ಕುಣಿಗಲ್ : 11 ಕೆ ವಿ ಸಾಮರ್ಥ್ಯದ ವಿದ್ಯುತ್ ತಂತಿ ತುಂಡಾಗಿ ಸೆಕೆಂಡರಿ ವಿದ್ಯುತ್ ಲೈನ್ ಮೇಲೆ ಬಿದ್ದ ಕಾರಣ ಲೈನ್ ಟ್ರಿಪ್ ಆಗದೆ ಸುಮಾರು 80 ಮನೆಗಳ ಟಿವಿ, ಫ್ರಿಡ್ಜ್, ವಾಷಿಂಗ್ ಮಿಷನ್, ಮನೆಯ ವಿದ್ಯುತ್ ಲೈನ್ ಹಾಗೂ ಗ್ರಾಮದ ಬೀದಿ ದೀಪಗಳು ಇನ್ನಿತರೆ ವಸ್ತುಗಳು ಸುಟ್ಟು ಕರಕಲಾಗಿ ಎಮ್ಮ ಒಂದು ಪ್ರಾಣ ಕಳೆದುಕೊಂಡು ಓರ್ವ ಮಹಿಳೆಗೆ ಕೈಗೆ ವಿದ್ಯುತ್ತಗಲಿ ಕೈ ಪೆಟ್ಟಾಗಿರುವ ಘಟನೆ ಜರುಗಿದೆ.
ತಾಲೂಕಿನ ಹುಲಿಯೂರುದುರ್ಗ ಹೋಬಳಿ ಉಜ್ಜಿನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲೆಕಡಕಲು ಗ್ರಾಮದಲ್ಲಿ ಬೆಸ್ಕಾಂ ಇಲಾಖೆಯವರು ಹೇಳುವ ಪ್ರಕಾರ 11 ಕೆ ವಿ ವಿದ್ಯುತ್ ಲೈನ್ ಕಟ್ಟಾಗಿದೆ ಸೆಕೆಂಡರಿ ವಿದ್ಯುತ್ ಲೈನ್ ಮೇಲೆ ತಂತಿ ಬಿದ್ದ ಕಾರಣ ವಿದ್ಯುತ್ ಪರಿವರ್ತಕ ಟ್ರಿಪ್ ಆಗಿಲ್ಲದ ಕಾರಣ ಘಟನೆ ಜರುಗಿದೆ ಎಂದು ತಿಳಿಸುತ್ತಾರೆ. ಆದರೆ ಗ್ರಾಮದ ಸಾರ್ವಜನಿಕರು ಹೇಳುವ ಪ್ರಕಾರ 11 ಕೆ ವಿ ವಿದ್ಯುತ್ ತಂತಿ ತುಂಬಾ ಹಳೆಯದಾಗಿತ್ತು ಇದನ್ನು ಬದಲಾವಣೆ ಮಾಡಿ ಎಂದು ಹುಲಿಯೂರುದುರ್ಗ ಬೆಸ್ಕಾಂ ವಿಭಾಗದ ಇಂಜಿನಿಯರ್ ಹಾಗೂ ಎಸ್ ಓ ರವರಿಗೆ ಸುಮಾರು ಬಾರಿ ತಿಳಿಸಿದ್ದೆವು ಮತ್ತು ಸಂಬಂಧಪಟ್ಟ ಲೈನ್ ಮೆನ್ಗೂ ವಿಚಾರ ಗೊತ್ತಿತ್ತು ಹುಲಿಯೂರುದುರ್ಗ ಬೆಸ್ಕಾಂ aee ಹಾಗೂ so, ಸಂಬಂಧಪಟ್ಟ ಲೈನ್ ಮ್ಯಾನ್ ರವರ ಕರ್ತವ್ಯ ನಿರ್ಲಕ್ಷದಿಂದ ಎಲೆಕಡಕಲು ಗ್ರಾಮದಲ್ಲಿ ನಡೆಯಬಾರದ ಘಟನೆ ನಡೆದಿದೆ.
