ಚಿನ್ನದಂಗಡಿಗಳನ್ನೆ ಟಾರ್ಗೆಟ್ ಮಾಡಿಕೊಂಡ ಖದೀಮರು : ಕಳ್ಳತನ ಪ್ರಕರಣ ಮಾಸುವ ಮುನ್ನವೇ ಕೆ.ಜಿ.ಟೆಂಪಲ್ ನಲ್ಲೇ ಮತ್ತೊಂದು ಕಳ್ಳತನಕ್ಕೆ ಪ್ರಯತ್ನ ನಿಬ್ಬೆರಗಾದ ಜನತೆ.!!
ಗುಬ್ಬಿ: ತಾಲೂಕಿನ ಕಡಬ ಹೋಬಳಿಯ ಕೆ ಜಿ ಟೆಂಪಲ್ ಗ್ರಾಮದಲ್ಲಿ ಗ್ಯಾಸ್ ಕಟರ್ ಬಳಸಿ ಭವಾನಿ ಜ್ಯೂಯಲರಿ ಶಾಪ್ ಗೆ ಕನ್ನ ಹಾಕಿದ ಖದೀಮರು ಸುಮಾರು 6 ಕೆ.ಜಿ ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾದ ಘಟನೆ ಮಾಸುವ ಮುನ್ನವೇ ಅದೇ ಕೆಜಿ ಟೆಂಪಲ್ ಗ್ರಾಮದಲ್ಲಿ ತಡರಾತ್ರಿ ಮತ್ತೊಂದು ಲಕ್ಷ್ಮೀ ಜ್ಯೂಯಲರಿ ಶಾಪ್ ಗೆ ಕನ್ನ ಹಾಕಲು ಯತ್ನಿಸಿದ ಘಟನೆ ನಡೆದಿದೆ.
ತಾಲೂಕಿನಲ್ಲಿ ಕಳ್ಳರ ತಂಡ ಬೀಡು ಬಿಟ್ಟಿದ್ದಾರೆ ಎಂಬ ಅನುಮಾನ ಎಲ್ಲರನ್ನೂ ಇತ್ತೀಚೆಗೆ ಕಾಡುತ್ತಿದ್ದು ಒಂದೆಡೆಯಾದರೆ ಇದಕ್ಕೆ ಪೂರಕವೆಂಬಂತೆ ತಡರಾತ್ರಿ ಮತ್ತೆ ಸುಮಾರು 2 ಗಂಟೆ ಸಮಯದಲ್ಲಿ ಕೆಜಿ ಟೆಂಪಲ್ ಲಕ್ಷ್ಮಿ ಜ್ಯುವೆಲರಿ ಶಾಪ್ ಗೆ ಕನ್ನ ಹಾಕಲು ದುಷ್ಕರ್ಮಿಗಳು ಪ್ರಯತ್ನ ನಡೆಸಿ ಅಂಗಡಿಯ ಗೋಡೆ ಕೊರೆದು ವಿಫಲರಾಗಿ ಗ್ಯಾಸ್ ಕಟರ್ ಮೂಲಕ ಕಳ್ಳತನಕ್ಕೆ ಮುಂದಾಗಿ ವಿಫಲರಾಗಿರುವ ಘಟನೆ ಜನತೆಯನ್ನು ಮತ್ತಷ್ಟು ಭಯಭೀತರನ್ನಾಗಿ ಮಾಡಿದೆ.
ಭವಾನಿ ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಭೇದಿಸಲು ಮುಂದಾದ ಪೊಲೀಸರು ತಡರಾತ್ರಿ ಕೆಜಿ ಟೆಂಪಲ್ ಬಳಿಯಲ್ಲಿ ಗಸ್ತು ತಿರುಗುತ್ತಿದ್ದು ಕಳ್ಳರು ಗ್ಯಾಸ್ ಕಟರ್ ಬಳಸಿ ಕಳ್ಳತನಕ್ಕೆ ಪ್ರಯತ್ನ ಪಟ್ಟಾಗ ಅಂಗಡಿಯ ಬೀಗ ಹೊಡೆದು ಶಟರ್ ತೆಗೆಯುವ ವೇಳೆ ಶಟರ್ ಗೆ ಅಳವಡಿಸಿದ್ದ ಸೈರನ್ ಶಬ್ದ ಕಂಡು ಗಸ್ತಿನಲ್ಲಿದ್ದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು ಪೊಲೀಸ್ ಕಂಡ ಖದೀಮರು ಸ್ಥಳದಲ್ಲಿಯೇ ಕಳ್ಳತನಕ್ಕೆ ಬಳಸಿದ್ದ ಗ್ಯಾಸ್ ಕಟರ್ ಬ್ಯಾಗ್ ಸಿಲಿಂಡರ್ ಬಿಟ್ಟು ಓಡಿ ಹೋದ ಪ್ರಕರಣ ನಡೆದಿದೆ.
ಎಚ್ಚೆತ್ತ ಪೊಲೀಸರು ಕಾರ್ಯಾಚರಣೆಗೆ ಮುಂದಾಗಿದ್ದು ಗೋಪಾಲಪುರ ಬಳಿ ಅನುಮಾನಾಸ್ಪದ ಬೋಲೇರೋ ಗಾಡಿ ಬೆನ್ನತ್ತಿ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದು ಇಬ್ಬರು ತಪ್ಪಿಸಿಕೊಂಡು ಬೊಲೆರೋ ಜೀಪು ಬಿಟ್ಟು ಓಡಿ ಹೋಗಿದ್ದು ತಲೆ ಮೆರೆಸಿಕೊಂಡಿರುವ ಕಳ್ಳರ ಹುಡುಕಾಟಕ್ಕೆ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.