ಕುಣಿಗಲ್ : ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯನೋ ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸುವುದು ಅಷ್ಟೇ ಸತ್ಯ ಮತದಾರರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಡಾಕ್ಟರ್ ಎಚ್ ಡಿ ರಂಗನಾಥ್ ರವರಿಗೆ ಮತದಾನ ಮಾಡುವ ಮೂಲಕ ಮತ್ತೊಮ್ಮೆ ನಿಮ್ಮಗಳ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮನವಿ ಮಾಡಿದರು.
ಪಟ್ಟಣದ ಹುಚ್ಚು ಮಾಸ್ತಿ ಗೌಡ ಸರ್ಕಲ್ ನಲ್ಲಿ ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಡಾಕ್ಟರ್ ರಂಗನಾಥ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಲ್ಲ ಡಿಕೆ ಶಿವಕುಮಾರ್ ಎಂದು ತಿಳಿದು ಮತ ಹಾಕಬೇಕು. ನಮ್ಮ ಸರ್ಕಾರ ಇದ್ದಂತಹ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ ಡಿಕೆ ಸುರೇಶ್ ಅವರ ಏಳು ಕ್ಷೇತ್ರದಲ್ಲಿಯೂ ರೈತರಿಗೆ ಎಚ್ವಿಡಿಎಸ್ ಯೋಜನೆಯಲ್ಲಿ ಉಚಿತವಾಗಿ ರೈತರ ವಿದ್ಯುತ್ ಸಮಸ್ಯೆ ಬಗೆಹರಿಸಲು ವಿದ್ಯುತ್ ಪರಿವರ್ತಕವನ್ನು ಕೊಟ್ಟಿದ್ದೇವೆ ಡಾಕ್ಟರ್ ರಂಗನಾಥ್ ಕೋವಿಡ್ ಸಂದರ್ಭದಲ್ಲಿ ಮಾಡಿದಂತ ಸೇವೆಯನ್ನು ನೀವೇ ಕಣ್ಣಾರ ನೋಡಿದ್ದೀರಿ ಈ ಸಂದರ್ಭದಲ್ಲಿ ಕುಣಿಗಲ್ ಕ್ಷೇತ್ರದ ಯಾವ ರಾಜಕಾರಣಿಗಳು ಮನೆ ಬಿಟ್ಟು ಈಚೆ ಬರಲಿಲ್ಲ ನಾನು ನೀರಾವರಿ ಸಚಿವನಿದ್ದಾಗ ರೈತರ ನೀರಾವರಿ ಅನುಕೂಲವಾಗಲೆಂದು ಹೇಮಾವತಿ ಪ್ರತ್ಯೇಕ ಲಿಂಕೆನಾಲ್ಗೆ 640 ಕೋಟಿ ರೂಗಳನ್ನು ಮಂಜೂರು ಮಾಡಿಸಿದ್ದೆ ಅದೃಷ್ಟವಶಾತ್ ನಮ್ಮ ಸರ್ಕಾರ ಬಿದ್ದು ಹೋದ ನಂತರ ಬಿಜೆಪಿ ಸರ್ಕಾರ ಬಂದು ಇದನ್ನು ತಡೆಯಿತು ಆದರೂ ಇದನ್ನು ಬಿಡುವುದಿಲ್ಲ ನನಗೆ ಶಕ್ತಿ ನೀಡಿ ಇದನ್ನು ಮಾಡಿಯೇ ತಿರುತ್ತೇನೆ ಎಂದು ಭರವಸೆ ನೀಡಿದರು.
