ಕೊರಟಗೆರೆಜಿಲ್ಲೆತುಮಕೂರುರಾಜಕೀಯರಾಜ್ಯ

ಕೊರಟಗೆರೆಯಲ್ಲಿ ಬಿರುಸುಗೊಂಡ ಡಾ.ಜಿ.ಪರಮೇಶ್ವರ ಚುನಾವಣಾ ಪ್ರಚಾರ : ಯುವಕರ ಬೈಕ್ ರ‍್ಯಾಲಿ

ಕೊರಟಗೆರೆ : ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಕೊರಟಗೆರೆ ಕ್ಷೇತ್ರದ 6 ಹೋಬಳಿಗಳಲ್ಲಿ ಸ್ಥಳೀಯ ಮುಖಂಡರುಗಳ ಜೊತೆ ರಾಜ್ಯ ನಾಯಕರುಗಳ ಮತಬೇಟೆ ಬಿರುಸಾಗಿದ್ದು, ಡಾ.ಪರಮೇಶ್ವರ ಅವರಿಗೆ ಬಲಬಂತಾಗಿದ್ದು, ಕ್ಷೇತ್ರದಲ್ಲಿ ವ್ಯಾಪಕ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ.
ವಿವಿಧೆಡೆ ಸಾರ್ವಜನಿಕ ರ‍್ಯಾಲಿ, ರೋಡ್ ಶೋ ನಡೆಸಿ, ಕಾಂಗ್ರೆಸ್ ಅಭ್ಯರ್ಥಿ ಪರಮೇಶ್ವರ ಪರ ಅಬ್ಬರದ ಪ್ರಚಾರ ನಡೆಸಿದ್ದು ಗಮನ ಸೆಳೆಯಿತು.
ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ರವರು ಇಂದು ಶನಿವಾರದಂದು ಅಕ್ಕಿರಾಂಪುರ,ಬಿ.ಡಿ.ಪುರ, ದೊಡ್ಡಸಾಗ್ಗರೆ, ಹೊಳವನಹಳ್ಳಿ ಮತ್ತು ಹುಲಿಕುಂಟೆ ಗ್ರಾಮ ಪಂಚಾಯ್ತಿ ಕೇಂದ್ರಗಳಲ್ಲಿ ಬಿರುಸಿನ ಚುನಾವಣಾ ಪ್ರಚಾರಕ್ಕಿಳಿದರು.
ಇಂದು ಬೆಳಿಗ್ಗೆ ತುಮಕೂರು ಗ್ರಾಮಾಂತರ ಕ್ಷೇತ್ರದ ಹೆಗ್ಗೆರೆಯಲ್ಲಿ ಆಂಜನೇಯ ಸ್ವಾಮಿಗೆ ಪೋಜೆ ಸಲ್ಲಿಸುವ ಮೂಲಕ ಪ್ರಚಾರಕ್ಕೆ ಆರಂಭಿಸಿದರು. ಕಾಂಗ್ರೆಸ್ ಅಭ್ಯರ್ಥಿ ಷಣ್ಮಗಪ್ಪ ಅವರು ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ನಂತರ ತಮ್ಮ ಕ್ಷೇತ್ರದ ಅಕ್ಕಿರಾಂಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗೌರಗೇನಹಳ್ಳಿಯಲ್ಲಿ ಗ್ರಾಮದಲ್ಲಿ ಡಾ. ಜಿ. ಪರಮೇಶ್ವರ ಬರುತ್ತಿದ್ದಂತೆ ಗ್ರಾಮಸ್ಥರು ಜೈಕಾರ ಹಾಕಿದರೆ, ಮಹಿಳೆಯರು ಆರತಿ ಬೆಳಗಿ,ಆತ್ಮೀಯವಾಗಿ ಸ್ವಾಗತಿಸಿದರು.
ಈ ವೇಳೆ ಮಾತನಾಡಿದ ಡಾ.ಪರಮೇಶ್ವರ ಅವರು ಬಡವರ್ಗದವರಿಗೆ ಅಗತ್ಯವಾದ 10 ಕೆ.ಜಿ. ಪಡಿತರ ಅಹಾರಧಾನ್ಯ ವಿತರಣೆ, ಏರಿಕೆಯಾಗುತ್ತಿರುವ ಗ್ಯಾಸ್ ಬೆಲೆ ಇಳಿಕೆ, ರಾಜ್ಯ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೇರಿದಂತೆ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ತಮ್ಮ ಪಕ್ಷ ಹಾಗೂ ತಮನ್ನು ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.

