ಕುಣಿಗಲ್ಜಿಲ್ಲೆತುಮಕೂರುರಾಜಕೀಯರಾಜ್ಯ

ಚುನಾವಣಾ ಕಣದಿಂದ ಹಿಂದೆ ಸರಿಯುವ ಮಾತೇ ಇಲ್ಲ : ಡಿ.ಕೆ.ಶಿವಕುಮಾರ್ ಸುಳ್ಳು ಸುದ್ದಿ ಹಬ್ಬಿಸಿ ಮತದಾರರನ್ನ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ : ಬಿ.ಬಿ ರಾಮಸ್ವಾಮಿಗೌಡ ಆರೋಪ

ಕುಣಿಗಲ್ : ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾನೆ ಎಂದು ಅಪಪ್ರಚಾರ ಮಾಡುತ್ತಿರುವವರ ಮನೆ ಹಾಳಾಗೋಗ್ಲಿ ಯಾವುದೇ ಕಾರಣಕ್ಕೂ ಚುನಾವಣೆ ಕಣದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ವಿಧಾನಸಭೆ ಚುನಾವಣೆಯ ಸ್ವತಂತ್ರ ಅಭ್ಯರ್ಥಿ ಮಾಜಿ ಶಾಸಕ ಬಿಬಿ ರಾಮಸ್ವಾಮಿಗೌಡ ಸ್ಪಷ್ಟಪಡಿಸಿದರು.