ಬಿಜೆಪಿ ಪ್ರಣಾಳಿಕೆ ಎಲ್ಲಾ ಸುಳ್ಳು ಹಿಂದೆ ಚುನಾವಣೆ ಸಮಯದಲ್ಲಿ ಪ್ರತಿಯೊಬ್ಬರ ಖಾತೆಗೆ 15ಲಕ್ಷ ಹಾಕುತ್ತೇವೆ ಎಂದು ಸುಳ್ಳು ಹೇಳಿ ಬಿಜೆಪಿಯವರು ಮತ ಪಡೆದರು ಆದರೆ ಹಣ ಹಾಕಲಿಲ್ಲ ಬಿಜೆಪಿ ನನ್ನನ್ನು ಕಟ್ಟಿ ಹಾಕಲು ತಿಹರ್ ಜೈಲಿಗೆ ಕಳುಹಿಸಿತು. ಆಗ ನೀವುಗಳು ದೇವಸ್ಥಾನಗಳಲ್ಲಿ ಜಪ ತಪ ಮಾಡಿದ ಹಿನ್ನೆಲೆಯಲ್ಲಿ ನಾನು ಜೈಲಿನಿಂದ ಈಚೆ ಬಂದೆ ನೀವುಗಳು ನನಗೆ ಶಕ್ತಿ ನೀಡಿ ನನ್ನ ಶಕ್ತಿ ಏನೆಂಬುದನ್ನು ತೋರಿಸುತ್ತೇನೆ ಎಂದ ಅವರು ರೈತರಿಗೆ ಅನುಕೂಲವಾಗಲೆಂದು ಪಾವಗಡ ಸಮೀಪ 15,000 ಎಕರೆಯಲ್ಲಿ 1,400 ಮೆಗಾ ವಾಟ್ ವಿದ್ಯುತ್ ಉತ್ಪಾದನೆಯಾಗುವ ಸೋಲಾರ್ ಪ್ಲಾಂಟ್ ಮಾಡಿರುವುದನ್ನು ನೀವುಗಳು ನೆನಪು ಮಾಡಿಕೊಳ್ಳಬೇಕು ಎಂದು ಹೇಳಿದರು.
ಇನ್ನು ಜನತಾದಳದ ಕುಮಾರಸ್ವಾಮಿಯನ್ನು ಬೆಂಬಲಿಸಿ ಮುಖ್ಯಮಂತ್ರಿ ಮಾಡಿದೆ ಆದರೆ ಅವರು ಕೂಡ ಅದನ್ನು ನೆನಪಿಸಿಕೊಳ್ಳಲಿಲ್ಲ, ರಾಜ್ಯದಲ್ಲಿ ಬಿಜೆಪಿ ಜನತಾದಳದವರು ಏನೇ ತಿಪ್ಪರ್ಲಾಗ ಹಾಕಿದರು ಬಿಜೆಪಿಯ 60 ಶಾಸಕರು ಗೆಲ್ಲುವುದೇ ಹೆಚ್ಚು, ಇನ್ನು ಜನತಾದಳಕ್ಕೆ ಭವಿಷ್ಯವಿಲ್ಲ ದಳ 20 ಶಾಸಕರು ಗೆದ್ದರೆ ಹೆಚ್ಚು ಎಂದು ಭವಿಷ್ಯ ನುಡಿದರು.
ರಾಜ್ಯದ ಮತದಾರ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡುತ್ತಾರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿ ಕಾಂಗ್ರೆಸ್ ಪಕ್ಷದ ಪ್ರನಾಳಿಕೆಯನ್ನು ಮತದಾರರ ಮುಂದಿಟ್ಟು ಮತದಾರ ಪ್ರಭುಗಳು ಯಾರ ಮಾತಿಗೂ ಕಿವಿಗೊಡದೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನಿಮ್ಮ ಸೇವಕನಾದ ಡಾಕ್ಟರ್ ರಂಗನಾಥ್ ರವರಿಗೆ ಮತ ನೀಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಅಭ್ಯರ್ಥಿ ಡಾಕ್ಟರ್ ರಂಗನಾಥ್ ಆಡಿಟರ್ ನಾಗರಾಜ್,
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣ ಗೌಡ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ವಿಶ್ವನಾಥ್, ಕೋಗಟ್ಟ ರಾಜಣ್ಣ, ಬೇಗೂರು ನಾರಾಯಣ, ಪುರಸಭೆ ಕಾಂಗ್ರೆಸ್ ಸದಸ್ಯರುಗಳು ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಶಂಕರ್ ಸಾವಿರಾರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.