ದಸರಾ ನಮ್ಮ ಸಂಸ್ಕೃತಿಯ ಪ್ರತೀಕ : ಸಚಿವ ಡಾ.ಜಿ.ಪರಮೇಶ್ವರ್
ತುಮಕೂರು : ನವರಾತ್ರಿ ಉತ್ಸವ ಕರ್ನಾಟಕದಲ್ಲಿ ಅಲ್ಲ.ಇಡೀ ದೇಶದಲ್ಲಿಯೇ ನಡೆಯುತ್ತದೆ.ಆದರೆ ಮೈಸೂರಿನ ದಸರಾ ಮಹೋತ್ಸವ ಅವುಗಳನ್ನೆಲ್ಲಾ ಮೀರಿಸುವಂತದ್ದು ಎಂದು ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ತುಮಕೂರು ಜಿಲ್ಲಾ ದಸರಾ ಸಮಿತಿ ಆಯೋಜಿಸಿದ್ದ 33ನೇ ವರ್ಷದ ದಸರಾ ಉತ್ಸವದ ಅಂಗವಾಗಿ ಆಯೋಜಿಸಿದ್ದ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು,ದಸರಾ ನಮ್ಮ ಸಂಸ್ಕೃತಿಯ ಪ್ರತೀಕ ಎಂದರು.
ಇಂದಿಗೂ ನಾಡಿನ ಜನತೆ ತಾಯಿ ಜಾಮುಂಡೇಶ್ವರಿ ನಮ್ಮನ್ನು ರಕ್ಷಿಸುತಿದ್ದಾಳೆ ಎಂದು ನಂಬಿದ್ದಾರೆ.ಮಾರನವಮಿ, ಮಹಾನವಮಿ,ನವರಾತ್ರಿ ಹೀಗೆ ನಾನಾ ಹೆಸರುಗಳಿಂದ ಕರೆಯಲ್ಪಡುವ ಶಕ್ತಿ ದೇವತೆ ಚಾಮುಂಡಿಯ ಉತ್ಸವ ಇಡೀ ನಾಡಿನ ಜನರಿಗೆ ಒಂದು ಬಹುದೊಡ್ಡ ಹಬ್ಬವಾಗಿದೆ.ಚಾಮುಂಡೇಶ್ವರಿಯ ಬಗ್ಗೆ ಅನೇಕ ಪುಸ್ತಕಗಳು,ಹಾಡುಗಳು ಇವೆ.ಅವುಗಳನ್ನು ಓದುವುದರಿಂದ,ಕೇಳುವುದರಿಂದ ನಮ್ಮ ಸಂಸ್ಕೃತಿ ತಲೆಗೆ ಹೋಗುವುದಿಲ್ಲ.ಇಂತಹ ಕಾರ್ಯಕ್ರಮಗಳಲ್ಲಿ ಖುದ್ದಾಗಿ ಭಾಗವಹಿಸಿ,ನೋಡುವುದರಿಂದ ನಮ್ಮ ಸಂಸ್ಕೃತಿ,ಪರಂಪರೆಯ ಘನತೆ,ಗೌರವ ಅರ್ಥವಾಗುತ್ತದೆ ಎಂದು ಡಾ.ಜಿ.ಪರಮೇಶ್ವರ್ ನುಡಿದರು.
