ಕೊರಟಗೆರೆ : ಕೊರಟಗೆರೆ ತಾಲೂಕಿನ ಹಂಚೆಹಳ್ಳಿ ಬಳಿಯ ತಿಮ್ಮಪ್ಪನ ಬೆಟ್ಟದ ತಪ್ಪಲಿನಲ್ಲಿ ಅರಣ್ಯ ಇಲಾಖೆ ಇಟ್ಟಿದ ಬೂನಿಗೆ ಚಿರತೆ ರಾತ್ರಿ ಸೆರೆ ಸಿಕ್ಕಿದೆ ಎನ್ನಲಾಗಿದೆ.
ರಾತ್ರಿಯ ವೇಳೆ ತಾಲೂಕಿನ ಹಂಚೇಹಳ್ಳಿ ಗ್ರಾಮಕ್ಕೆ ಆಗಮಿಸಿ ಕುರಿ, ಮೇಕೆ ಹಾಗೂ ಸಾಕು ನಾಯಿಗಳನ್ನು ತಿನ್ನುತ್ತಿದ್ದ ಚಿರತೆ ರೈತರಿಗೆ ಭಯ ಹುಟ್ಟಿಸಿ ಭಯಬೀತಿಗೊಳಿಸಿದ್ದ ಚಿರತೆಯನ್ನು ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ತಿಮ್ಮಪ್ಪನ ಬೆಟ್ಟದ ಬಳಿ ಇಟ್ಟಿದ್ದ ಬೂನಿಗೆ ಚಿರತೆ ಸೆರೆಯಾಗಿದೆ, ತಿಮ್ಮಪ್ಪನ ಬೆಟ್ಟ ಸೇರಿದಂತೆ ಇನ್ನಿತರ ಸುತ್ತುಮುತ್ತಲ ಬೆಟ್ಟ ಗುಡ್ಡಗಳಲ್ಲಿ ಚಿರತೆಯ ಹಾವಳಿ ಹೆಚ್ಚಾಗಿದ್ದು ಸುತ್ತ ಮುತ್ತಲ ಗ್ರಾಮಗಳಾದ ಬೋಡಬಂಡೆನಹಳ್ಳಿ, ಹಂಚಿಹಳ್ಳಿ ಹಾಗೂ ಮಾದವಾರ ಗ್ರಾಮಗಳಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು ಇದರಿಂದ ರೈತರು ಸಂಜೆಯ ವೇಳೆ ಜಮೀನುಗಳ ಕಡೆ ಹೋಗುತ್ತಿರಲಿಲ್ಲ ಎನ್ನಲಾಗಿದ್ದು ಈ ಬಾಗದಲ್ಲಿ ಇನ್ನು ಹೆಚ್ಚಿನ ಚಿರತೆಗಳು ಇದ್ದು ಈ ಚಿರತೆಗಳನ್ನು ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಅರಣ್ಯ ಇಲಾಖೆಯ ಬೂನಿಗೆ ಸೆರೆ ಸಿಕ್ಕ ಚಿರತೆಯನ್ನು ಅರಣ್ಯ ಇಲಾಖಾ ಸಿಬ್ಬಂದಿ ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದು ಉಳಿದ ಚಿರತೆಗಳ ಸೆರೆಗೆ ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.