ಕೊರಟಗೆರೆ : ಸರ್ಕಾರದ ಗೃಹ ಸಚಿವರು ಮತ್ತು ಕ್ಷೇತ್ರದ ಶಾಸಕರಾದ ಡಾ.ಜಿ.ಪರಮೇಶ್ವರ ರವರ ಅದೇಶದ ಮೇಲೆ ಸಾರ್ವಜನಿಕ ಕುಂದು ಕೊರತೆಗೆ ಸ್ಪಂದಿಸಿ ಪರಿಹಾರ ಕೊಡಿಸಲಾಗುವುದು ಎಂದು ಸಚಿವರ ವಿಶೇಷ ಕರ್ತವ್ಯ ಅಧಿಕಾರಿ ಡಾ.ನಾಗಣ್ಣ ತಿಳಿಸಿದರು.
ಅವರು ಕೊರಟಗೆರೆ ಪಟ್ಟಣದ ಶಾಸಕರ ಕಛೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ನಂತರ ಸಾರ್ವಜನಿಕರಿಂದ ಅಹವಾಲು ಸ್ವೀಕರಸಿ ಮಾತನಾಡಿ ಡಾ.ಜಿ.ಪರಮೇಶ್ವರರವರ ಅದೇಶದ ಮೇರೆಗೆ ಕೊರಟಗೆರೆ ಪಟ್ಟಣದ ಶಾಸಕರ ಕಛೇರಿಯಲ್ಲಿ ಪ್ರತಿ ಸೋಮವಾರ ಬೆಳ್ಳಗೆ 10-30 ರಿಂದ ಸಂಜೆ 5-00 ಗಂಟೆವರಗೆ ಕ್ಷೇತ್ರದ ಜನರ ಮತ್ತು ಸಾರ್ವಜನಿಕರ ಅಹವಾಲು ಕುಂದು ಕೊರತೆ ಗಳ ಅರ್ಜಿ ಸ್ವೀಕರಸಿ ಶೀಘ್ರ ಪರಿಹಾರ ನೀಡುವ ಕೆಲಸ ಮಾಡಲಾಗುವುದು.ಆದರೆ ಜನರ ಯಾವುದೇ ತರಹದ ವರ್ಗಾವಣೆ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ ಅವುಗಳನ್ನು ಹೊರತು ಪಡಸಿ ಇನ್ನು ಎಲ್ಲಾ ಇಲಾಖಾ ಮತ್ತು ಸ್ವಂತ ಕುಂದು ಕೊರತೆಗಳ ಅರ್ಜಿಗಳನ್ನು ಸ್ವೀಕರಸಿಲಾಗುವುದು. ಸೋಮವಾರ ಕೊರಟಗೆರೆಯಲ್ಲಿ ಇದ್ದು ಉಳಿದ ದಿನ ತುಮಕೂರು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿನ ಗೃಹ ಸಚಿವರ ಕಛೇರಿಯಲ್ಲಿ ಅರ್ಜಿಗಳನ್ನು ಸ್ವೀಕರಸಲಾಗುವುದು ಎಂದರು. ಕೊರಟಗೆರೆ ತಾಲ್ಲೂಕಿನ ಬಹುತೇಕ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇಲ್ಲ ಎನ್ನುವ ಆರೋಪಗಳು ಕೇಳಿ ಬರುತ್ತಿದ್ದು ಅದರ ಬಗ್ಗೆ ಕ್ರಮ ಕೈಗೋಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಮುನಿಶಾಮಿರೆಡ್ಡಿ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಅರಕೆರೆ ಶಂಕರ್, ಮಹಿಳಾ ಅದ್ಯಕ್ಷೆ ಜಯಮ್ಮ, ಯುವ ಅದ್ಯಕ್ಷ ವಿನಯ್‌ಕುಮಾರ್, ಶಾಸಕರ ಕಾರ್ಯದರ್ಶಿ ಅರವಿಂದ್ ಸೇರಿದಂತೆ ಇತರರು ಹಾಜರಿದ್ದರು.