ಇತಿಹಾಸ ಬರೆದ ಕೊರಟಗೆರೆ:
ಕೊರಟಗೆರೆ ಕ್ಷೇತ್ರದ ಜನಾಶೀರ್ವಾದದಿಂದ 2008ರಲ್ಲಿ ಶಾಸಕನಾಗಿ ಆಯ್ಕೆಯಾಗಿದ್ದಲ್ಲದೇ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ಸತತ 8 ವರ್ಷಗಳ ಕಾಲ ಸುಧೀರ್ಘ ಅವಧಿಗೆ ಅಧ್ಯಕ್ಷನಾಗಿ, ನನ್ನ ನೇತೃತ್ವದಲ್ಲಿ ಪಕ್ಷವು 2013ರಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವಂತಾಯಿತು.2018ರಲ್ಲಿ ನಾನು ಪುನರಾಯ್ಕೆಯಾಗುವ ಮೂಲಕ ರಾಜ್ಯದ ಉಪ ಮುಖ್ಯಮಂತ್ರಿಯಾಗಿ ತಮ್ಮಗಳ ಸೇವೆಯನ್ನು ಸಲ್ಲಿಸುವ ಸುವರ್ಣಾವಕಾಶವು ಕೂಡ ಒದಗಿ ಬಂದಿತು. ಇದೆಲ್ಲದರ ಹಿಂದಿರುವ ಶಕ್ತಿ ಕೊರಟಗೆರೆಯ ಮಹಾಜನತೆ ಎಂಬುದು ಇತಿಹಾಸದ ಪುಟಗಳನ್ನು ಸೇರಿಕೊಂಡಿದೆ ಎಂದು ಅವರು ಹೇಳಿದರು.
ಬೆಲೆ ಏರಿಕೆಗೆ ಕಾಂಗ್ರೆಸ್ ನಿಂದ ಪರಿಹಾರ:
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದುರಾಡಳಿತದಿಂದ ಜನಸಾಮಾನ್ಯರ ಬದುಕು ದುಸ್ತರವಾಗಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷವು ಇದನ್ನು ಸವಾಲಾಗಿ ಸ್ವೀಕರಿಸುವ ಮೂಲಕ ರಾಜ್ಯದ ಜನಸಾಮಾನ್ಯರು ಹಾಗೂ ಬಡವರ ಪರವಾಗಿ ನಿಲ್ಲುವಂತ ಕೆಲಸವನ್ನು ಮಾಡಿದೆ. ಇದಕ್ಕೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಲು ದೃಢ ನಿರ್ಧಾರವನ್ನು ತೆಗೆದುಕೊಂಡು ನನ್ನನ್ನು ಪಕ್ಷದ ಚುನಾವಣಾ ಪ್ರಣಾಳಿಕಾ ಸಮಿತಿಗೆ ಅಧ್ಯಕ್ಷನನ್ನಾಗಿ ಮಾಡಿ ಶ್ರೀ ಸಾಮಾನ್ಯರು ಅನುಭವಿಸುತ್ತಿರುವ ನೋವು ಮತ್ತು ಸಂಕಷ್ಟಗಳಿಗೆ ಪರಿಹಾರ ನೀಡಲು ಮುಂದಾಗಿದೆ. “ಗೃಹ ಲಕ್ಷ್ಮೀ ” ಯೋಜನೆಯಡಿ ಪ್ರತಿ ಮನೆಯೊಡತಿಗೆ ಮಾಸಿಕ 2,000ರೂ.ಗಳು, ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್, 10 ಕೆ.ಜಿ. ಉಚಿತ ಅಕ್ಕಿ ಹಾಗೂ ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ ರೂ.3000ಗಳು ಮತ್ತು ಡಿಪ್ಲೊಮಾ ಓದಿದವರಿಗೆ ಮಾಸಿಕ ರೂ. 1,500ಗಳನ್ನು ಎರಡು ವರ್ಷಗಳ ವರೆಗೆ ನೀಡುವ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ಪರಮೇಶ್ವರ ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ನಂತರ ಮತ್ತು ಪರಮೇಶ್ವರ ತಲೆಗೆ ಕಲ್ಲೇಟು ಬಿದ್ದ ನಂತರ ಕಾಂಗ್ರೆಸ್ ಕಾರ್ಯಕರ್ತರಿಗೆ ಶಕ್ತಿಯ ಟಾನಿಕ್ ಸಿಕ್ಕಂತಾಗಿದ್ದು, ಈಗಾಗಲೇ ಚುನಾವಣೆಯ ಪ್ರಚಾರದ ಕಾವು ತಾರಕಕ್ಕೇರಿದೆ. ಇದಕ್ಕೆ ಇಂಬು ನೀಡುವಂತೆ ಹಳ್ಳಿಗಳಲ್ಲಿ ಪರಮೇಶ್ವರ ನಡೆಸುತ್ತಿರು ಪ್ರಚಾರದ ಕಾರ್ಯವೈಖರಿಯಿಂದ ಚುನಾವಣಾ ಕಾವು ಮತ್ತಷ್ಟು ಚುರಾಗಿದೆ.
ಇಂದು ಮಧ್ಯಾಹ್ನ ಬಿ.ಡಿ.ಪುರ ಮತ್ತುದೊಡ್ಡ ಸಾಗ್ಗೆರೆ ಪಂಚಾಯ್ತಿಯಲ್ಲಿ ನಡೆದ ಪ್ರಚಾರ ಸಭೆಗಳಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಪಾಲ್ಗೊಂಡು ಪಕ್ಷದ ಶಕ್ತಿ ಪ್ರದರ್ಶನ ಮಾಡಿದರು.
ಚಿಕ್ಕನಾಯಕನಹಳ್ಳಿ ಸಂಪ್ರದಾಯಕ ಕಂಬಳಿ ಹಾಕಿಕೊಂಡು ಮತಯಾತ್ರೆ: ಕಾಂಗ್ರೆಸ್ ಅಭ್ಯರ್ಥಿ ಡಾ.ಜಿ.ಪರಮೇಶ್ವರ ಚಿಕ್ಕನಾಯಕನಹಳ್ಳಿ ಗ್ರಾಮಕ್ಕೆ ಬರುತ್ತಿದ್ದಂತೆಯೆ ಊರಿನ ಕುರುಬ ಸಮುದಾಯದ ಮುಖಂಡರು ಸಾಂಪ್ರಾದಾಯಿಕ ಕಂಬಳಿ ನೀಡಿ ಸ್ವಾಗತಿಸಿದರು. ಅವರ ಗೌರವವನ್ನು ಸ್ವೀಕರಿಸಿದ ಡಾ.ಜಿ.ಪರಮೇಶ್ವರ ಅವರು ಕಂಬಳಿ ಹೊದ್ದುಕೊಂಡು ಇಡೀ ಗ್ರಾಮದಲ್ಲಿ ಹೆಜ್ಜೆಹಾಕಿ ಮತಯಾಚಿಸಿದರು.

ಸೋಂಪುರದಲ್ಲಿ ಅಜ್ಜಿಯ ಆತ್ಮೀಯ ಅಪ್ಪುಗೆ:
ತಲೆಗೆ ಪೆಟ್ಟುತಿಂದ ಪರಮೇಶ್ವರ ಅವರನ್ನು ನೋಡಲೇಬೆಕೆಂಬ ಹಂಬಲ ವ್ಯಕ್ತಪಡಿಸಿದ ಸೋಂಪುರದಲ್ಲಿನ ಹಿರಿಯ ಅಜ್ಜಿಯಂದರನ್ನು ಆತ್ಮೀಯ ಅಪ್ಪುಗೆ ನೀಡಿ, ಕುಶಲ ವಿಚಾರಿಸಿದರು. ಈ ಋಣಕ್ಕೆ ಬೆಲೆಕಟ್ಟಳಾದೀತೆ ಎಂದು ಪರಮೇಶ್ವರ ಹೇಳಿದಾಗ ಮಾನವಂತ ಮನಷ್ಯ ಮುಖ್ಯ. ನಿನ್ನ ಬಗ್ಗೆ ಈಡೀ ಊರು ಮಾತನಾಡುತ್ತಿದೆ. ಒಳ್ಳೆಯದಾಗಲಿ ಎಂದು ಹಾರೈಸಿದರು.