ಭಾನುವಾರ ಬೆಳಿಗ್ಗೆ ಸುಮಾರು 8 ಗಂಟೆ 30 ನಿಮಿಷದ ವೇಳೆಯಲ್ಲಿ ಏಕಾಯಕಿ 11 ಕೆ ವಿ ವಿದ್ಯುತ್ ತಂತಿ ತುಂಡಾಗಿ ಸೆಕೆಂಡ್ರಿ ಲೈನ್ ಮೇಲೆ ಬಿದ್ದಾಗ ಹೆಚ್ಚಾದ ವಿದ್ಯುತ್ ಹರಿದ ಕಾರಣ ಸುಮಾರು 80 ಮನೆಗಳಲ್ಲಿ ಮನೆಗಳ ಮೀಟರ್, ವೈರಿಂಗ್ ಸುಟ್ಟು ಕರಕಲಾಗಿದೆ, ಇದಲ್ಲದೆ ಮನೆ ಒಳಭಾಗದಲ್ಲಿ ಬಳಸುತ್ತಿದ್ದ ಫ್ರಿಡ್ಜ್, ವಾಷಿಂಗ್ ಮಿಷನ್, ಮಿಕ್ಸಿ ಇನ್ನಿತರ ವಿದ್ಯುತ್ ಸಂಬಂಧಿತ ವಸ್ತುಗಳೆಲ್ಲ ಸುಟ್ಟು ಕರಕಲಾಗಿವೆ, ಗ್ರಾಮದ ಸುಮಾರು ಮೂರು ಲಕ್ಷ ಬೆಲೆಬಾಳುವ ಬೀದಿ ದೀಪಗಳು ಸುಟ್ಟು ಕರಕಲಾಗಿವೆ. ಈ ವಿದ್ಯುತ್ ಅವಘಡದಿಂದ ಗಾಬರಿಗೊಂಡ ಗ್ರಾಮಸ್ಥರು ಮನೆಗಳಿಂದ ಹೊರ ಓಡಿದ್ದಾರೆ. ಅದೃಷ್ಟವಶಾತ್ ಯಾವುದೇ ಜನರ ಜೀವ ಹಾನಿ ಆಗಿಲ್ಲ ಹಾಗಿದ್ದರೆ ಊರಿಗೆ ಊರೇ ಸ್ಮಶಾನವಾಗುತ್ತಿತ್ತು ದೇವರ ದಯೆಯಿಂದ ಒಂದು ಎಮ್ಮೆ ಸತ್ತಿದೆ ಒಬ್ಬ ಮಹಿಳೆಗೆ ಕೈ ವಿದ್ಯುತ್ನಿಂದ ಪೆಟ್ಟಾಗಿದೆ ಇದಕ್ಕೆಲ್ಲ ಕಾರಣ ಹುಲಿಯೂರುದುರ್ಗ ಬೆಸ್ಕಾಂ ಇಲಾಖೆ ಅಧಿಕಾರಿಗಳ ನಿರ್ಲಕ್ಷತೆ ಎಂದು ತಿಳಿಸಿದ ಅವರು ಘಟನೆ ನಡೆದ ತಕ್ಷಣವೇ ಹುಲಿಯೂರುದುರ್ಗ ಬೆಸ್ಕಾಂ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದರು ಮಧ್ಯಾಹ್ನ 1 ಗಂಟೆಗೆ ಸ್ಥಳಕ್ಕೆ ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಈ ಘಟನೆ ನಡೆಯುವುದಕ್ಕೆ ಕಾರಣಕರ್ತರಾದ ಬೆಸ್ಕಾಂ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಿ ಬೆಲೆಬಾಳುವ ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳೆದುಕೊಂಡಿರುವ ಜನರಿಗೆ ಬೆಸ್ಕಾಂ ಇಲಾಖೆ ಪರಿಹಾರ ನೀಡಬೇಕು ಇಲ್ಲದಿದ್ದರೆ ಊರಿಗೆ ಊರೇ ಹೋಗಿ ಹುಲಿಯೂರುದುರ್ಗ ಬೆಸ್ಕಾಂ ಕಚೇರಿಯ ಮುಂದೆ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಕುಣಿಗಲ್ ವಿಭಾಗದ ಬೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ಅವರನ್ನು ಘಟನೆಯ ವಿವರ ಕೇಳಿದಾಗ ಈ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಮಾನವ ಜೀವ ಹಾನಿ ನಡೆದಿಲ್ಲ, ಒಂದು ಎಮ್ಮೆ ಸತ್ತಿದೆ ಒಬ್ಬ ಮಹಿಳೆಗೆ ಸಣ್ಣಪುಟ್ಟ ಗಾಯವಾಗಿದೆ ಸತ್ತಿರೋ ಎಮ್ಮೆ ಮಾಲೀಕರಿಗೆ ಇಲಾಖೆ ಪರಿಹಾರವನ್ನು ನೀಡುತ್ತದೆ ಮತ್ತು ವಿದ್ಯುತ್ ಪರಿವರ್ತಕಕ್ಕೆ ಸಂಬಂಧಪಟ್ಟ ಮನೆಗಳಲ್ಲಿ ವಿದ್ಯುತ್ ಅವಘಡದಿಂದ ಸುಟ್ಟಿರುವ ವಸ್ತುಗಳ ಪಟ್ಟಿ ಮಾಡಲಾಗುತ್ತಿದೆ ಅವುಗಳಿಗೂ ಸರ್ಕಾರದಿಂದ ಪರಿಹಾರ ಕೊಡಿಸುವ ಕೆಲಸ ನಡೆಯುತ್ತದೆ ಎಂದು ಭರವಸೆ ನೀಡಿದ ಅವರು ಮೇಲ್ನೋಟಕ್ಕೆ ಈ ಘಟನೆ ಆಕಸ್ಮಿಕವಾಗಿ ನಡೆದಿದೆ 11 ಕೆ ವಿ ಲೈನ್ ರಾಬಿಟ್ ತಂತಿ ಆಗಿರುವುದರಿಂದ ತುಂಡಾಗಲು ಸಾಧ್ಯವೇ ಇಲ್ಲ ಆದರೂ ನಡೆದಿದೆ ಎಂದರೆ ಆಶ್ಚರ್ಯವೇ? ಲೆವೆನ್ ಕೆ ವಿ ಲೈನ್ ಸೆಕೆಂಡರಿ ಲೈನ್ ಮೇಲೆ ಬಿದ್ದಾಗ ಲೈನ್ ಟ್ರಿಪ್ ಆಗಿದ್ದರೆ ಇಷ್ಟೊಂದು ಅವಘಡ ನಡೆಯುತ್ತಿರಲಿಲ್ಲ ಇದರ ಬಗ್ಗೆ ಪ್ರಾಮಾಣಿಕ ತನಿಖೆಯನ್ನು ಮಾಡುತ್ತೇವೆ ಕರ್ತವ್ಯದಲ್ಲಿ ಅಧಿಕಾರಿಗಳ ನಿರ್ಲಕ್ಷತೆ ಕಂಡು ಬಂದರೆ ಅಂಥವರ ವಿರುದ್ಧ ಮುಲಾಜಿಲ್ಲದೆ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಘಟನೆ ನಡೆದ ಗ್ರಾಮಕ್ಕೆ ಉಜ್ಜಿನಿ ಗ್ರಾಮ ಪಂಚಾಯತಿ ಅಧ್ಯಕ್ಷರು ಒಳಗೊಂಡಂತೆ ಸದಸ್ಯರುಗಳು ಪೊಲೀಸ್ ಇಲಾಖೆ ಅಧಿಕಾರಿಗಳು ಬೆಸ್ಕಾಂ ಇಲಾಖೆ ಅಧಿಕಾರಿಗಳು ತೆರಳಿ ಪರಿಶೀಲಿಸಿದ್ದಾರೆ. ಒಟ್ಟಾರೆ ಈ ವಿದ್ಯುತ್ ಘಟನೆ ಆಶ್ಚರ್ಯಕರ ರೀತಿಯಲ್ಲಿ ಆಗಿದೆ ಅದೃಷ್ಟವಶಾತ್ ಯಾವುದೇ ಮಾನವ ಜೀವ ಹಾನಿ ಆಗಿಲ್ಲ. ಒಂದು ವೇಳೆ ಆಗಿದಿದ್ದರೆ ಗ್ರಾಮಕ್ಕೆ ಗ್ರಾಮವೇ ಸ್ಮಶಾನ ಆಗುತ್ತಿತ್ತೇನೋ…?
ವರದಿ:- ರೇಣುಕಾ ಪ್ರಸಾದ್ ಕುಣಿಗಲ್