ಕೊರಟಗೆರೆಜಿಲ್ಲೆತುಮಕೂರು

ಗ್ರಾಮೀಣ ವಿದ್ಯಾರ್ಥಿಗಳು ವಿದ್ಯೆ ಕಲಿತು ಅತ್ಯುನ್ನತ ಸ್ಥಾನಗಳನ್ನು ಅಲಂಕರಿಸುವ ಮೂಲಕ ಇತರರಿಗೂ ಸಹಾಯ ಮಾಡುವ ಸಾಮರ್ಥ್ಯ ಗುಣವನ್ನು ಬೆಳಿಸಿಕೊಳ್ಳಬೇಕು : ಡಾ.ಶಿವಾನಂದ ಶಿವಾಚಾರ್ಯಸ್ವಾಮೀಜಿ

ಕೊರಟಗೆರೆ : ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಶ್ರದ್ದೆ ಹಾಗೂ ಶ್ರಮವನ್ನು ಮೈಗೂಡಿಸಿಕೊಳ್ಳುವ ಮನೋಭಾವವನ್ನು ಬೆಳಸಿಕೊಂಡಾಗ ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಲು ಸಾಧ್ಯ ಎಂದು ತುಮಕೂರು ಹಿರೇಮಠದ ಪೀಠಾಧಿಪತಿ ಡಾ.ಶಿವಾನಂದ ಶಿವಾಚಾರ್ಯಸ್ವಾಮೀಜಿ ತಿಳಿಸಿದರು.
ಅವರು ಕೊರಟಗೆರೆ ಪಟ್ಟಣದಲ್ಲಿ ಉಚಿತ ಕಂಪ್ಯೋಟ್ ಮತ್ತು ಹೊಲಿಗೆ ಹಾಗೂ ಎಂಬ್ರಾಯಿಡರ್ ತರಬೇತಿ ಸಂಸ್ಥೆ ನೀಡುತ್ತಿರುವ ಬೀಮ್ ಗ್ರಾಮೀಣಾಭಿವೃಧ್ದಿ ಸಂಸ್ಥೆ ಏರ್ಪಡಿಸಿದ್ದ ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟçಪ್ರಶಸ್ಥಿ ವಿಜೇತರಾದ ಕೊರಟಗೆರೆ ತಾಲೂಕಿನ ಸೋಂಪುರ ಗ್ರಾಮದ ದಾರವಾಡ ಐಐಟಿ ಸಂಸ್ಥೆಯ ಪ್ರದ್ಯಾಪಕರಾದ ಡಾ.ಮಹದೇವ ಪ್ರಸನ್ನ ರವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ ಗ್ರಾಮೀಣ ವಿದ್ಯಾರ್ಥಿಗಳು ವಿದ್ಯೆ ಕಲಿತು ಅತ್ಯುನ್ನತ ಸ್ಥಾನಗಳನ್ನು ಅಲಂಕರಿಸುವ ಮೂಲಕ ಇತರರಿಗೂ ಸಹಾಯ ಮಾಡುವ ಸಾಮರ್ಥ್ಯ ಗುಣವನ್ನು ಬೆಳಿಸಿಕೊಳ್ಳಬೇಕು, ಇದಕ್ಕೆ ಸ್ಪಷ್ಠ ಮಾದರಿ ಕೊರಟಗೆರೆ ತಾಲೂಕಿನ ಸೋಂಪುರ ಗ್ರಾಮದಲ್ಲಿ ವಿದ್ಯಾಭ್ಯಾಸ ಮಾಡಿ ರಾಷ್ಟçಪ್ರಶಸ್ಥಿಪಡೆದ ಡಾ.ಮಹದೇವಪ್ರಸನ್ನ ರವರು ಎಂದ ಶ್ರೀಗಳು ಡಾ.