ಪಟ್ಟಣದ ನಮ್ಮ ಮನೆ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಕೆಪಿಸಿಸಿ ಅಧ್ಯಕ್ಷರು ಶನಿವಾರ ಕುಣಿಗಲ್ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ಬಿಬಿ ರಾಮಸ್ವಾಮಿಗೌಡರನ್ನು ಮೈಸೂರಿನಲ್ಲಿ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಂದೆ ಸಭೆ ನಡೆಸಿ ಮಾತನಾಡಿದ್ದೇವೆ ಬಿಬಿಆರ್ ನಮ್ಮ ಪರವಾಗಿ ಚುನಾವಣೆ ಮಾಡುತ್ತಾರೆ ಎಂದು ಸುಳ್ಳು ಸುದ್ದಿ ಎಬ್ಬಿಸುತ್ತಾ ತಾಲೂಕಿನ ಮತದಾರರನ್ನು ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ದಾರಿ ತಪ್ಪಿಸುತ್ತಿದ್ದಾರೆ ತಾಲೂಕಿನ ಮತದಾರರು ಈ ಗಾಳಿ ಮಾತಿಗೆ ಬೆರೆಗಾಗಬೇಡಿ ನಾನು ಕುಣಿಗಲ್ ವಿಧಾನಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ಈಗಾಗಲೇ ಮತದಾರರಲ್ಲಿ ಮತಯಾಚನೆ ಮಾಡುತ್ತಿದ್ದೇನೆ ಮತದಾರರು ನೀಡುವ ತೀರ್ಪಿಗೆ ನಾನು ಬದ್ಧನಾಗಿರುತ್ತೇನೆ ಎಂದು ಸ್ಪಷ್ಟಪಡಿಸಿದ ಅವರು ಡಿಕೆ ಬ್ರದರ್ಸ್
ತಾಲೂಕಿನ ಮತದಾರರನ್ನು ಹಣದಲ್ಲಿ ಕೊಂಡುಕೊಳ್ಳಲು ಮುಂದಾಗಿದ್ದಾರೆ ಮತದಾರರು ಇವರ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಇದಕ್ಕೆಲ್ಲ ಮತದಾನದ ದಿನದಂದು ತಕ್ಕ ಉತ್ತರ ನೀಡುತ್ತಾರೆ ನಮ್ಮ ಹಿರಿಯ ನಾಯಕರಾದ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆರವರು ಕೆಪಿಸಿಸಿ ಅಧ್ಯಕ್ಷರ ವರ್ತನೆಗೆ ಬೇಸತ್ತು ಕುಣಿಗಲ್ ವಿಧಾನಸಭಾ ಚುನಾವಣೆ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ತಲೆ ಹಾಕಿಲ್ಲ ಎಂದರೆ ಮತದಾರರು ಅರ್ಥಮಾಡಿಕೊಳ್ಳಬೇಕು ಇವರೇ ಅಲ್ಲದೆ ರಾಜ್ಯದ ಕಾಂಗ್ರೆಸ್ ಪಕ್ಷದ ಕೆಲವು ಹಿರಿಯ ಮುಖಂಡರುಗಳು ಕೆಪಿಸಿಸಿ ಅಧ್ಯಕ್ಷರ ವರ್ತನೆಗೆ ಬೇಸತ್ತಿದ್ದಾರೆ ಎಂದರು. ಬೆಂಗಳೂರಿಗೆ ಹೋಗಿ ನಂತರ ಮೈಸೂರಿಗೆ ಹೋಗಿದ್ದು ಸತ್ಯ ಆದರೆ ರಾಜ್ಯ ಕಾಂಗ್ರೆಸ್ ಪಕ್ಷದ ಚುನಾವಣೆ ಉಸ್ತುವಾರಿ ಸುರ್ಜೆವಾಲ ಮತ್ತು ಸಿದ್ದರಾಮಯ್ಯನವರ ಮುಂದೆ ಯಾವುದೇ ಮಾತುಕತೆ ನಡೆದಿಲ್ಲ ಇದೆಲ್ಲ ಕೆಪಿಸಿಸಿ ಅಧ್ಯಕ್ಷರ ಗಿಮಿಕ್ ರಾಜಕಾರಣ ಎಂದರು. ನಾನು 45 ವರ್ಷದಿಂದ ನಿಷ್ಕಲ್ಮಶವಾಗಿ ಕಾಂಗ್ರೆಸ್ ಪಕ್ಷಕ್ಕೆ ದುಡಿಯುತ್ತಿದ್ದೇನೆ ನಾನು ಈಗಲೂ ಪಕ್ಷದಲ್ಲಿ ಇದ್ದೇನೆ ತಾಲೂಕಿನಲ್ಲಿ ನಾನು ಎದುರಿಸಿದ ಚುನಾವಣೆಗಳಲ್ಲಿ ಡಿಕೆ ಬ್ರದರ್ಸ್ ಒಂದು ನಯಾ ಪೈಸೆ ಕೊಟ್ಟಿಲ್ಲ ಹಾಗೂ ನನ್ನ ಪರವಾಗಿ ಮತ ಕೇಳಿಲ್ಲ ಕೆಪಿಸಿಸಿ ಅಧ್ಯಕ್ಷರು
ಚುನಾವಣೆ ಸಂದರ್ಭದಲ್ಲಿ ಕೇವಲ ಟೈಮ್ ಬೀಯಿಂಗ್ ರಾಜಕಾರಣ ಮಾಡುವುದರಲ್ಲಿ ಬಹಳ ನಿಪುಣರು, ಇವರಿಗೆ ಜನರ, ಕಾಂಗ್ರೆಸ್ ಪಕ್ಷದ ಆಶೀರ್ವಾದವಿದ್ದರೆ ಮುಖ್ಯಮಂತ್ರಿಗಳಾಗಲಿ ಅದಕ್ಕೇನು ನಮಗೆ ಅಭ್ಯಂತರವಿಲ್ಲ ಆದರೂ ಕೆಪಿಸಿಸಿ ಅಧ್ಯಕ್ಷರು ನಮ್ಮನ್ನು ನಮ್ಮ ಪಾಡಿಗೆ ಬಿಟ್ಟುಬಿಡದೆ ತೇಜೋವಧೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ನಾವು ಯಾರ ತಲೆ ಮೇಲೂ ಕಾಲಿಟ್ಟು ಚುನಾವಣೆ ಮಾಡುತ್ತಿಲ್ಲ ನನಗೆ ನನ್ನ ಕ್ಷೇತ್ರದ ಮತದಾರರ ಮೇಲೆ, ತಾಲೂಕಿನ ಹಿರಿಯ ಕಾಂಗ್ರೆಸ್ ಮುಖಂಡರ ಮತ್ತು ನನ್ನ ಒಡನಾಡಿಗಳ ಬಗ್ಗೆ ನನಗೆ ಅಪಾರವಾದ ನಂಬಿಕೆ ಇದೆ ಅವರುಗಳು ನನಗೆ ಆಶೀರ್ವಾದ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ನನ್ನ ಒಡನಾಡಿಗಳನ್ನು ಒಳಗೊಂಡು ಮತದಾರರ ಮುಂದೆ ಹೋಗಿ ಪ್ರಾಮಾಣಿಕವಾಗಿ ಮತಯಾಚನೆ ಮಾಡುತ್ತಿದ್ದೇನೆ ಗೆಲ್ಲುವುದು, ಸೋಲುವುದು, ನಮ್ಮ ಕೈಯಲ್ಲಿಲ್ಲ ಮತದಾರ ತೀರ್ಮಾನಿಸುತ್ತಾನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗಿರೀಶ್, ಶಿವಣ್ಣಗೌಡ , ಒಳಗೊಂಡಂತೆ ಅನೇಕ ಬಿಬಿಆರ್ ಹಿತೈಷಿಗಳು ಉಪಸ್ಥಿತರಿದ್ದರು.

ವರದಿ: ರೇಣುಕಾ ಪ್ರಸಾದ್ 

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker