ಗುಬ್ಬಿ : ದೇವಾಲಯದ ಬಾಗಿಲು ಬೀಗ ಮುರಿದು ಹುಂಡಿ ಹಾಗೂ ಬೀರುವಿನಲ್ಲಿದ್ದ ಬೆಳ್ಳಿ,ಚಿನ್ನ ನಗದು ದೋಚಿರುವ ಘಟನೆ ತಾಲ್ಲೂಕಿನ ಹಂಡನಹಳ್ಳಿ ಗ್ರಾಮದ ಶ್ರೀ ಲಕ್ಷ್ಮೀ ಬಂಡಿ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ನಡೆದಿದೆ.
ಗುಬ್ಬಿ ತಾಲೂಕಿನ ಚೇಳೂರು ಹೋಬಳಿಯ ಹಂಡನಹಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ದೇವಸ್ಥಾನದ ಮುಖ್ಯ ಬಾಗಿಲಿನ ಬೀಗ ಮುರಿದು ನಂತರ ದೇವಾಲಯದ ಹುಂಡಿಯಲ್ಲಿದ್ದ ಅಂದಾಜು 60 ಸಾವಿರ ರೂಗಳು , ಬೀರುವಿನಲ್ಲಿದ್ದ 10 ಗ್ರಾಂ ಚಿನ್ನದ ಒಡವೆ, ಸುಮಾರು ಎರಡೂವರೆ ಕೆಜಿ ತೂಕದ ಬೆಳ್ಳಿಯ ಪೂಜಾ ಸಾಮಾಗ್ರಿಯನ್ನು ಕಳ್ಳರು ದೋಚಿರುವ ಬಗ್ಗೆ ಬೆಳಿಗ್ಗೆ ದೇವಾಲಯದ ಬಳಿ ಬಂದ ಭಕ್ತರಿಗೆ ವಿಚಾರ ತಿಳಿದು ಅಕ್ಕ ಪಕ್ಕದವರಿಗೆ ವಿಚಾರ ತಿಳಿಸಿದ್ದಾರೆ.
ನಂತರ ಸ್ಥಳಕ್ಕೆ ಆಗಮಿಸಿದ ಚೇಳೂರು ಪೊಲೀಸ್ ಸಿಬ್ಬಂದಿಗಳು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.