ಮಹದೇವಪ್ರಸನ್ನ ಜಿಲ್ಲೆಗೆ ಕೀರ್ತಿಯ ಕಳಶವಾಗಿದ್ದಾರೆ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಸ್ಪೋರ್ತಿಯಾ ಗಿದ್ದಾರೆ ಎಂದು ತಿಳಿಸಿ ತಾಲೂಕಿನಲ್ಲಿ ಬೀಮ್ ಗ್ರಾಮೀಣಾಭಿವೃದ್ದಿ ಸಂಸ್ಥೆ ನೀಡುತಿರುವ ಉಚಿತ ಕಂಪ್ಯೋಟರ್ ಮತ್ತು ಹೊಲಿಗೆ ತರಬೇತಿಯನ್ನು ಮಹಿಳೆಯರು ಹೊಲಿಗೆ ತೆರಬೇತಿ ಸೇರಿದಂತೆ ಇನ್ನಿತರ ಕೌಶಲ್ಯಾಆಧಾರಿತ ತರಬೇತಿ ಪಡೆಯುವ ಮೂಲಕ ಸಮಾಜದಲ್ಲಿ ಸ್ವಾವಲಂಬಿಗಳಾಗಿ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿ ಬೀಮ್ ಸಂಸ್ಥೆಯ ಸಂಸ್ಥಾಪಕ ರವಿಕುಮಾರ್ ರವರ ಕಾರ್ಯವನ್ನು ಶ್ಲಾಘನೀಯ ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಷ್ಟçಪ್ರಶಸ್ತಿ ವಿಜೇತ ಹಾಗೂ ದಾರವಾಡ ಐಐಟಿ ಸಂಸ್ಥೆಯ ಪ್ರಾಧ್ಯಾಪಕ ಡಾ. ಮಹದೇವಪ್ರಸನ್ನ ವಿದ್ಯಾರ್ಥಿಗಳಿಗೆ ಮಾತೃ ಭಾಷೆಯಲ್ಲಿಯೇ ವಿದ್ಯಾಭ್ಯಾಸವಾದಾಗ ಮಾತ್ರ ಅವರಿಗೆ ವಿದ್ಯೆಯ ಸಂಪೂರ್ಣ ಜ್ಷಾನ ಅರಿವಾಗುತ್ತದೆ ಮಾತೃ ಭಾಷೆಯೊಂದಿಗೆ ಇನ್ನಿತರ ಹಿಂದಿ, ಇಂಗ್ಲೀಷ್ ಭಾಷೆ ಉನ್ನತ ಶಿಕ್ಷಣಕ್ಕೆ ಅಭ್ಯಾಸ ಮಾಡಬೇಕು ಎಂದ ಅವರು ಇಂದಿನ ಅಧುನಿಕ ತಂತ್ರಜ್ಞಾನ ಯುಗದಲ್ಲಿ ಕಂಪ್ಯೋಟರ್ ಜ್ಞಾನವು ಅತ್ಯವಶ್ಯಕ ಮತ್ತು ಅನಿವಾರ್ಯವಾಗಿದೆ, ಕಂಪ್ಯೋಟರ್ ಜ್ಷಾನವಿಲ್ಲದವರು ಅರೆ ಸಾಕ್ಷರರಿದ್ದಂತೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಅವರು ಗ್ರಾಮೀಣ ಪ್ರದೇಶದ ವಿದ್ಯಾವಂತ ನಿರುದ್ಯೋಗಿ ಯುವಜನರನ್ನು ಸಬಲೀಕರಣ ಗೊಳಿಸುವ ಹಿತದೃಷ್ಠಿಯಿಂದ ತಾಲೂಕಿನಲ್ಲಿ ಬೀಮ್ ಗ್ರಾಮೀಣಾಭಿವೃದ್ದಿ ಸಂಸ್ಥೆ ಪ್ರಾರಂಭಿಸುವ ಉಚಿತ ಕಂಪ್ಯೋಟರ್ ಮತ್ತು ಹೊಲಿಗೆ ತರಬೇತಿ ತರಗತಿ ಸೌಲಭ್ಯವನ್ನು ಯುವಜನತೆ ಸದುಪಯೋಗ ಪಡೆಯುವಂತೆ ಸೂಚಿಸಿದ ಅವರು ಬೀಮ್ ಸಂಸ್ಥೆ ನೀಡಿದ ಗೌರವಕ್ಕೆ ಮತ್ತು ಗ್ರಾಮೀಣ ಜನತೆಗೆ ಕೌಶಲ್ಯ ತರಬೇತಿ ನೀಡುತಿರುವ ಸಂಸ್ಥೆಯ ಸಂಸ್ಥಾಪಕ ರವಿಕುಮಾರ್ ರವರಿಗೆ ಅಭಿನಂದಿಸಿದರು.
