೆಲಸಗಳು ಇಲ್ಲದ ಹಾಗೆ ಮಾಡಿ ಕೇಂದ್ರದ ಎರಡು ಲಕ್ಷ ಉದ್ಯೋಗ ಖಾಲಿ ಇದ್ದರೂ ಯುವಕರಿಗೆ ಮಂಕುಬೂದಿ ಎರಚಿ ದೊಡ್ಡ ದ್ರೋಹ ಮಾಡಿದ್ದಾರೆ ಸರ್ಕಾರಿ ಉದ್ಯೋಗದಲ್ಲಿ ಯಾರಿಗೂ ವಿನಾಯಿತಿ ಕೊಡದೇ ಸತಾಯಿಸುವ ಉದ್ಯೋಗ ಇಂದು ರಾಷ್ಟ್ರೀಯ ಸಮಸ್ಯೆ ಪರಿಣಮಿಸಿದೆ ಎಂದರು.

ಸರ್ಕಾರ ಕ್ಕೆ ಬರುವ ಆದಾಯ ಆರ್ಥಿಕ ವಿಚಾರಗಳನ್ನು ಜನರಿಗೆ ತಿಳಿಸದೆ ದ್ರೋಹ ಮಾಡಿರುವ ಮೋದಿಸರ್ಕಾರ ವಿವಿಧ ಹಂತಗಳಲ್ಲಿ ಘೋಷಣೆ ಮಾಡಿದ ಉದ್ಯೋಗ ಗಳು ಮಾಯಾ ಮಾಡಿ ಯುವಕ ಯುವತಿಯರ ಗೆ ಬಹು ದೊಡ್ಡ ಮೋಸ ಮಾಡಿದೆ, ಭಾವನಾತ್ಮಕವಾಗಿ ಮಾತನಾಡಿ ಜನರಿಗೆ ಮನರಂಜನೆ ನೀಡಿ ಮಂಕು ಬೂದಿ ಎರಚುತ್ತಿದ್ದಾರೆ,ಆರ್ಥಿಕ ವ್ಯವಸ್ಥೆ ಸ್ಥಬ್ದವಾಗಿದೆ ಬಂಡವಾಳ ಶಾಹಿಗಳ ಕೈಗೆ ಆರ್ಥಿಕ ವ್ಯವಸ್ಥೆ ತಲುಪಿದೆ ಶೆ. 90%ರಷ್ಟು ಅಸಂಘಟಿತ ಕಾರ್ಮಿಕರು ಅವರ ಮಾತು ಕೇಳುವಂತಾಗಿದೆ, ಆರೋಗ್ಯ, ಶಿಕ್ಷಣ, ಉದ್ಯೋಗ, ಮಹಿಳೆಯರು ಸೇರಿದಂತೆ ವಿವಿಧ ವಲಯಗಳಿಗೆ ಕಾನೂನನ್ನು ತಿದ್ದುಪಡಿ ತಂದು ಸುಲಿಗೆ, ಶೋಷಣೆಗೆ ಅವಕಾಶ ಮಾಡಿದೆ ಇದ್ದನು ಕೇಳಲು ಹೋದರೆ ಜೈಲಿಗೆ ಹಾಕುತ್ತೆವೆ ಎಂಬ ಸರ್ವಾಧಿಕಾರಿ ಧೋರಣೆಯನ್ಮ ತೋರಿ ಬಂಡವಾಳ ಶಾಹಿ ಆಡಳಿತವನ್ನು ಜಾರಿಗೆ ತರಲು ಯತ್ನಿಸಿದೆ ಎಂದರು.

ಅಲ್ಪಸಂಖ್ಯಾತ, ಹಾಗೂ ಇತರರಿಗೆ ಜಾತಿ ಧರ್ಮ ಎನ್ನುವ ಹೆಸರಿನಲ್ಲಿ ಅನೇಕ ವಿಚಾರಗಳಲ್ಲಿ ಖಿನ್ನತೆ ಮೂಡಿಸಿ ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳದ ಹಾಗೆ ಮಾಡಿದರೆ ಜಾತಿ, ಸಂಘ , ಕೋಮುವಾದ ಎಂಬ ಭೂತ ತೋರಿಸಿ ಭಯದ ವಾತಾವರಣ ಸೃಷ್ಟಿ ಮಾಡಿದ್ದಾರೆ ಯಾವ ಭಯೋತ್ಪಾದಕನಿಗೂ ಕಡಿಮೆ ಇಲ್ಲದ ಹಾಗೆ ಮಾಡಿದ್ದಾರೆ ಇಂತಹ ಪಕ್ಷಕ್ಕೆ ಅಧಿಕಾರ ನೀಡಬಾರದು ಇವರನ್ನು ಸೋಲಿಸಿ ಇವರ ಸಿದ್ದಾಂತಗಳಿಗೆ ಸೋಲಾಗ ಬೇಕಿದೆ ಜನರಿಗೆ ಮಂಕು ಬೂದಿ ಎರಚಿ ಬಿಜೆಪಿ ವಿರುದ್ದ ಕಾಂಗ್ರೆಸ್ ಗೆ ಮತ ಹಾಕುವ ಮೂಲಕ ಸೋಲಿಸಿಬೇಕು ಎಂದರು.

ತುಮಕೂರಿನ ಸಮಗ್ರ ಅಭಿವೃದ್ಧಿ ಬಗ್ಗೆ ಯಾವುದೇ ಹೋರಾಟವನ್ನು ಬಿಜೆಪಿ ಸರ್ಕಾರ ಮಾಡಲಿಲ್ಲ ಬೆಂಗಳೂರಿಗೆ ಪರ್ಯಾಯ ನಗರ ತುಮಕೂರು ನಗರದ ಜನರಿಗೆ ಮೊಸ ವಾಗಿದೆ ಸ್ಮಾರ್ಟ್ ಸಿಟಿ ಹೆಸರಿಗೆ ಅಷ್ಟೇ ಇದ್ದು ನಗರ ಸರಿಯಾದ ಅಭಿವೃದ್ಧಿ ಯಾಗಲಿಲ್ಲ ಈಗ ಲೋಕಸಭೆಗೆ ನಿಂತಿರುವ ಅಭ್ಯರ್ಥಿ ಮುದ್ದಹನುಮೇಗೌಡ ಅವರು ಬೌದ್ದಿಕವಾಗಿ ಜನರ ಪರ ಹೋರಾಟ ಸಿದ್ದರಿದ್ದು ಅವರಿಗೆ ಮತ ಹಾಕಿ ಜನಪರ ಹೋರಾಟ ಗಳಿಗೆ ಅರ್ಥ ಕೊಡಬೇಕು ಬೇಕು ಕೊಬ್ಬರಿ ಹೋರಾಟ ಕ್ಕೆ ಮುನ್ನುಡಿ ಬರೆದವರು ಇವರು ಬಡವರು ಪರವಾಗಿ ಧ್ವನಿಯಾಗುವ ಇವರಿಗೆ ಮತ ನೀಡಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಕಾ.ಸ.ಪ. ಮಾಜಿ ಅಧ್ಯಕ್ಷರಾದ ಬಾ.ಹ.ರಮಾಕುಮಾರಿ, ಚರಕ ಆಸ್ಪತ್ರೆಯ ಡಾ
ಬಸವರಾಜು, ಕೊಳಗೇರಿ ನರಸಿಂಹಮೂರ್ತಿ ಸೇರಿದಂತೆ ಜಾಗೃತ ಬಳಗದ ಇತರರು ಉಪಸ್ಥಿತರಿದ್ದರು

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker