ಕಿಡಿಗೇಡಿಗಳಿಂದ ರಾಗಿ ಹುಲ್ಲಿನ ಬಣವೆಗೆ ಬೆಂಕಿ : ಸಾವಿರಾರು ರೂಗಳ ನಷ್ಟ
ಕುಣಿಗಲ್ : ಯಾರೋ ಕಿಡಿಗೇಡಿಗಳು ರಾಗಿ ಹುಲ್ಲಿನ ಬಣವೆಗೆ ಬೆಂಕಿ ಹಚ್ಚಿದ ಕಾರಣ ಹುಲ್ಲಿನ ಬಣವೆ ಎಲ್ಲ ಸುಟ್ಟು ಕರಕಲಾಗಿದೆ ಎಂದು ಸ್ಥಳೀಯ ಸಾರ್ವಜನಿಕರು ತಿಳಿಸಿದ್ದಾರೆ.
ತಾಲೂಕಿನ ಹುಲಿಯೂರುದುರ್ಗ ಹೋಬಳಿ ನಿಡಸಾಲೆ ಹರಿಜನ ಕಾಲೋನಿ ತಮ್ಮಣ್ಣ ಬಿನ್ ಬೋರಯ್ಯ ಎಂಬುವರಿಗೆ ಸೇರಿದ ರಾಗಿ ಹುಲ್ಲಿನ ಬಣವೆಯಾಗಿದೆ ಈ ಹುಲ್ಲಿನ ಬಣವೆ ಸುಮಾರು 80 ಸಾವಿರ ಬೆಲೆ ಬಾಳುತ್ತಿತ್ತು ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ ಹಿನ್ನೆಲೆಯಲ್ಲಿ ರಾಗಿ ಬಣವೆ ಸಂಪೂರ್ಣ ಸುಟ್ಟು ಕರಕಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ ತಕ್ಷಣ ಸ್ಥಳೀಯ ಸಾರ್ವಜನಿಕರು 35 ಕಿಲೋಮೀಟರ್ ದೂರದಲ್ಲಿರುವ ಕುಣಿಗಲ್ ಅಗ್ನಿಶಾಮಕ ಠಾಣೆಗೆ ವಿಷಯ ತಿಳಿಸಿದಾಗ ಅಗ್ನಿಶಾಮಕ ವಾಹನ ಕೆಟ್ಟಿದೆ ಹಾಗೂ ನೀರು ಕೂಡ ಇಲ್ಲ ಎಂದು ತಿಳಿಸಿದರು ನಂತರ 20 ಕಿಲೋಮೀಟರ್ ದೂರದಲ್ಲಿರುವ ಮದ್ದೂರು ಅಗ್ನಿಶಾಮಕ ಠಾಣೆಗೆ ದೂರವಾಣಿ ಕರೆ ಮಾಡಿದಾಗ ಅವರು ಕೂಡ ಅಗ್ನಿ ನಂದಿಸುವ ವಾಹನದಲ್ಲಿ ನೀರಿಲ್ಲ ಎಂದು ತಿಳಿಸಿದಾಗ ತುಂಬಾ ಬೇಸರವಾಯಿತು ಎಂದ ಅವರು ಅಗ್ನಿಶಾಮಕ ವಾಹನ ಬೆಂಕಿ ನಂದಿಸುವ ಕಾರ್ಯಕ್ಕೆ ಬಂದಿದ್ದರೆ ರೈತನ ಅಷ್ಟು ಇಷ್ಟೋ ರಾಗಿ ಹುಲ್ಲು ಉಳಿಯುತ್ತಿತ್ತೇನೋ ಕುಣಿಗಲ್ ಪಟ್ಟಣದಿಂದ ಅಗ್ನಿಶಾಮಕ ಠಾಣೆಯ ವಾಹನ ನಿಡಸಾಲೆಗೆ ಬರಲು 35 ಕಿ.ಮೀ ದೂರ ಇರುವುದರಿಂದ ಹುಲಿಯೂರುದುರ್ಗದಲ್ಲಿ ಒಂದು ಅಗ್ನಿಶಾಮಕ ಠಾಣೆಯನ್ನು ತೆರೆಯಬೇಕೆಂದು ಸಾರ್ವಜನಿಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ ಅಗ್ನಿ ಅವಘಡದಿಂದ ಸುಟ್ಟು ಕರಕಲಾಗಿರುವ ಹುಲ್ಲಿನ ಬಣವೆ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ತೆರಳಿ ಪರಿಶೀಲನೆ ಮಾಡಿ ಈ ಬರಗಾಲದಲ್ಲಿ ನಷ್ಟವನ್ನು ಅನುಭವಿಸಿರುವ ರೈತನಿಗೆ ಸರ್ಕಾರದಿಂದ ಪರಿಹಾರ ಕೊಡಿಸುವರೇ ಎಂದು ಕಾದು ನೋಡಬೇಕಾಗಿದೆ?
ವರದಿ: ರೇಣುಕಾ ಪ್ರಸಾದ್