ತಂಗನಹಳ್ಳಿ ಸುಕ್ಷೇತ್ರ ಶ್ರೀ ಕಾಶಿ ಅನ್ನಪೂರ್ಣೇಶ್ವರಿ ಸಂಸ್ಥಾನ ಮಠದ ಶ್ರೀ ಬಸವಲಿಂಗ ಮಹಾಸ್ವಾಮೀಜಿಗಳು ಮಾತನಾಡಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ನಂತರ ಸರ್ಕಾರಿ ಉದ್ಯೋಗಕ್ಕೆ ಸೇರಿದರೆ ನಿವೃತ್ತಿಯಾಗುವವರೆಗೂ ಉದ್ಯೋಗಿಯಾಗಿ ತಾವು ಒಬ್ಬರೆ ಜೀವನ ನಡೆಸಲು ಸಾದ್ಯ ಆದರೆ ಕೌಶಲ್ಯಾಧಾರಿತ ತಂತ್ರಜ್ಞನ ವಿದ್ಯೆಕಲಿತು ಸ್ವಯಂ ಉದ್ಯೋಗ ಪ್ರಾರಂಭಿಸಿ ನೂರಾರು ಮಂದಿಗೆ ಉದ್ಯೋಗ ನೀಡುವಂತ ವ್ಯಕ್ತಿಯಾಗಬೇಕು ಎಂದ ಅವರು ದೇಶದಲ್ಲಿ ಐಎಎಸ್ ಮತ್ತು ಐಪಿಎಸ್ ಸೇರಿದಂತೆ ಉನ್ನತ ಉದ್ದೆಯಲ್ಲಿರುವವರು ಶೇ 80 ರಷ್ಟು ಗ್ರಾಮೀಣ ಭಾಗದವರೆ ಎಂದು ತಿಳಿಸಿದ ಅವರು ವಿದ್ಯಾರ್ಥಿಗಳು ಕೇವಲ ಉದ್ಯೋಗಕ್ಕಾಗಿ ವಿದ್ಯಾಭಾಸ ಮಾಡದೆ ಸಮಾಜದ ಅಭಿವೃದ್ದಿಗಾಗಿ ಮಹತ್ವಪಾತ್ರ ವಹಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕಿನ ಅಕ್ಕಿರಾಂಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾದ್ಯಾಯರಾಗಿ ಶಾಲೆಯ ಅಭಿವೃದ್ದಿಗೆ ಉತ್ತಮ ಸೇವೆಸಲ್ಲಿಸಿ ನಿವೃತ್ತರಾದ ಸಿದ್ದಲಿಂಗ ಆರಾದ್ಯ ಮತ್ತು ಹಿರಿಯ ನಿವೃತ್ತ ಶಿಕ್ಷಕರಾದ ಕೆ.ಜಿ.ಓಂಕಾರಮೂರ್ತಿ ರವರನ್ನು ಇದೇ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಿದರು. ವೇದಿಕೆಯಲ್ಲಿ ಬೀಮ್ ಸಂಸ್ಥೆಯ ಸಂಸ್ಥಾಪಕ ರವಿಕುಮಾರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಈರಣ್ಣ, ನಿವೃತ್ತ ಶಿಕ್ಷಕ ಕೆ.ಎಲ್.ನಾರಾಯಣ್, ಚಂದ್ರಯಶ್ರೇಷ್ಠಿ, ಶಿಕ್ಷಕರುಗಳಾದ ಫಾತಿಮಾಸುಲ್ತಾನ್, ಶಿವಸ್ವಾಮಿ, ಶ್ರೀರಾಮಯ್ಯ, ಅಪ್ಪಾಜಿಗೌಡ, ಶ್ರೀದೇವಿ, ನಾಗಮಣಿ, ಫರ್‌ಉನ್ನಿಸಾ, ಚೈತ್ರ ಸೇರಿದಂತೆ ತರಬೇತಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker