ಕುಣಿಗಲ್ : ಜಮೀನಿನಲ್ಲಿ ಹೆಮ್ಮೆ ಕಟ್ಟಿದ ವಿಷಯಕ್ಕೆ ಚಿಕ್ಕಲಿಂಗಯ್ಯನ ಮೇಲೆ ಸಂಬಂಧಿಕರಿಂದ ತೀವ್ರ ಹಲ್ಲೆ ನೆಡೆಸಿ ಕೊಲೆಗೆ ಯತ್ನ
ಕುಣಿಗಲ್ : ಸಂಬಂಧಿಗಳು ತಲೆಗೆ ಕಲ್ಲಿನಿಂದ ಹೊಡೆದ ಕಾರಣ ಚಿಕ್ಕಲಿಂಗಯ್ಯ( 75) ಎಂಬ ವ್ಯಕ್ತಿಗೆ ತೀವ್ರ ರಕ್ತಸ್ರಾವ ಉಂಟಾಗಿ ಆಸ್ಪತ್ರೆಗೆ ದಾಖಲಿಸಿರುವ ಘಟನೆ ಶನಿವಾರ ಸಂಜೆ ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಾಲೂಕಿನ ಹುತ್ರಿದುರ್ಗ ಹೋಬಳಿ ಸೋಮೆದೇವರ ಪಾಳ್ಯ ಗ್ರಾಮದ 75 ವರ್ಷ ವಯೋಮಾನದ ಚಿಕ್ಕಲಿಂಗಯ್ಯ ಎಂಬ ಗಾಯಾಳು ಶನಿವಾರ ಸಂಜೆ ನಮ್ಮ ಜಮೀನಿನಲ್ಲಿ ಎಮ್ಮೆ ಕಟ್ಟಿದ್ದೀರಾ ಎಂದು ಕಟ್ಟಿದ್ದಂತಹ ಎಮ್ಮೆಯನ್ನು ಕಳಚಿ ಬಿಟ್ಟಂತಹ ಒಂದು ಚಿಕ್ಕ ಕಾರಣಕ್ಕೆ ಗಾಯಾಳು ಚಿಕ್ಕಲಿಂಗಯ್ಯ (75) ಎಂಬುವರ ಸಂಬಂಧಿ ಎನ್ನಲಾದ ಚಿಕ್ಕಲಿಂಗೇಗೌಡ, ಪ್ರೇಮ, ಗಂಗಣ್ಣ, ಹುಚ್ಚಮ್ಮ, ಎಂಬುವರು ಸೇರಿಕೊಂಡು ನಮ್ಮ ತಂದೆಯನ್ನು ಕೊಲೆ ಮಾಡುವ ಉದ್ದೇಶದಿಂದ ತಂದೆಯವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ತಲೆಗೆ ಕಲ್ಲಿನಿಂದ ಹಾಗೂ ಎಮ್ಮೆ ಕಟ್ಟುವ ಮೊಳೆ ಯಿಂದ ಹೊಡೆದ ಹಿನ್ನೆಲೆಯಲ್ಲಿ ತೀವ್ರ ರಕ್ತಸ್ರಾವ ಉಂಟಾಗಿದೆ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗಾಯಾಳು ಚಿಕ್ಕಲಿಂಗಯ್ಯನವರ ಮಗಳು ಶಿವಮ್ಮ (ಹಾಲಿ ಬೆಂಗಳೂರು ನಿವಾಸಿ ) ಎಂಬುವರು ಕುಣಿಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ, ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಚಿಕ್ಕಲಿಂಗಯ್ಯನವರನ್ನು ಕುಣಿಗಲ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಹೌಸಿಂಗ್ ಬೋರ್ಡ್ ನಲ್ಲಿ ಇರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಸದ್ಯದಲ್ಲಿ ತಲೆಗೆ ಹೊಡೆದರು ಎನ್ನಲಾದ ಆರೋಪಿಗಳೆಲ್ಲರೂ ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ವರದಿ : ರೇಣುಕಾ ಪ್ರಸಾದ್