ಶಿರಾ : ವಿದ್ಯಾರ್ಥಿಗಳು ವಿದ್ಯೆಯ ಜೊತೆ ಸಂಸ್ಕಾರವನ್ನು ಸಹ ಕಲಿಯಬೇಕು. ಎಷ್ಟೇ ದೊಡ್ಡ ಸ್ಥಾನ ಗಳಿಸಿದರೂ ತಾನು ಓದಿದ ಶಾಲೆ, ಊರು, ಗುರು ಹಿರಿಯರನ್ನು ಮರೆಯಬಾರದು. ನಾನು ಕೂಡ ಈ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದು, ಈ ಶಾಲೆ ನೀಡಿದ ಸಂಸ್ಕಾರ ಮತ್ತು ವಿದ್ಯೆಯನ್ನು ಎಂದಿಗೂ ಮರೆಯುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಹೇಳಿದರು.
ಅವರು ತಾಲೂಕಿನ ಬರಗೂರು ಗ್ರಾಮದ ಆಂಜನೇಯ ಸ್ವಾಮಿ ಗ್ರಾಮಾಂತರ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ತಮ್ಮ ಸ್ವಂತ ವೆಚ್ಚದಲ್ಲಿ ಉಚಿತ ಸ್ಕೂಲ್ ಬ್ಯಾಗ್ ಹಾಗೂ ನೋಟ್ ಬುಕ್ ವಿತರಿಸಿ ಮಾತನಾಡಿದರು. ಬರಗೂರು ಆಂಜನೇಯ ಸ್ವಾಮಿ ಪ್ರೌಢಶಾಲೆಯಲ್ಲಿ ಉತ್ತಮ ಶಿಕ್ಷಣದ ಜೊತೆ ಸಂಸ್ಕಾರವನ್ನು ಸಹ ಶಾಲೆಯ ಶಿಕ್ಷಕರು ಕಲಿಸುತ್ತಿದ್ದು, ಇಂತಹ ಶಾಲೆ ಓದಿದ್ದರಿಂದ ನಾನು ವಿಧಾನಸೌಧಕ್ಕೆ ಹೋಗಲು ಅನುಕೂಲವಾಯಿತು. ನನ್ನ ವ್ಯಕ್ತಿತ್ವವನ್ನು ರೂಪಿಸಿದ ಈ ಶಾಲೆಗೆ ನಾನು ಆಭಾರಿಯಾಗಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆ ಉಪಾಧ್ಯಕ್ಷ ಲಕ್ಷö್ಮಣಗೌಡ, ಖಜಾಂಚಿ ದೇವರಾಜ್, ಮರಿಯಪ್ಪ, ಮುಖ್ಯ ಶಿಕ್ಷಕ ಚಂದ್ರಶೇಖರ್, ಪ್ರಾಂಶುಪಾಲರಾದ ಜಯಲಕ್ಷ್ಮಿ ಉಪನ್ಯಾಸಕ ಓಂಕಾರ್, ಗುರುಸಿದ್ದಪ್ಪ, ಉಮಾ, ಶ್ರೀನಿವಾಸ್, ಮುಖ್ಯ ಶಿಕ್ಷಕಿ ಜಯಲಕ್ಷ÷್ಮಮ್ಮ, ನಿವೃತ್ತ ಶಿಕ್ಷಕ ಹೆಚ್.ಜಿ ರಾಮಕೃಷ್ಣಪ್ಪ, ನಿವೃತ್ತಿ ದೈಹಿಕ ಶಿಕ್ಷಣಾಧಿಕಾರಿ ಕುಮಾರ್, ಮುಖಂಡರಾದ ಹೊಸಹಳ್ಳಿ ಸಿದ್ದಲಿಂಗಪ್ಪ, ಯುವರಾಜ್, ಮಾಜಿ ಗಾ.ಪಂ. ಅಧ್ಯಕ್ಷ ಈರಣ್ಣ ಪಟೇಲ್, ಸದಸ್ಯ ಎಂ ಶಿವಣ್ಣ, ಚಿಕ್ಕನಕೋಟೆ ಕರಿಯಣ್ಣ, ವಾಜರಹಳ್ಳಿ ವೆಂಕಟೇಶ್ ಸೇರಿದಂತೆ ಹಲವರು ಹಾಜರಿದ್ದರು.