ದಸರಾ ಸಂದರ್ಭದಲ್ಲಿ ಪೊಲೀಸ್ ಬ್ಯಾಂಡ್ ಅತ್ಯಂತ ಅಕರ್ಷಣಿಯ.1876ರಲ್ಲಿ ಮಹಾರಾಜುರು ಸ್ಥಾಪಿಸಿದ ಈ ಬ್ಯಾಂಡ್‌ನ್ನು ಇಂದಿಗೂ ನಾಡಿನ ವಿದ್ವಾಂಸರು ಉಳಿಸಿಕೊಂಡು ಬಂದಿದ್ದಾರೆ.ಸಂಪ್ರದಾಯಕ ಸಂಗೀತ ಪರಿಕರಗಳನ್ನೇ ಬಳಸಿಕೊಂಡು ಕಟ್ಟಿರುವ ಬ್ಯಾಂಡ್ ಇದಾಗಿದೆ.ಪಾಶ್ಚತ್ಯ ಸಂಗೀತ ಬ್ಯಾಂಡ್‌ಗಳಿಗೆ ಸರಿಸಮನಾಗಿ ನಿಲ್ಲಬಲ್ಲ ಒಂದು ತಂಡವಾಗಿದೆ.ಇದುವರೆಗೂ ಮೈಸೂರಿನಿಂದ ಹೊರ ಹೋಗದ ಪೊಲೀಸ್ ಬ್ಯಾಂಡ್‌ನ್ನು ಮೊದಲ ಬಾರಿಗೆ ನವೆಂಬರ್ 1 ರ ಕನ್ನಡ ರಾಜೋತ್ಸವ ದಿನದಂದು ಬೆಂಗಳೂರಿನ ವಿಧಾನಸೌಧದ ಮುಂದೆ ಪ್ರದರ್ಶನಕ್ಕೆ ಅವಕಾಶ ಮಾಡಲಾಗಿದೆ. ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಒಟ್ಟಿಗೆ ಕುಳಿತು ಈ ತೀರ್ಮಾನ ತೆಗೆದುಕೊಂಡಿದ್ದೇವೆ.ಇಂತಹ ಕಲೆ,ಸಾಹಿತ್ಯ, ಸಂಗೀತ ಒಂದು ತಲೆಮಾರಿನಿಂದ ಮತ್ತೊಂದು ತಲೆ ಮಾರಿಗೆ ಹೋಗಬೇಕು.ಆಗ ಮಾತ್ರ ಇಂತಹ ಕಲೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗಲು ಸಾಧ್ಯ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.
ಭಾರತವೆಂದರೆ ಹಲವು ಸಂಸ್ಕೃತಿ,ಪರಂಪರೆ,ಆಚಾರ,ವಿಚಾರವನ್ನು ಹೊಂದಿರುವಂತಹ ನಾಡು.ಇಂತಹ ನಾಡಿನಲ್ಲಿ ನಡೆಯುವ ನಾಡ ಹಬ್ಬ ಕೇವಲ ಒಂದು ಸಮುದಾಯಕ್ಕೆ ಸಿಮೀತವಾಗಬಾರದು.ಎಲ್ಲಾ ಧರ್ಮಿಯರು, ಜಾತಿಯವರು ಪಾಲ್ಗೊಂಡು ಸಂತೋಷ ಪಡುವಂತಾಗಬೇಕು.ಆಗ ಮಾತ್ರ ಭಾರತವೆಂಬ ಹಲವು ಸಂಸ್ಕೃತಿಗಳ ಒಕ್ಕೂಟಕ್ಕೆ ಬೆಲೆ ಬರಲು ಸಾಧ್ಯ.ನಾವೆಲ್ಲರೂ ಭಾರತೀಯರು ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು.ಬಸವಣ್ಣನವರ ಆಣತಿಯಂತೆ ಎಲ್ಲರೂ ನಮ್ಮವರು ಎಂಬ ಭಾವನೆ ಬರಬೇಕು ಎಂಬುದು ಈ ಹಬ್ಬಗಳ ಆಚರಣೆಯ ಹಿಂದಿರುವ ಸತ್ಯ ಎಂದು ಡಾ.ಜಿ.ಪರಮೇಶ್ವರ್ ಮಾರ್ಮಿಕವಾಗಿ ನುಡಿದರು.
ವೇದಿಕೆಯಲ್ಲಿ ದಸರಾ ಉತ್ಸವ ಸಮಿತಿಯ ಅಧ್ಯಕ್ಷ ಬಿ.ಎಸ್.ಮಂಜುನಾಥ್,ಕಾರ್ಯಾಧ್ಯಕ್ಷ ಡಾ.ಪರಮೇಶ್,ರೆಡ್‌ಕ್ರಾಸ್ ಸಂಸ್ಥೆಯ ದೆಹಲಿ ಪ್ರತಿನಿಧಿ ಎಸ್.ನಾಗಣ್ಣ, ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ,ಉತ್ಸವ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್,ಗೌರವಾಧ್ಯಕ್ಷ ಎಸ್.ಪಿ.ಚಿದಾನಂದ್,ಕಾರ್ಯದರ್ಶಿ ಟೈಲರ್ ಮಹೇಶ್,ಖಜಾಂಚಿ ಜಿ.ಎಸ್.ಬಸವರಾಜು,ಸಂಯೋಜಕರಾದ ಗೋವಿಂದರಾವ್,ದಸರಾ ಉತ್ಸವ ಸಮಿತಿ ಮಾಜಿ ಅಧ್ಯಕ್ಷ ಆರ್.ಎಲ್.ರಮೇಶಬಾಬು, ಜಿ.ವಿ.ರಾಮಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.