ಗುಬ್ಬಿ : ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ವಿರುವ ಬ್ಯಾನರ್ ತೆರವುಗೊಳಿಸಲು ಮುಂದಾದ ಅಧಿಕಾರಿಗಳ ವಿರುದ್ಧ ಜಿ.ಹೊಸಹಳ್ಳಿ ದಲಿತ ಸಮುದಾಯದ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಕಸಬಾ ಹೋಬಳಿ ಜಿ ಹೊಸಹಳ್ಳಿ ಗ್ರಾಮದಲ್ಲಿ ಬಹು ವರ್ಷಗಳಿಂದ ನಿರ್ಮಾಣವಾಗಿರುವ ಮಹಾ ನಾಯಕ ಅಂಬೇಡ್ಕರ್ ಬ್ಯಾನರ್ ಗ್ರಾಮದ ಮುಂದೆ ಅಂಟಿಸಲಾಗಿದ್ದು ಸಂವಿಧಾನ ಶಿಲ್ಪಿ ಬಾಬಾ ಸಾಹೇಬರು ದಲಿತರ ದೇವರಾಗಿ ನಮ್ಮ ಪ್ರಸ್ತುತ ಬದುಕಿನ ಎಲ್ಲಾ ಏಳಿಗೆಗೆ ಕಾರಣರಾದ ಮಹಾ ಪುರುಷರ ಭಾವಚಿತ್ರ ತೆಗೆಯಲು ಮುಂದಾಗಿದ್ದು ಯಾರ ಪ್ರೇರೇಪಣೆಯಿಂದ ಎಂಬುದು ತಿಳಿಯುತ್ತಿಲ್ಲ ಆದರೆ ಈ ಹಿಂದೆ ಹಲವು ಚುನಾವಣೆಗಳು ನಡೆದಿದ್ದು ಯಾವತ್ತೂ ಇಲ್ಲದ ಮಾನದಂಡ ಇಂದು ಮುನ್ನೆಲೆಗೆ ಬಂದಿದ್ದು ಕಾನೂನು ಎಲ್ಲರಿಗೂ ಒಂದೇ ಆ ಆದೇಶದ ನಿಯಮ ಏನು ಎಂಬುದು ತಿಳಿಸದೇ ತೆರವಿಗೆ ಮುಂದಾಗಿರುವುದು ದಲಿತ ಸಮುದಾಯದ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ದಲಿತ ಮುಖಂಡ ದೊಡ್ಡಗುಣಿ ಕೀರ್ತಿ ಅಸಮಾಧಾನ ಹೊರಹಾಕಿದರು.
ಲೋಕಸಭಾ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿ ಬೆನ್ನಲ್ಲೇ ಹೊಸ ದಲಿತ ಸಮುದಾಯಕ್ಕೆ ಮಸಿ ಬಳಿಯುವ ಕೆಲಸವೊಂದು ಗುಬ್ಬಿ ತಾಲ್ಲೂಕಿನಲ್ಲಿ ಉದ್ಭವಿಸಿದ್ದು ಇದಕ್ಕೆ ನೈಜ ಕಾರಣ ಯಾರು ಇದರ ಪಿತೂರಿ ಹಿಂದಿನ ಮರ್ವ ಏನು ಎಂಬುದು ತಿಳಿಯುತ್ತಿಲ್ಲ ಆದರೆ ಪ್ರಾಣ ಬಿಟ್ಟೆವು ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರವಿರುವ ಬ್ಯಾನರ್ ತೆರವು ಗೋಳಿಸಲು ಬಿಡುವುದಿಲ್ಲ ಎಂದು ಮುಖಂಡ ಅರಿವೇಸಂದ್ರ ಕೃಷ್ಣಪ್ಪ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ವಾಗ್ದಾಳಿ ನಡೆಸಿದರು.
ಪಿಡಿಒ ಸೇರಿದಂತೆ ಚುನಾವಣಾ ಅಧಿಕಾರಿಗಳು ಪೊಲೀಸರ ಸಮ್ಮುಖದಲ್ಲಿ ತೆರವು ಕಾರ್ಯಕ್ಕೆ ಮುಂದಾದ ಸಂದರ್ಭದಲ್ಲಿ ನೂರಾರು ದಲಿತ ಮುಖಂಡರು ತೆರವು ಗೊಳಿಸಲು ಬಿಡುವುದಿಲ್ಲ ಎಂದು ಪಟ್ಟು ಸಡಿಲಿಸದ ಹಿನ್ನೆಲೆ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸ್ಥಳದಿಂದ ಕಾಲ್ಕಿತ್ತರು ಆದರೂ ಸಹ ಕೆಲವು ಘಂಟೆಗಳ ಕಾಲ ಜಿ.ಹೊಸಹಳ್ಳಿ ದಲಿತ ಸಮುದಾಯದ ಮುಖಂಡರು ವಿರೋದ ವ್ಯಕ್ತಪಡಿಸಿ ಘೋಷಣೆ ಕೂಗಿದರು.