ಬೈಕ್ ರ‍್ಯಾಲಿ:
ಇದೇ ವೇಳೆ ಕೊಳಾ ನೀಲಗೊಂಡನಹಳ್ಳಿ ಮತ್ತು ಎಲೆರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯಕರ್ತರು ಬೈಕ್ ರ‍್ಯಾಲಿ ನಡೆಸಿದರು.
ಈ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ವಕ್ತಾರರಾದ ಮುರಳೀಧರ್ ಹಾಲಪ್ಪ, ಕರೋನದಂತ ಸಂಕಷ್ಟದ ಸಮಯ ಸೇರಿದಂತೆ 5 ವರ್ಷಗಳಲ್ಲಿ ಕ್ಷೇತ್ರದ ಮೂಲಮೂಲೆಯಲ್ಲಿ ಸುತ್ತಾಡಿ,ಜನರ ನೋವಿಗೆ, ಕೂಗಿಗೆ ಸ್ವಂದಿಸಿರುವ ಪರಮೇಶ್ವರ ಅವರು ಯಾವುದೇ ತಮ್ಮ ವಯಕ್ತಿಕ ಹಿಸಾಸಕ್ತಿಗೆ ಜನರನ್ನು ಬಳಸಿಕೊಳ್ಳದೆ ಕಾಯಕ ಮಾಡಿದ್ದಾರೆ. ಅವರ ಅಭಿವೃದ್ಧಿ ಕೆಲಸಗಳಿಗೆ ಕೂಲಿ ರೂಪದಲ್ಲಿ ತಮ್ಮ ಮತಗಳನ್ನು ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿದರು. ರಾಜ್ಯ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಪುಟ್ಟಸ್ವಾಮೀಗೌಡ, ನೀಲಗೊಂಡನಹಳಿ ಗ್ರಾಮ ಪಂಚಾಯತಿ ಸದಸ್ಯರಾದ ರಂಗಯ್ಯ, ಚಂದ್ರಶೇಖರಯ್ಯ, ಸಂಕೇತ್, ಕೃಷ್ಣಪ್ಪ, ಗೌರಮ್ಮ ಹನುಮಂತರಾಯಪ್ಪ, ಮುಖಂಡರುಗಳಾದ ವೇದಾಂಬ ನಟರಾಜು, ಸುಮಂತ್, ವೀರಣ್ಣ, ಮಂಜಣ್ಣ, ಅನಂತಕುಮಾರ್, ಪವನಕುಮಾರ್, ರಾಜಣ್ಣ, ಸೇರಿದಂತೆ ಹಲವು ಸ್ಥಳೀಯ ನಾಯಕರು ವೈಕ್ ರ‍್ಯಾಲಿಗೆ ಸಾಥ್ ನೀಡಿದರು.
ಮಹಿಳಾ ತಂಡ ಮತಯಾಚನೆ:
ಕೆಸ್ತೂರು ಪಂಚಾಯ್ತಿಯ ಗ್ರಾಮಗಳಲ್ಲಿ ಮೆಳೆಹಳ್ಳಿ ಎಪಿಎಂಸಿ ಮಾಜಿ ನಿರ್ದೇಸಕರ ಮುಂದಾಳತ್ವದಲ್ಲಿ ಪುಷ್ವಲತಾ,ರತ್ನಾ,ವಿಮಲಾ, ಲಲಿತಾ ಅವರನ್ನೊಳಗೊಂಡ ಕಾಂಗ್ರೆಸ್ ಮಹಿಳಾ ತಂಡ ಪರಮೇಸ್ವರ್ ಪರವಾಗಿ ಮತಯಾಚನೆಯಲ್ಲಿ ತೊಡಗಿದೆ.
ಪಕ್ಷಕ್ಕೆ ಸೇರ್ಪಡೆ:
ಅನ್ಯಪಕ್ಷಗಳಿಂದ ಕಾಂಗ್ರೆಸ್ ಸೇರ್ಪಡೆ ಮುಂದುವರಿದಿದ್ದು, ಇಂದು ಸೀಗೆಪಾಳ್ಯ ಗ್ರಾಮದ 15 ಮಂದಿ ಪ್ರಮುಖರು ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಯಾದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker