ಕೊರಟಗೆರೆ : ತ್ಯಾಗ, ಬಲಿದಾನಗಳಿಂದ ಮಹಾತ್ಮರು ಕಷ್ಟ ಪಟ್ಟು ಪಡೆದ ಸ್ವಾತಂತ್ರ್ಯ ಹಾಗೂ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನ ಉಳಿಸಲು ದೇಶದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಅವಶ್ಯಕತೆ ಇದ್ದು ಮತದಾರರು ಈ ಸತ್ಯವನ್ನು ಅರಿತು ಮತ ಚಲಾಯಿಸುವಂತೆ ಮಾಜಿ ಅಡ್ವಕೇಟ್ ಜನರಲ್ ಪ್ರೊಫೆಸರ್ ರವಿವರ್ಮ ಕುಮಾರ್ ತಿಳಿಸಿದರು.
ಅವರು ಪಟ್ಟಣದ ರಾಜೀವ್ ಭವನದಲ್ಲಿ ತುಮಕೂರು ಜಾಗೃತ ಮತದಾರರ ಬಳಗ, ಜನಪರ ಸಂಘಟನೆಗಳ ಒಕ್ಕೂಟ, ಜಾತ್ಯಾತೀತ ಯುವ ವೇದಿಕೆ ಏರ್ಪಡಿಸಿದ್ದ ಪ್ರತಿಕಾ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿ ಬಿಜೆಪಿ ಸರ್ಕಾರ ಎಡಗೈ ಸಮುದಾಯದವರಿಗೆ ಮೀಸಲಾತಿಯನ್ನು ನೀಡುವ ಬಗ್ಗೆ ಸುಳ್ಳು ಸುತ್ತೋಲೆಯೊಂದನ್ನು ಹೊರಡಿಸಿ ಜನರಿಗೆ ಮೋಸ ಮಾಡುತ್ತಿದ್ದಾರೆ, ಮುಸ್ಲಿಂ ಸಮುದಾಯಕ್ಕೆ 1898 ರಲ್ಲಿ ಕಳೆದ 150 ವರ್ಷಗಳಿಂದ ಇದ್ದತಂಹ ಶೇ.4 ರಷ್ಟು ಮೀಸಲಾತಿಯನ್ನು ತೆಗೆದು ಹಾಕುವ ಹುನ್ನಾರ ನೆಯುತ್ತಿದ್ದು ಬಿಜೆಪಿ ಸರ್ಕಾರವು ಮೀಸಲಾತಿ ಹೆಸರಿನಲ್ಲಿ ಸಮುದಾಯಗಳನ್ನು ಹೊಡೆದು ಸಂಘರ್ಷ ಸೃಷ್ಠಿಮಾಡಲು ಹೊರಟಿರುವುದು ಸರಿಯಿಲ್ಲ, ಬಹಳಷ್ಟು ಸಂಖ್ಯೆಯಲ್ಲಿ ಎಡಗೈ ಸಮುದಾಯದವರಿಗೆ ಶಿಫಾರಸ್ಸು ವೀಸಲಾತಿ ಪತ್ರ ಸಂವಿಧಾನ ಹೆಸರಿನಲ್ಲಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸುವಂತೆ ಸರ್ಕಾರ ಸುಳ್ಳು ಆದೇಶ ಹೊರಡಿಸಿ ಜನರಿಗೆ ಮೋಸಮಾಡಲು ಹೊರಟಿದೆ ಎಂದು ತಿಳಿಸಿದರು.
ದೇಶದಲ್ಲಿ ಪ್ರಧಾನಿ ಯಾಗಿರುವ ನರೇಂದ್ರಮೋದಿ ಕಳೆದ 9 ವರ್ಷಗಳಲ್ಲಿ ಲೋಕಸಭಾ ಸದಸ್ಯರನ್ನು ನೇರವಾಗಿ ಪ್ರಶ್ನೆಗಳು ಕೇಳಲು ಬಿಡದಂತಹ ವಾತಾವರಣ ಸೃಷ್ಠಿಸಿ ದ್ದಾರೆ, ಇಲ್ಲಿಯವರೆಗೂ ಒಂದು ಪತ್ರಿಕಾ ಗೋಷ್ಠಿ ನಡೆಸದ ಪ್ರಧಾನಿ ಎಂಬ ಬಿರುದು ಪಡೆದಿರುವ ಪ್ರಧಾನ ಮಂತ್ರಿಯಾಗಿದ್ದಾರೆ, ಇದೇ ರೀತಿ ವಾತಾವರಣ ಸೃಷ್ಠಿಯಾದರೆ ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷ ಬಲಿಷ್ಟವಾದರೆ ದೇಶದಲ್ಲಿ ಪ್ರಜಾತಂತ್ರವಾಗಲಿ, ಶಾಸಕಾಂಗವಾಗಲಿ, ಚುನಾವಣೆಯಾಗಲಿ ನ್ಯಾಯಾಂಗವಾಗಲಿ ಇಲ್ಲದೆ ಎಲ್ಲಾ ಸಮುದಾಯ ಗಳು ಸಂರ್ಘಷಣೆಗೆ ಒಳಗಾಗಬೇಕಾಗುತ್ತದೆ ಎಂದು ತಿಳಿಸಿದ ಅವರು ಭ್ರಷ್ಟ ಸರ್ಕಾರವನ್ನು ರಾಜ್ಯದಿಂದಲೇ ಓಡಿಸಿ ಸುಭದ್ರ ಸರ್ಕಾರಕ್ಕಾಗಿ ಮೇ 10 ರಂದು ನಡೆಯುವ ಮತದಾನದಲ್ಲಿ ಎಚ್ಚರಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸುವಂತೆ ತಿಳಿಸಿದರು.
ಲೇಖಕ ನಟರಾಜು ಮಾತನಾಡಿ ರಾಜ್ಯದಲ್ಲಿ ನಮ್ಮ ಸಂಘಟನೆಯ ಮೂಲಕ ಪ್ರಜಾತಂತ್ರದ ರಕ್ಷಣೆಗಾಗಿ ಹಾಗೂ ಮನಗೆ ಸಂವಿಧಾನ ಬದ್ದವಾಗಿ ದೊರೆಯಬೇಕಾದ ಹಕ್ಕುಗಳ ರಕ್ಷಣೆಗಾಗಿ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ, ಬಿಜೆಪಿ ಸರ್ಕಾರ ಪ್ರಜಾ ಶೋಷಣೆ ನಡೆಸುತ್ತಿದ್ದು, ಆರ್ಥಿಕ ವ್ಯವಸ್ಥೆ ಮಾರಕವಗಿದೆ, ಇದಲ್ಲದೆ ಸಂವಿಧಾನ ಸ್ವಾಯತ್ತತೆ ನಾಶವಾಗಿದೆ, ಶ್ರೀಸಾಮಾನ್ಯನ ಬದುಕು ಭಯದ ವಾತಾವರಣದಲ್ಲಿದೆ ಎಂದ ಅವರು ಬಿಜೆಪಿ ಸರ್ಕಾರದಿಂದ ಜನರ ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದು ನಾವುಗಳೇಲ್ಲ ರೂ ಸೇರಿ ಕೋಮುವಾದಿ ಪಕ್ಷವನ್ನು ನೇರವಾಗಿ ಎದುರಿಸಬೇಕು, ಬಿಜೆಪಿ ಪಕ್ಷವನ್ನು ಕರ್ನಾಟಕ ಮುಕ್ತಗೊಳಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೈತಮುಖಂಡ ಎನ್.ಜಿ.ರಾಮಚಂದ್ರ, ಪ್ರಗತಿಪರ ಸಂಘಟನೆಗಳ ಮುಖಂಡ ಡಾ.ಬಸವರಾಜು, ಪಾವನ ಆಸ್ಪತ್ರೆ ನಿರ್ದೇಶಕ ಡಾ.ಮುರಳೀಧರ್ ಬೆಲ್ಲದ ಮಡು, ಸಂಚಾಲಕ ಡಾ.ರಂಗಸ್ವಾಮಿ, ವಕೀಲ ಮಾರುತಿಪ್ರಸಾದ್, ಕಾಂಗ್ರೆಸ್ ಮುಖಂಡ ಹಾಗೂ ಉದ್ಯಮಿ ವೆಂಕಟೇಶ್, ತುಂಭಾಡಿ ತಿಮ್ಮಜ್ಜ, ಮಹಿಳಾ ಕಾಂಗ್ರೆಸ್‌ನ ಮಂಜುಳಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.