ಕೊರಟಗೆರೆ : ತಾಲೂಕಿನ ತುಂಬಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಟಿ.ಎಸ್.ವಿನಯ್‌ಬಾಬು ಹಾಗೂ ಉಪಾಧ್ಯಕ್ಷರಾಗಿ ಟಿ.ಹೆಚ್.ನಟರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕೊರಟಗೆರೆ ತಾಲೂಕು ತುಂಬಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 12 ಮಂದಿ ಸದಸ್ಯ ಬಲ ಹೊಂದಿರುವ ಸಂಘಕ್ಕೆ ಅಧ್ಯಕ್ಷ ಹಾಗೂ ಉಪಾದ್ಯಕ್ಷ ಸ್ಥಾನ ಕ್ಕೆ ನಡೆದ ಚುನಾವಣೆಯಲ್ಲಿ ಟಿ.ಎಸ್.ವಿನಯ್‌ಬಾಬು ಅಧ್ಯಕ್ಷ ಸ್ಥಾನಕ್ಕೆ ಹಾಗೂ ಟಿ.ಹೆಚ್.ನಟರಾಜು ಉಪಾಧ್ಯಕ್ಷ ಸ್ಥಾನಕ್ಕೆ ನಾಮ ಪತ್ರ ಸಲ್ಲಿಸಿದ್ದು ಇಬ್ಬರೂ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ಘೋಷಿಸಿದ್ದಾರೆ.
ಈ ಸಂದರ್ಬದಲ್ಲಿ ನಿರ್ದೇಶಕರುಗಳಾದ ನರಸಿಂಹಮೂರ್ತಿ, ಟಿ.ಹೆಚ್.ಮಹೇಂದ್ರಕುಮಾರ್, ಬಿ.ಎಂ.ಹನುಮಂತರಾಯಪ್ಪ, ಟ.ಎಂ.ತಿಮ್ಮರಾಜು, ಮುತ್ತಣ್ಣ, ವೆಂಕಟೇಶ್, ಟಿ.ಎನ್.ನಟರಾಜು, ಟಿ.ಎಸ್.ನಾಗಬೂಷಣ್, ಗಿರಿಜಾಂಬ, ಟಿ.ಆರ್.ಲತಾ ಸೇರಿದಂತೆ ಇನ್ನಿತರ ಮುಖಂಡರು ಹಾಜರಿದ್ದು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರುಗಳಿಗೆ ಅಭಿನಂದಿಸಿದರು.